ಶಹಾಬಾದ: ಕರ್ನಾಟಕ ಪ್ರಾಂತ ರೈತ ಸಂಘದಿಂದ ಧರಣಿ

0
334

ಶಹಾಬಾದ: ಹೊನಗುಂಟಾ ಗ್ರಾಪಂಯ ಕ್ಲರ್ಕ್ ಮತ್ತು ಡಾಟಾ ಎಂಟ್ರಿ ಆಪರೇಟರ್ ಪ್ರಕಾಶ ಕಾರೋಳ್ಳಿ ಅವರನ್ನು ವಿನಾಃ ಕಾರಣ ಕೆಲಸದಿಂದ ತೆಗೆದು ಹಾಕುವ ಹುನ್ನಾರ ನಡೆಯುತ್ತಿದ್ದು, ಕೂಡಲೇ ಅವರನ್ನು ಸೇವೆಯಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಜಿಲ್ಲಾ ಹಾಗೂ ತಾಲೂಕಾ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಹೊನಗುಂಟಾ ಗ್ರಾಮಸ್ಥರಿಂದ ಗ್ರಾಪಂ ಮುಂಭಾಗದಲ್ಲಿ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಜಿಲ್ಲಾ ಖಜಾಂಚಿ ಶಿವಾನಂದ, ಸುಮಾರು ೧೩ ವರ್ಷಗಳಿಂದ ಕ್ಲರ್ಕ್ ಮತ್ತು ಡಾಟಾ ಎಂಟ್ರಿ ಆಪರೇಟರ್ ಆಗಿ ಪ್ರಕಾಶ ಕಾರೋಳ್ಳಿ ಕಾರ್ಯನಿರ್ವಹಿಸುತ್ತಿದ್ದಾನೆ. ಆದರೆ ಅವರನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ಅವರು ವಿನಾಃ ಕಾರಣ ಕಿರುಕುಳ ನೀಡುತ್ತಿದ್ದಾರೆ.

Contact Your\'s Advertisement; 9902492681

ಈ ಹಿಂದೆ ಪಂಚಾಯತರಾಜ್ ಇಲಾಖೆಯ ನಿಯಮಗಳನ್ನು ಲಕ್ಷ್ಮಣ ಶೃಂಗೇರಿ ಗಾಳಿಗೆ ತೂರಿ ಹೊನಗುಂಟಾ ಗ್ರಾಪಂ ಇಂದ ತೊನಸನಹಳ್ಳಿ(ಎಸ್) ಗ್ರಾಪಂಗೆ ಪ್ರಕಾಶ ಅವರನ್ನು ವರ್ಗಾವಣೆ ಮಾಡಿದರು. ಮತ್ತೆ ಹೊನಗುಂಟಾ ಗ್ರಾಪಂ ಡಾಟಾ ಎಂಟ್ರಿ ಆಪರೇಟರ್ ಅವರನ್ನು ತೊನಸನಹಳ್ಳಿ(ಎಸ್) ಗ್ರಾಪಂಗೆ ವರ್ಗಾವಣೆ ಮಾಡಿದರು. ಆದರೆ ಪ್ರಕಾಶನನ್ನು ವರ್ಗಾವಣೆ ಮಾಡದೇ ಅವರನ್ನು ಅತಂತ್ರ ಸ್ಥಿತಿಯಲ್ಲಿಟ್ಟು ಕಿರುಕುಳ ನೀಡುತ್ತಿದ್ದಾರೆ.ಈ ಕಡೆ ಸಂಬಳವಿಲ್ಲ ಮತ್ತು ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಹೋಗಿದ್ದಾನೆ.ಬದುಕು ನಿರ್ವಹಣೆ ತುಂಬಾ ಕಷ್ಟದಾಯಕವಾಗಿದೆ.ಈಗ ಅಧಿಕಾರಿ ಹಣದ ಆಸೆಗೆ ಬಲಿಯಾಗಿ ಬೇರೆಯವರನ್ನು ನೇಮಕ ಮಾಡಲು ಹೊರಟಿದ್ದಾರೆ.ಕೂಡಲೇ ಪ್ರಕಾಶ ಕಾರೋಳ್ಳ ಅವರನ್ನು ಸೇವೆಯಲ್ಲಿ ಮುಂದುವರೆಸಬೇಕೆಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾಣ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಮಾತನಾಡಿ, ಹಣದ ಆಸೆಗೆ ಅಧಿಕಾರಿಯೊಬ್ಬ ಈ ರೀತಿಯ ಕಾರ್ಯ ಮಾಡುತ್ತಿದ್ದಾರೆ. ನೌಕರರನ್ನು ವರ್ಗಾವಣೆ ಮಾಡಲು ಪಂಚಾಯತರಾಜ್ ಇಲಾಖೆಯಜ್ಯಾವ ಕಾಯ್ದೆಯಲ್ಲಿದೆ.ಅಧಿಕಾರದ ದುರುಪಯೋಗ ಪಡಿಸಿಕೊಂಡು ವಿನಾಃ ಕಾರಣ ತೊಂದರೆಕೊಡುತ್ತಿದ್ದಾರೆ. ಪ್ರಕಾಶನನ್ನು ಮುಂದುವರೆಸದಿದ್ದಲ್ಲಿ ಹೋರಾಟ ಮುಂದುವರಿಯುವುದು ಎಂದು ಹೇಳಿದರು.

