ಸುರಪುರ: ವಿದ್ಯಾರ್ಥಿಗಳಾದವರು ಬೇರಾವ ವಿಷಯಗಳ ಕಡೆಗೆ ಗಮನ ಕೊಡದೆ ಓದಿನೆಡೆಗೆ ಇರಲಿ,ಏಕಾಗ್ರತೆಯ ಓದಿನಿಂದ ನಿಮಗೆ ಯಶಸ್ಸು ದೊರೆಯಲಿದೆ ಎಂದು ತಾಲೂಕು ಸಮಾಜ ಕಲ್ಯಾಈ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ ಹೇಳಿದರು.
ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪರೀಕ್ಷೆಗಳ ಪೂರ್ವ ಸಿಧ್ಧತಾ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ,ಪರೀಕ್ಷೆಯ ಬಗ್ಗೆ ಯಾವುದೆ ಭಯ ಬೇಡ,ನೀವು ಪಠ್ಯವನ್ನು ಸರಿಯಾಗಿ ಓದಿ,ಇಂದಿನ ಪೈಪೋಟಿ ಯುಗದಲ್ಲಿ ಓದು ತುಂಬಾ ಮುಖ್ಯವಾಗಿದೆ.ಉತ್ತಮವಾದ ಓದಿನಿಂದ ಬದುಕು ರೂಪಿಸಿಕೊಳ್ಳಬಹುದು ಎಂದರು.
ಮುಖ್ಯತಿಥಿಗಳಾಗಿ ಭಾಗವಹಿಸಿದ್ದ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಪ್ರಾಚಾರ್ಯ ದೇವು ಕನ್ನೆಳ್ಳಿ ಮಾತನಾಡಿ,ವರ್ಷವಿಡೀ ಓದಿದ್ದನ್ನು ಕೇವಲ ಮೂರು ಗಂಟೆಗಳ ಪರೀಕ್ಷೆಯಲ್ಲಿ ಅದನ್ನು ಸಾಬೀತುಪಡಿಸುವ ಉತ್ತಮ ಅವಕಾಶವೇ ಪರೀಕ್ಷೆ ಎಂಬುದು.ಇದರ ಬಗ್ಗೆ ವಿದ್ಯಾರ್ಥಿಗಳು ಚಿಂತಿತರಾಗದೆ ಸರಿಯಾಗಿ ಅಭ್ಯಾಸ ಮಾಡಿ ಅದನ್ನೆ ಪರೀಕ್ಷೆಯಲ್ಲಿ ಬರೆಯುವ ಮೂಲಕ ಯಶಸ್ಸು ನಿಮ್ಮದಾಗಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ಸಂಪನ್ಮೂಲ ಶಿಕ್ಷಕರಾಗಿ ಭಾಗವಹಿಸಿದ್ದ ಮುರಾರ್ಜಿ ದೇಸಾಯಿ ಶಾಲೆಯ ಪ್ರಾಚಾರ್ಯ ಶರಣು ಸಜ್ಜನ್,ಅಶೋಕ ನೀಲಗಾರ,ರಾಯಪ್ಪ ಹಾಗು ಶ್ರೀಶೈಲ್ ತಳವಾರವರು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಬಗ್ಗೆ ಹಾಗು ಉತ್ತರ ಬಿಡಿಸುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ ಇಬ್ರಾಹಿಂ ಸಾಬ್,ನಿಲಯ ಪಾಲಕರುಗಳಾದ ಬಸವರಾಜ ಸಜ್ಜನ್,ಪೀರಸಾಬ್ ಗೋಳ,ರಮೇಶ ಮುಂಡರಗಿ, ಚಂದ್ರಕಲಾ, ಗೀತಾರಾಣಿ, ಸುನೀಲ್ ಪಂಚಾಂಗಮಠ,ನಾಗಮಣಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸೋಮಶೇಖರ ನಾಯಕ ನಿರೂಪಿಸಿದರು,ಇಬ್ರಾಹಿಂ ತಳಗಡೆ ಸ್ವಾಗತಿಸಿ ವಂದಿಸಿದರು.