ಸ್ವಾತಂತ್ರ್ಯಕ್ಕಾಗಿ ರಾಜಿಯಿಲ್ಲದೇ ಹೋರಾಡಿದ ಅಪ್ರತಿಮ ಕ್ರಾಂತಿಕಾರಿ ಶಹೀದ್ ಭಗತ್‌ಸಿಂಗ್‌

1
26

ನಿಮ್ಮಂತೆ ದುಡಿದು ನಿಮ್ಮಂತೆ ಮಡಿದು ನಿಮ್ಮಂತೆ ಬದುಕಬೇಕು ಭಗತ್‌ಸಿಂಗ್ ನಿಮ್ಮ ಸಿಂಹವಾಣಿ ಜನರಲ್ಲಿ ಧ್ವನಿಸಬೇಕು ಎಂಬ ಕವಿವಾಣಿ ಮೂಲಕ ಕ್ರಾಂತಿಕಾರಿ ಶಹೀದ್ ಭಗತಸಿಂಗ್‌ರವರ ಆದರ್ಶ ವ್ಯಕ್ತಿತ್ವ, ತ್ಯಾಗ, ಬಲಿದಾನ, ರಾಜಿರಹಿತ ಹೋರಾಟ,ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರೇರಣೆ ಸ್ಪೂರ್ತಿಯೊಂದಿಗೆ ಕೋಟ್ಯಾಂತರ ಯುವಜನರಲ್ಲಿ ಮತ್ತೆ ಮತ್ತೆ ನೆನಪಾಗುತ್ತಾರೆ. ೧೯೦೭ ಸೆಷ್ಟೆಂಬರ ೨೮ ರಂದು ಪ್ರಸ್ತುತ ಪಾಕಿಸ್ತಾನದಲ್ಲಿರುವ ಬಂಗಾ ಎಂಬ ಹಳ್ಳಿಯಲ್ಲಿ ತಂದೆ ಕಿಶನಸಿಂಗ್ ತಾಯಿ ವಿದ್ಯಾವತಿಯೆಂಬ ಮಗನಾಗಿ ಜನಿಸಿದರು. ಬಾಲ್ಯದಲ್ಲಿಯೇ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ತೊರೆದು ದೇಶಕ್ಕಾಗಿ ಹೋರಾಟ, ತ್ಯಾಗ ಬಲಿದಾನಕ್ಕೆ ಅಂಜದೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರೀಟಿ?? ಸಾಮ್ರಾಜ್ಯಶಾಹಿಗಳ ಎದೆ ನಡುಗಿಸಿದ ಮಹಾನ್ ವ್ಯಕ್ತಿಯೇ ಭಗತಸಿಂಗ್.

ಶತ ಶತಮಾನಗಳೂ ಕಳೆದರೂ ಕೂಡಾ ಶಹೀದ್ ಭಗತ್‌ಸಿಂಗ್ ಎನ್ನುವ ಹೆಸರು ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಸ್ಪೂರ್ತಿಯ ಸೆಲೆಯಾಗಿ ನಿಲ್ಲುತ್ತಾರೆ. ಆದರೆ ಮಾಧ್ಯಮಗಳು ಮತ್ತು ಸರಕಾರಗಳು , ಪಠ್ಯಪುಸ್ತಕದಲ್ಲಿ ಭಗತರ ನೆನಪು, ತ್ಯಾಗ, ಬಲಿದಾನ ಬಗ್ಗೆ ತಿಳಿಸುವಲ್ಲಿ ವಿಫಲವಾದರೂ ಕೂಡಾ ದಿನದಿಂದ ದಿನಕ್ಕೆ ಅಸಂಖ್ಯಾತ ಎಳೆಯ ಹೃದಯಗಳಲ್ಲಿ ಆತನ ಬದುಕು ಮತ್ತು ಚಿಂತನೆ ಇನ್ನೂ ಹೆಚ್ಚು ಜನಪ್ರೀಯತೆ ಪಡೆಯುತ್ತಿದೆ. ಸಹಜವಾಗಿ ನಾನು ಬದುಕಬೇಕೆಂದು ಆಶಿಸುತ್ತೇನೆ ನಾನಿದನ್ನು ಮರೆಮಾಚಲು ಬಯಸುವುದಿಲ. ಆದರೆ ಅದು ಒಂದು ಷರತ್ತಿಗೆ ಒಳಪಟ್ಟಿದೆ. ಅದೆಂದರೆ ನಾನು ನನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ತಂದುಕೊಂಡು ಬದುಕಲು ಇಚ್ಛಿಸುವುದಿಲ್ಲ ಎಂದು ಭಗತಸಿಂಗ್ ?ವರು ಹೇಳಿದರು.

