ವಿಮಾನ ನಿಲ್ದಾಣದ 10 ಕಿ.ಮೀ. ವ್ಯಾಪ್ತಿಯಲ್ಲಿ ತ್ಯಾಜ್ಯ ಸುರಿಯುವಂತಿಲ್ಲ

0
57

ಕಲಬುರಗಿ: ಹಕ್ಕಿಗಳ ಚಲನ-ವಲನದಿಂದ ವಿಮಾನಗಳ ಹಾರಾಟಕ್ಕೆ ತೊಂದರೆಯಾಗುವುದರಿಂದ ಕಲಬುರಗಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ ೧೦ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಸಾಯಿಖಾನೆ (ಪ್ರಾಣಿವಧೆ ಸ್ಥಳ) ಗಳ ತ್ಯಾಜ್ಯ ಸೇರಿದಂತೆ ಆಹಾರ ಪದಾರ್ಥಗಳ ತ್ಯಾಜ್ಯಗಳನ್ನು ಸುರಿಯುವಂತಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಬಿ.ಶರತ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನಯಾನ ಕಾಯ್ದೆ ೧೯೭೩ ನಿಯಮ ೯೧ ಭಾಗ ೧೧ರಲ್ಲಿ ತಿಳಿಸಿರುವಂತೆ ೧೦ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಸಾಯಿಖಾನೆಗಳ ತ್ಯಾಜ್ಯ ಸೇರಿದಂತೆ ಯಾವುದೇ ರೀತಿಯ ತ್ಯಾಜ್ಯ ಸುರಿಯುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Contact Your\'s Advertisement; 9902492681

ಈ ಸಂಬಂಧ ವಿಮಾನ ನಿಲ್ದಾಣದಲ್ಲಿ ನಿನ್ನೆ ಸಭೆ ನಡೆಸಿ, ಗ್ರಾಮ ಪಂಚಾಯ್ತಿ ಹಾಗೂ ಆರೋಗ್ಯ ಇಲಾಖೆಗಳಿಗೆ ಈ ಕುರಿತು ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ತ್ಯಾಜ್ಯ ಸುರಿಯುವಂತಹ ಅಂಗಡಿ ಮಾಲೀಕರಿಗೆ ನೋಟೀಸು ಕೊಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಹಾಗೆಯೇ ರೈತರು ಕೂಡ ತಮ್ಮ ಹೊಲಗಳಲ್ಲಿ ತೊಗರಿ ಕಡ್ಡಿಗಳನ್ನು ವಿಮಾನನಿಲ್ದಾಣದ ೧೦ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸುಡುವುದನ್ನು ನಿಲ್ಲಿಸಬೇಕು. ಸುಡುವುದರಿಂದ ಹೊಗೆ ದಟ್ಟೈಸಿ, ವಿಮಾನ ಸಂಚಾರಕ್ಕೆ ತೊಂದರೆಮಾಗಲಿದೆ ಎಂದು ಅವರು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here