ಬೆಂಗಳೂರು: ಕಾಮಾಲೆ ಕಣ್ಣಿನವರಿಗೆ ಜಗತ್ತೆಲ್ಲ ಹಳದಿ ಎನ್ನುವಂತೆ, ಕಳೆದ ಎರಡು ದಿನಗಳ ಹಿಂದೆ ಖಾಸಗಿ ಸುದ್ದಿವಾಹಿನಿವೊಂದು 57 ವರ್ಷದ ಪ್ರಾಯದ ಗಡಿಯಾರ ವ್ಯಾಪಾರಿಯನ್ನು ಶಂಕಿತ ಉಗ್ರನೆಂದು ಬಿಬಿಂಸುವ ಮೂಲಕ ಒಬ್ಬ ಅಮಾಯಕ ವ್ಯಕ್ತಿಯನ್ನು ಉಗ್ರನಾಗಿ ನೋಡುವಂತಹ ಸನ್ನಿವೇಶ ನಿರ್ಮಾಣ ಮಾಡಿತ್ತು.
ಎರಡು ದಿನಗಳ ಹಿಂದೆ ರಾಜಧಾನಿ ಬೆಂಗಳೂರಿನ ಮೆಟ್ರೊ ನಿಲ್ದಾಣದಲ್ಲಿ ಕಳೆದ 20 ವರ್ಷಗಳಿಂದ ಗಡಿಯಾರ ವ್ಯಾಪಾರಿಯಾಗಿದ ರಿಯಾಜ್ ಅಹ್ಮದ್ ಎನ್ನುವ ಹಿರಿಯ ವ್ಯಕ್ತಿಯನ್ನು ಕೆಲ ಸುದ್ದಿವಾಹಿನಿಯ ಕೀಡಗೇಡಿ ವರದಿಗಾರರು ಆ ವ್ಯಕ್ತಿಯನ್ನು ಶಂಕಿತ ಉಗ್ರ ಎಂದು ವ್ಯಪಕ ವಂದತಿಗಳನ್ನು ಹರಡಿಸುವ ಮೂಲಕ ನಗರದಲ್ಲಿ ಆತಂಕ ಸೃಷ್ಟಿಸುವ ವಾತವರ್ಣ ನಿರ್ಮಾಣ ಮಾಡಿದ್ದರು.
ನಮ್ಮ ಮೆಟ್ರೊ ಸಿಬ್ಬಂದಿ ವ್ಯಾಪಾರಿ ರಿಯಾಜ್ ಅಹ್ಮದ್ ಅವರ ಓಡಾಟ ನಡೆಸಿರುವ ಸಿಸಿಟಿವಿ ದೃಶ್ಯಗಳನ್ನು ಕಾನೂನು ಬಾಹಿರ ಹಂಚಿಕೆ ಮಾಡಿದ್ದು, ಸಿಸಿಟಿವಿ ದೃಶ್ಯಾವಳಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ತಪ್ಪಿತಸ್ಥ ಮೆಟ್ರೋ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಂಡು ಅವರಿಗೆ ಅಮಾನತು ಮಾಡಿ, ಹಾಗೂ ಸುಳ್ಳು ಸುದ್ದಿ ಪ್ರಸಾರ ಮಾಡಿದ ಸುದ್ದಿವಾಹಿನಗಳ ವಿರುದ್ಧ ಕ್ರಮ ಕೈ ಗೊಳಬೇಕಂದು ಕರ್ನಾಟಕ ರಕ್ಷಣಾ ವೇದಿಕೆ ಕ್ರಾಂತಿ ಸೇನೆಯ ಮಹ್ಮದ್ ಸೈಫುಲ್ಲಾ ಅವರು ಆಗ್ರಹಿಸಿದ್ದಾರೆ.
ಮೇ 7 ಮಂಗಳವಾರ ದಂದು ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ಮೆಜಿಸ್ಟಿಕ್ ಮೆಟ್ರೊ ರೈಲ್ವೆ ನಿಲ್ದಾಣಕ್ಕೆ ಹೋಗಿ, ಅಲ್ಲಿಂದ ಗಂಗೊಂಡನಹಳ್ಳಿಯ ಮನೆಗೆ ತೆರೆಳಿದೆ, ಆದರೆ ಈ ಸಂದರ್ಭದ ಮೆಟ್ರೊ ಸಿಬ್ಬಂದಿಗಳಿಂದ ಕೆಲ ಸುದ್ದಿವಾಹಿನಿಗಳು ಈ ನನ್ನ ವಿಡಿಯೋ ಪುಟೇಜ್ ನ್ನು ಬಳಸಿಕೊಂಡು ನನ್ನಗೆ ಶಂಕಿತ ಉಗ್ರನೆಂದು ಪಟ್ಟ ಕಟ್ಟಿ ಸುದ್ದಿ ಪ್ರಸಾರ ಮಾಡಿದ್ದರಿಂದ ನನ್ನನ್ನು ನೋಡಿದವರೆಲ್ಲರು ದೇಶದ್ರೋಹಿಯಂತೆ ಅನುಮಾನದಿಂದ ನೋಡಲಾರಂಬಿಸಿದ್ದಾರೆಂದು ರಿಯಾಜ್ ಅಹ್ಮದ್ ದುಃಖ ವ್ಯಕ್ತಪಡಿಸಿದ್ದಾರೆ.
ನಾನು ಕಳೆದ 20 ವರ್ಷಗಳಿಂದ ಮೆಜೆಸ್ಟಿಕ್ ವ್ಯಾಪ್ತಿಯಲ್ಲಿ ಗಡಿಯಾರ್ ರಿಪೇರಿ ಮಾಡಿಕೊಂಡು ಬದುಕು ಕಟ್ಟಿಕೊಳುತ್ತಿದೇನೆ. ನನ್ನ ವ್ಯಾಪಾರದ ಕುರಿತು ಬಿಬಿಎಂಪಿ ಪರವಾನಿಯೂ ನೀಡಿದೆ ಎಂದು ಹೇಳುತ ನಾನು ಇಷ್ಟು ದಿನ ಸ್ವಾಭಿಮಾನದಿಂದ ಬದುಕುತಿದ ನನ್ನಗೆ ಸಮಾಜದ ದೃಷ್ಠಿಯಲ್ಲಿ ದೇಶದ್ರೋಹಿಯಾಗಿ ಕಾಣುವ ರೀತಿ ಮಾಡಿದ್ದಾರೆಂದು ದುಃಖ ಹಾಗೂ ಅಸಾಯಕತೆ ತೊಡಿಕೊಂಡರು.
ಕೆಲ ಖಾಸಗಿ ಸುದ್ದಿವಾಹಿನಿಗಳಿಂದ ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಸರಾ ಮಾಡಿರುವುದರಿಂದ ನನ್ನಗೆ ನೋವುಂಟಾಗಿದಲ್ಲದೇ, ಸ್ವಾಭಿಮಾನಕ್ಕೂ ಧಕ್ಕೆ ತಂದಿದ, ಸುದ್ದಿವಾಹಿನಗಳ ವಿರುದ್ಧ ಕ್ರಮ ಕೈಗೊಳಲು ಉಪ್ಪಾರಪೇಟ್ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳಲು, ಮನವಿ ಮಾಡಿದೇನೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.