Contact Your\'s Advertisement; 9902492681

೧೯೧೯ ಎಪ್ರಿಲ್ ೧೩ ರಂದು ಅಮೃತಸರದ ಜಲಿಯನ್ ವಾಲಾಭಾಗ ಹತ್ಯಾಕಾಂಡದಿಂದ ಮನನೊಂದು ಅಲ್ಲಿ ನಡೆದ ಹತ್ಯಾಕಾಂಡದಲ್ಲಿ ಸಾವಿರಾರು ಜನರ ಮರಣ ಹೋಮಕ್ಕೆ ಮರುಗಿ, ಕಾರಣವಾದ ಆಂಗ್ಲ ಅಧಿಕಾರಿ ಡಯರನ ಮತ್ತು ಬ್ರೀಟಿಷ್ ಆಡಳಿತದ ವಿರುದ್ದ ಸಿಡಿದ್ದೆದ್ದು, ಸಿಂಹವಾದ ಭಗತ್‌ಸಿಂ??ರು ಅಲ್ಲಿಯ ರಕ್ತ ಮೆತ್ತಿದ ಮಣ್ಣನೆತ್ತಿಕೊಂಡು ತಿಲಕದಂತೆ ಹಣೆಗೆ ಹಚ್ಚಿಕೊಂಡಿದ್ದರು. ಹಾಗೆಯೇ ಆ ಘಟನೆಗೆ ಕಾರಣವಾದ ಬ್ರೀಟಿಷ ಆಡಳಿತ ಮತ್ತು ಅಧಿಕಾರಿಗಳ ನೀಚತನದ ವಿರುದ್ದ ಸಿಡಿದೆದ್ದು, ಅದಕ್ಕೆ ಪ್ರತಿಕಾರವಾಗಿ ಜನರಲ್ ಡಯಾರನನ್ನು ಗುಂಡಿಟ್ಟು ಕೊಲ್ಲದೇ ಬಿಡುವುದಿಲ್ಲ ಮತ್ತು ಭಾರತದಿಂದ ಬ್ರೀಟಿಷರನ್ನು ಹೊಡೆದೊಡಿಸದೇ ಬಿಡುವುದಿಲ್ಲವೆಂಬ ಪ್ರತಿಜ್ಞೆ ಸ್ವಿಕರಿಸಿದ್ದರು.

೧೯೨೧ ರಲ್ಲಿ ಲಾಹೋರಿನ ಬಿ.ಎ.ವ್ಹಿ. ಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದಾಗ ಅಸಹಕಾರ ಚಳುವಳಿಗೆ ಕರೆಗೊಟ್ಟು ತಮ್ಮ ವಿದ್ಯಾಭ್ಯಾಸವನ್ನು ತೊರೆದರು. ನಂತರ ಅವರು ಲಾಲಾಲಜಪತರಾಯರು ಮತ್ತು ಪರಮನಂದರು ಸ್ಥಾಪಿಸಿದ ಕಾಲೇಜಿಗೆ ಸೇರಿದರು. ಅವರ ರಾಜಕೀಯ ಸೈದ್ದಾಂತಿಕ ಕಲಿಕೆಗೊಂದು ಪ್ರಬುದ್ಧತೆ ಬಂದಿರುವುದು ಇಲ್ಲಿಯೇ. ೧೯೨೩ರಲ್ಲಿ ಉತ್ತರ ಪ್ರದೇಶದಲ್ಲಿ ಚೌರಚೌರಿ ಚಳುವಳಿಯ ಸಂದರ್ಭದಲ್ಲಿ ಚಳುವಳಿಗಾರರ ಪ್ರತಿಭಟನೆಗೆ ಆಂಗ್ಲ ಪೋಲೀಸರು ಬಲಿಯಾದಾಗ ಆ ಚಳುವಳಿಯನ್ನೇ ಅಹಿಂಸೆ ಉಲ್ಲಂಘನೆ ನೆಪದಲ್ಲಿ ಮಹಾತ್ಮ ಗಾಂಧೀಜಿಯವರು ಆ ಚಳುವಳಿಯನ್ನು ಹಿಂದಕ್ಕೆ ಪಡೆದರು. ಇದರಿಂದ ಅಸಮಾಧಾನಗೊಂಡ ಯುವಕರೇ, ಮುಂದೇ ಕ್ರಾಂತಿಕಾರಿಗಳಾಗಿ ಭಾರತದ ಇತಿಹಾಸದ ಪುಟದಲ್ಲಿ ಕಂಗೊಳಿಸಿದರು.