ಧರಣಿ ಸ್ಥಳಕ್ಕೆ ಬೇಟಿ ನೀಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ಪ್ರತಿಭಟನಾಕಾರರಿಗೆ ಮನವೊಲಿಸಲು ಪ್ರಯತ್ನಸಿದರು.ಆದರೆ ಪ್ರತಿಭಟನಾಕಾರರು ನಿವೇ ಮಾಡಿದ ಕುತಂತ್ರದಿಂದ ಈ ಸಮಸ್ಯೆ ಉಂಟಾಗಿದೆ.ಕೂಡಲೇ ಮುಂದುವರೆಸಲು ಸೂಚಿಸಿದರು.ಆಗ ಶೃಂಗೇರಿ ಅವರು ಆದಷ್ಟು ಬೇಗನೆ ತೆಗದುಕೊಳ್ಳಲಾಗುವುದೆಂದು ಹೇಳಿದರು.ಮೊದಲು ಲಿಖಿತ ರೂಪದಲ್ಲಿ ಬರೆದುಕೊಡಿ.ಇಲ್ಲದಿದ್ದರೇ ಧರಣಿ ನಿರಂತರವಾಗಿ ಮುಂದುವರೆಯುವುದು ಎಂದಾಗ ಏನ್ನನ್ನು ಹೇಳದೇ ಅಲ್ಲಿಂದ ಅಧಿಕಾರಿ ತೆರಳಿದರು.

ದಸಂಸ ತಾಲೂಕಾಧ್ಯಕ್ಷ ಶಿವರುದ್ರ ಗಿರೇನೂರ್,ಕರವೇ ಅಧ್ಯಕ್ಷ ವಿಶ್ವರಾಜ ಫಿರೋಜಬಾದ,ವೀರಯ್ಯಸ್ವಾಮಿ ತರನಳ್ಳಿ, ಸುರೇಶ ಕಟ್ಟಿಮನಿ, ತಾಲೂಕಾ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಕಾರೋಳ್ಳಿ, ಸಿದ್ದು ಖಣದಾಳ, ಶಿವಕುಮಾರ ತಳವಾರ, ರವಿ ಸಣತಮ್,ಮರಲಿಂಗ ಗಂಗಭೋ, ಶಿವಲಿಂಗಪ್ಪ ಶೀಲವಂತ,ಮಾಣಿಕರಾವ, ಶಿವು ಮಾಲಗತ್ತಿ, ರಾಯಪ್ಪ ಹುರಮುಂಜಿ, ರಾಜು ಆಡಿನ್,ದೇವೆಂದ್ರ ಕಾರೋಳ್ಳಿ, ಶಿವಶರಣ ಕೊಡಸಾ, ಬಲಭೀಮ ಕಾರೋಳ್ಳಿ ಗ್ರಾಮಸ್ಥರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here