’ಯಾವ ಕ್ರಾಂತಿ ಜನತೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ತಂದುಕೊಟ್ಟು ಮಾನವನಿಂದ ಮಾನವನ ಶೋಷಣೆಯನ್ನು ಅಸಾಧ್ಯಗೊಳಿಸುತ್ತದೆಯೋ ಅಂತಹ ಕ್ರಾಂತಿಯ ಸಂದೇಶವನ್ನು ಯುವಜನರು ದೇಶದ – ಮೂಲೆಮೂಲೆಗೂ ಒಯ್ಯಬೇಕು, ಮಿಲಿಯಾಂತರ ಮರ್ದಿತ ಜನತೆಗೆ ತಲಪಿಸಬೇಕು’. – ಭಗತಸಿಂಗ್

ವಿದ್ಯಾರ್ಥಿ ಜೀವನದಿಂದಲೇ ಕ್ರಾಂತಿಕಾರಿ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಸಹವರ್ತಿಗಳೊಂದಿಗೆ ಸೇರಿ ಪಂಜಾಬಿನ ವಿದ್ಯಾರ್ಥಿ ಯುವಜನರನ್ನು ಸೇರಿಸಿ ಬ್ರಿಟಿಷರ ವಿರುದ್ಧ, ಅಹಿಂಸೆ, ಸತ್ಯಾಗ್ರಹ ಮತ್ತು ಮಾತುಕತೆದಾರಿಯಿಂದ ವಿಭಿನ್ನವಾಗಿ ಹೋರಾಡುವ ಉದ್ದೇಶದಿಂದ ನೌಜವಾನ ಭಾರತ ಸಂಘಟನೆಯನ್ನು ಸ್ಥಾಪಿಸಿದರು. ಆ ಸಂದರ್ಭದಲ್ಲಿಯೇ ಬಂಗಾಳದಲ್ಲಿ ಸಶಶ್ತ್ರ ಚಳುವಳಿಯ ಗುಂಪಾದ ಅನುಶೀಲನ ಸಮಿತಿ ಯು ದೇಶದಲ್ಲಿ ಹರಿದು ಹಂಚಿ ಹೋಗಿದ್ದ, ವಿವಿಧ ಕ್ರಾಂತಿಕಾರಿ ಸಂಘಟನೆಗಳನ್ನು ಒಂದೂಗೂಡಿಸುವ ಕಾರ್ಯಕ್ಕೆ ಚಾಲನೆ ನೀಡಿ ೧೯೨೩ ರಲ್ಲಿ ಹಿಂದೂಸ್ಥಾನ ರಿಪಬ್ಲಿಕನ್ ಅಸೋಸಿಯೇಷನ (ಎಚ್,ಆರ್,ಎ,) ರಚಿಸಿತು. ಈ ಕಾಲದಲ್ಲಿ ಭಗತಸಿಂಗ್‌ರವರು ಎಚ್.ಆರ್.ಎ. ಸಂಪರ್ಕಕ್ಕೆ ಬಂದು ಪಂಜಾಬ ಮತ್ತು ಉತ್ತರ ಭಾರತದಲ್ಲಿ ಕ್ರಾಂತಿಕಾರಿ ಚಳುವಳಿಯನ್ನು ತೀವ್ರಗೊಳಿಸುವುದಕ್ಕೆ ತಮ್ಮ ಇಡೀ ಜೀವನವನ್ನೇ ಸಮರ್ಪಿಸಿಕೊಂಡರು.

೧೯೨೫ರಲ್ಲಿ ತನ್ನಗೇ ೧೮ ವರ್ಷದ ತಾರುಣ್ಯದಲ್ಲಿರುವಾಗ ಯುವಕರಿಗೆ ಭಗತಸಿಂಗ್ ಹೀಗೆ ಹೇಳಿದರು ಜಗತ್ತಿನ ಇತಿಹಾಸ ಪುಟಗಳನ್ನ ಒಮ್ಮೆ ತಿರುವಿ ಹಾಕಿನೋಡಿ, ಅಲ್ಲೇಲ್ಲಾ ಯುವಕರ ರಕ್ತಾಕ್ಷರಗಳಿಂದ ಬರೆದ ಅಮರ ಸಂದೇಶಗಳೇ ತುಂಬಿವೆ. ಜಗತ್ತಿನ ಎಲ್ಲಾ ಕ್ರಾಂತಿಗಳ ಮುಂಚುಣಿಯಲ್ಲಿ ಪಥ ಭ್ರಷ್ಟರು, ಹುಚ್ಚರು ಇನಿಸಿಕೊಂಡ ಯುವಕರೆ ನಮಗೆ ಸಿಗುತ್ತಾರೇ. ನಿಜವಾದ ಯುವಕರು ಫೀರಂಗಿಯ ಬಾಯಲ್ಲಿ ಕುಳಿತು ಮುಗುಳ್ನಗುತ್ತಾರೆ, ಬೇಡಿಗಳ ತಾಳಕ್ಕೆ ದೇಶ ಭಕ್ತಿಗೀತೆ ಹಾಡುತ್ತಾರೆ, ಮೃತ್ಯುವನ್ನ ಧಿಕ್ಕರಿಸಿ ಅಟ್ಟಹಾಸಗೈಯತ್ತ ಗಲ್ಗಂಭವೇರುತ್ತಾರೆ.

ಸ್ವಾತಂತ್ರ್ಯ ಹೋರಾಟಗಾರರ ಹಕ್ಕುಗಳನ್ನು ದಮನಗೊಳಿಸುವುದಕ್ಕಾಗಿ ’ಕಾರ್ಮಿಕ ವಿವಾದ ಕಾಯೆ’ ’ಸಾರ್ವಜನಿಕ ರಕ್ಷಣಾ ಕಾಯೆ’ ಗಳನ್ನು ಎರಡೂ ಮಸೂದೆಗಳನ್ನು ಅಸೆಂಬ್ಲಿ ಮಂಡಿಸಿದ ದಿನವಾದ ೧೯೨೯ ಏಪ್ರೀಲ್ ೮ ರಂದು ಭಗತಸಿಂಗ್ ಮತ್ತು ಬಟುಕೇಶ್ವರ ದತ್ತರು ಜೊತೆಗೂಡಿ ಅಸೆಂಬ್ಲಿ ಸಭಾಂಗಣದಲ್ಲಿ ಸುರಕ್ಷಿತವಾದ ಸ್ಥಳದಲ್ಲಿ ಬಾಂಬ್‌ಗಳನ್ನು ಎಸೆದು ತಮ್ಮ ಕ್ರಾಂತಿಕಾರಿಗಳಿದ್ದ ಕರ ಪತ್ರಗಳನ್ನು ಹಂಚಿ, ’ಬ್ರಿಟಿಷ ಸಾಮ್ರಾಜ್ಯಶಾಹಿ ಧಿಕ್ಕಾರ’ ’ಕ್ರಾಂತಿ ಚಿರಾಯುವಾಗಲಿ’ ಎಂಬ ಘೋಷಣೆ ಕೂಗುತ್ತಾ ಬಂಧನಕ್ಕೆ ಒಳಗಾದರು. ನಂತರದ ದಿನಗಳಲ್ಲಿ ಉಪ ಪೋಲಿಸ ಕಮಿಷನರ ಸ್ಯಾಂಡ್‌ರ‍್ಸ್‌ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ಭೇಧಿಸುವಲ್ಲಿ ಯಶ್ವಸಿಯಾದ ಬ್ರಿಟಿಷ ಗುಪ್ತಚರರು ಸುಖದೇ, ರಾಜಗುರು ಅವರನ್ನು ಸಹ ಬಂಧಿಸಿ ಈ ಮೂವರು ಕ್ರಾಂತಿಕಾರಿಗಳಿಗೆ ನೇಣು ಶಿಕ್ಷ ವಿಧಿಸಲಾಯಿತು.

ಈ ಕ್ರಾಂತಿಕಾರಿಗಳ ಮರಣದಂಡನೆಯ ವಿಚಾರ ದೇಶದ್ಯಾದಂತ ವ್ಯಾಪಕ ಚರ್ಚೆ ನಡೆದು, ಬ್ರಿಟಿಷರ ನೀತಿ ದೇಶದೇಲ್ಲೆಡೆ ಜನಸಾಮಾನ್ಯರಿಂದ ವ್ಯಾಪಕ ಖಂಡನೆಗೆ ಒಳಗಾಗಿತ್ತು. ಈ ಸಂದರ್ಭದಲ್ಲಿಯೇ ನಡೆಯಲಿದ್ದ ಗಾಂಧೀ-ಇರ್ವಿನ ಒಪ್ಪಂದದಲ್ಲಿ ಭಗತಸಿಂಗ ಮತ್ತು ಸಂಗಾತಿಗಳ ಜೀವ ಉಳಿಸಬೇಕೆಯೆಂದು ಇಡೀ ದೇಶದ ಜನತೆಯ ಒತ್ತಾಯವಾಗಿತ್ತು. ಗಾಂಧೀಜಿಯವರು ಇರ್ವಿನ್ನರೊಂದಿಗೆ ಚರ್ಚಿಸಲಿಲ್ಲ. ಕಾಂಗ್ರೇಸನಲ್ಲಿದ್ದ ಗಾಂಧಿವಾದಿಗಳು ಭಗತಸಿಂಗ್‌ರವರ ಕ್ರಾಂತಿಕಾರಿ ವಿಚಾರಗಳ ಹೋರಾಟದಿಂದ ನಡುಗಿ ಹೋಗಿದೆ ಇದಕ್ಕೆ ಕಾರಣ. ಒಂದೆಡೆ ಗಾಂಧೀಜಿಯವರು ಭಗತ ಆರಾಧನೆಯಿಂದ ದೇಶದ ಯುವ ಜನಾಂಗಕ್ಕೆ ಎಣಿಸಲಾರದಷ್ಟು ಹಾನಿಯನ್ನುಂಟು ಮಾಡಿದೆ ಎಂಬ ಅಸಂಬದ್ದ ನಿಲುವು ತಳಿದಿದ್ದರು.

ಭಗತಸಿಂಗ್‌ರಿಗೆ ಬ್ರಿಟಿಷ್ ನ್ಯಾಯಾಲಯವು ಮರಣ ದಂಡನೆ ವಿಧಿಸಿದ ಸಂದರ್ಭದಲ್ಲಿ ಅವರ ಸ್ನೇಹಿತ ಸುಖದೇವಗೆ ಬರೆದ ಪತ್ರದಲ್ಲಿ ’ನಾನು ನನ್ನ ಬಗ್ಗೆ ಏನು ಯೋಚಿಸಿದೆನೆಂದೂ ಪತ್ರದಲ್ಲಿ ಅನುಮತಿ ಕೊಡು ನನ್ನಗೆ ಮರಣದಂಡನೆಯೆಂದು ಖಂಡಿತ ಎಂದೂ ಗೊತ್ತು. ನನ್ನಗೆ ಒಂದಿಷ್ಟಾದರೂ ರಿಯಾಯಿತಿಯಾಗಲೀ, ಕೃಪಾಭೀಕ್ಷೆಯಾಗಲಿ ಸಿಗುವುದಿಲ್ಲ. ಆದರೂ ನಮ್ಮ ಬಿಡುಗಡೆಗಾಗಿ ಜಗತ್ತಿನಾದ್ಯಂತ ಧ್ವನಿ ಏಳಬೇಕೆಂದು ಬಯಸುತ್ತೇನೆ. ಅದರೊಂದಿಗೆ ನನ್ನ ಆಸೆಯೆಂದರೆ ಅಂಥ ಆಂದೋಲನ ಪರಾಕಾಷ್ಠೆಗೆ ಮುಟ್ಟಿದಾಗ ನಾವು ಗಲ್ಗಂಬವೇರಬೇಕು. ದೇಶದ ಭವಿಷ್ಯದ ನಿರ್ಧರವಾಗುವ ವ್ಯಕ್ತಿಗಳ ಭವಿಷ್ಯವನ್ನು ಮರೆತು ಬಿಡಬೇಕು. ಹೋರಾಟ, ಯಾತನೆ ಮತ್ತು ಬಲಿದಾನದಿಂದ ಮಾತ್ರ ಕ್ರಾಂತಿಯನ್ನು ಸಾಧಿಸಲು ಸಾಧ್ಯ ಮತ್ತು ಕ್ರಾಂತಿಯ ಸಾಧನೆ ಆಗಿಯೇ ತಿರುತ್ತದೆ.’

ಈ ಕ್ರಾಂತಿಕಾರಿಗಳ ಮರಣದಂಡನೆಯ ವಿಚಾರ ದೇಶದ್ಯಾದಂತ ವ್ಯಾಪಕ ಚರ್ಚೆ ನಡೆದು, ಬ್ರಿಟಿಷರ ನೀತಿ ದೇಶದೇಲ್ಲೆಡೆ ಜನಸಾಮಾನ್ಯರಿಂದ ವ್ಯಾಪಕ ಖಂಡನೆಗೆ ಒಳಗಾಗಿತ್ತು. ಈ ಸಂದರ್ಭದಲ್ಲಿಯೇ ನಡೆಯಲಿದ್ದ ಗಾಂಧೀ-ಇರ್ವಿನ ಒಪ್ಪಂದದಲ್ಲಿ ಭಗತಸಿಂಗ ಮತ್ತು ಸಂಗಾತಿಗಳ ಜೀವ ಉಳಿಸಬೇಕೆಯೆಂದು ಇಡೀ ದೇಶದ ಜನತೆಯ ಒತ್ತಾಯವಾಗಿತ್ತು. ಗಾಂಧೀಜಿಯವರು ಇರ್ವಿನ್ನರೊಂದಿಗೆ ಚರ್ಚಿಸಲಿಲ್ಲ. ಕಾಂಗ್ರೇಸನಲ್ಲಿದ್ದ ಗಾಂಧಿವಾದಿಗಳು ಭಗತಸಿಂಗ್‌ರವರ ಕ್ರಾಂತಿಕಾರಿ ವಿಚಾರಗಳ ಹೋರಾಟದಿಂದ ನಡುಗಿ ಹೋಗಿದೆ ಇದಕ್ಕೆ ಕಾರಣ. ಒಂದೆಡೆ ಗಾಂಧೀಜಿಯವರು ಭಗತ ಆರಾಧನೆಯಿಂದ ದೇಶದ ಯುವ ಜನಾಂಗಕ್ಕೆ ಎಣಿಸಲಾರದಷ್ಟು ಹಾನಿಯನ್ನುಂಟು ಮಾಡಿದೆ ಎಂಬ ಅಸಂಬದ್ದ ನಿಲುವು ತಳಿದಿದ್ದರು.

ಭಗತಸಿಂಗ್‌ರು ನೇಣುಗಂಬವೇರುವ ಮುನ್ನ ಜೈಲಿನ ಅಧಿಕಾರಿಗಳು ಗಲ್ಲಿಗೆ ಕರೆದೊಯ್ಯುವ ಮುನ್ನ ಭಗತಸಿಂಗ್‌ರಿಗೆ ಕೊನೆಯ ಆಸೆ ಏನೆಂದು ಕೇಳಿದಾಗ ಅವರು ರಷ್ಯಾದ ಸಮಾಜವಾದಿ ಕ್ರಾಂತಿಯ ರೂವಾರಿ ಲೆನಿನ್ ಪುಸ್ತಕವೊಂದನ್ನು ಓದುವುದರಲ್ಲಿ ತಲ್ಲಿನರಾಗಿದ್ದರು. ಒಂದು ನಿಮಿಷ ತಡೆಯಿರಿ, ಓರ್ವ ಕ್ರಾಂತಿಕಾರಿ ಇನ್ನೊರ್ವ ಕ್ರಾಂತಿಯೊಡನೆ ಸಂಭಾಷಣೆಯಲ್ಲಿ ತೊಡಗಿದ್ದೇನೆ ಎಂದ ಭಗತ, ಓದು ಮುಗಿಸಿದ ತಕ್ಷಣವೇ ನೇಣುಗಂಬದೆಡೆಗೆ ನಗುನಗುತ್ತಾ ಹೊರಟರು. ಆಗ ಅವರ ಕೇವಲ ವಯಸ್ಸು ೨೩ ವರ್ಷ. ಅಂದು ೧೯೩೧ ರ ಮಾರ್ಚ ೨೩ ಸಂಜೆಯ ಸಮಯ ಲಾಹೋರ್ ಸೆಂಟ್ರಲ್ ಕೇಂದ್ರೀಯ ಕಾರಾಗೃಹದಲ್ಲಿ ಸಂಜೆಯ ತಿರುಗಾಟದ ನಂತರ ಎಲ್ಲಾ ಕೈದಿಗಳು ತಮ್ಮ ತಮ್ಮ ಕೋಣೆಗಳಿಗೆ ಹಿಂತಿರಿಗಿದ್ದರು. ಇದಕ್ಕಿದ್ದ ಹಾಗೆಯೇ ’ಇಂಕ್ವಿಲಾಬ್ ಜಿಂದಾಬಾ??’ ’ಕ್ರಾಂತಿ ಚಿರಾಯವಾಗಲಿ’ ಎಂಬ ಘೋಷಣೆಗಳಿಂದ ಎಲ್ಲೆಡೆ ಕವಿದಿದ್ದ ಮೌನ ವಾತಾವರಣ ಮುರಿಯಿತು ಈ ಧ್ವನಿ ತಮ್ಮ ಸಂಗಾತಿಗಾಳಾದ ಭಗತಸಿಂಗ್, ಸುಖದೇವ, ರಾಜಗುರು ಅವರದಲ್ಲವೇ ?

ಸಂಜೆ ಈ ಸಮಯದಲ್ಲಿ ಅವರನ್ನು ಎಲ್ಲಿಗೆ ಕರೆದೊಯ್ಯುಲಾಗುತ್ತಿದೆ ಹಾಗಾದರೆ ಅದು! ಎಂಬ ಪ್ರಶ್ನೆ ? ಅಲ್ಲಿದ್ದ ಕೈದಿಗಳನ್ನು ಕಾಡಿದ್ದವು. ಎಲ್ಲರೂ ಗೊಂದಲಕ್ಕೀಡಾಗಿ ಆಶ್ಚರ್ಯ ಚಕಿತರಾಗಿ ನಿಂತರು. ತಮ್ಮ ಆತ್ಮಿಯ ಸಂಗಾತಿಗಳನ್ನು ನೇಣುಗಂಬಕ್ಕೆ ಕರೆದೊಯ್ಯುತ್ತಿರಬಹುದೆಂಬ ಅಪ್ರೀಯ ಯೋಚನೆಯನ್ನು ಮನದಿಂದ ತಳ್ಳಿಹಾಕಲು ಇಚ್ಛಿಸಿದರೂ, ಆ ಘಟನೆ ಒಂದಲ್ಲ ಒಂದು ದಿನ ನಡಯದೆ ಬೇಕಾದಂತದುದು ಎಂಬುದು ತಿಳಿದಿದೆ. ಮುಂಜಾವಿನ ಬದಲಿಗೆ ಒಂದು ದಿನ ಮುಂಚೆಯೇ ಮರಣ ದಂಡನೇ ನಿಗದಿಪಡಿಸಲಾಗಿದೆಯೇ ಎಂಬೆಲ್ಲಾ ಆಲೋಚನೆಗಳು ಆ ಸಂಗಾತಿಗಳ ಮನಸ್ಸುನ್ನು ಮುತ್ತಿದ್ದವು. ಆ ಮೂರು ಸಹಯೋಧರನ್ನು ಅಂದರೆ ಭಗತಸಿಂಗ್, ಸುಖದೇವ, ರಾಜಗುರು ಅವರನ್ನು ಅಂದು ಗಲ್ಲಿಗೇರಿಸಲಾಯಿತು.

ಜನ ರೊಚ್ಚಿಗೇಳಬಹುದೆಂಬ ಭಯದಿಂದ ಅವರ ದೇಹಗಳನ್ನು ಅವರ ಪೋಷಕರಿಗೆ ನೀಡದೇ ಅರ್ಧಸುಟ್ಟು ಹತ್ತಿರದ ಕಾಡಿನಲ್ಲಿ ಎಸೆಯಲಾಯಿತು. ನಂತರ ಕೆಲವು ಅಧಿಕಾರಿಗಳು ಆ ಶವಗಳನ್ನು ಶತದ್ರು ನದಿಗೆ ಎಸೆದರು. ಆ ದೇಹಗಳ ಅಳಿದುಳಿದ ಭಾಗಗಳನ್ನು ಸಹ ನದಿಯ ಶಾಂತ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ತನ್ನ ಸಹಯೋಧರೊಂದಿಗೆ ಆ ಮಹಾನ ಕ್ರಾಂತಿಕಾರಿಯ ಜೀವನ ಕೊನೆಗೊಂಡದ್ದು ಹೀಗೆ, ಸಾವು ಅವರ ಭರವಸೆಯನ್ನು ಕುಂದಿಸಲಿಲ್ಲ. ನನ್ನ ಸಾವು ದೇಶದ ಮಿಲಿಯಾಂತರ ಯುವ ಜನತೆಯಲ್ಲಿ ದೇಶಪ್ರೇಮವನ್ನು ಉತ್ಸಾಹದ ಜ್ವಾಲೆಯನ್ನು ಹೊತ್ತಿಸುತ್ತದೆ. ಸ್ವಾತಂತ್ರ್ಯ ಸಂಗ್ರಾಮದ ಸೋಪಾನದಲ್ಲಿ ತ್ಯಾಗ ಮಾಡಲು ಸ್ಪೂರ್ತಿ ನೀಡುತ್ತದೆ. ಅದರ ಮೂಲಕ ಕೇವಲ ವಸಾಹತುಶಾಹಿ ಶೃಂಖಲೆಯಿಂದ ಮಾತ್ರವಲ್ಲದೇ ’ಮಾನವನಿಂದ ಮಾನವನ ಎಲ್ಲಾ ರೀತಿಯ ಶೋಷಣೆಯಿಂದ ಮುಕ್ತವಾಗಿರುವ ಸ್ವತಂತ್ರ ಭಾರತ ಹೊರ ಹೊಮ್ಮುತ್ತದೆ’ ಎಂಬ ಕನಸಿನೊಂದಿಗೆ ಅವರು ಹುತಾತ್ಮರಾದರು. ನಗುನಗುತ್ತಾ ಗಲ್ಗಂಬಕ್ಕೆ ಮುತ್ತಟ್ಟ ಈ ಮಹಾನ್ ಚೇತನಗಳು, ಜೀವನಾದರ್ಶ, ಮೌಲ್ಯಗಳನ್ನು ಎತ್ತಿಹಿಡಿಯುವದಕ್ಕಾಗಿ, ಸತ್ಯ, ನ್ಯಾಯದ ಮಾರ್ಗವನ್ನತುಳಿಯಲು ಯಾವುದೇ ತ್ಯಾಗಕ್ಕಾದರೂ ಸಿದ್ದರಿರಬೇಕೆಂದು ತೋರಿಸಿಕೊಟ್ಟಿದ್ದಾರೆ.

‘ಹಲವಾರು ಉದಾತ್ತ ಜೀವಿಗಳ ತ್ಯಾಗ ಬಲಿದಾನ ಹೋರಾಟದಿಂದ ಗಳಿಸಿದ ಸ್ವಾತಂತ್ರ್ಯ ಇಂದು ನಮ್ಮನ್ನೊಂದು ಕರಾಳ ಸನ್ನಿವೇಶದಲ್ಲಿ ತಂದು ನಿಲ್ಲಿಸಿರುವುದು ಒಂದು ಘೋರ ದುರುಂತವೇ ಸರಿ. ಇಂದು ಭಗತರ ಅವಶ್ಯಕತೆ ಎಷ್ಟೋಂದಿದೆಯಲ್ಲಾ? ಅವರಂಥವರು ಮತ್ತೆ ಈ ದೇಶದಲ್ಲಿ ಹುಟ್ಟಬೇಕಲ್ಲವೇ! ಇಂದಿನ ಸರ್ಕಾರಗಳು ಜಾಗತೀಕರಣ ಹೆಸರಿನಲ್ಲಿ ಜನತೆಗೆ ಹಲವಾರು ಸಮಸ್ಯೆಗಳಿಗೆ ಸಿಲುಕಿಸಿವೆ. ಬಡತನ, ಬೆಲೆ ಏರಿಕೆ, ಭೀಕರ ನಿರುದ್ಯೋಗ, ಭ್ರಷ್ಟಾಚಾರ, ಶಿಕ್ಷಣ ಮತ್ತು ಆರೋಗ್ಯದ ವ್ಯಾಪಾರೀಕರಣದಂತಹ ಅನೇಕ ಜ್ವಲಂತ ಸಮಸ್ಯೆಗಳ ವಿರುದ್ದ ಧ್ವನಿ ಎತ್ತಲು ಭಗತ ಬೇಡವೆ.?

ಸಮೂಹ ಮಾಧ್ಯಮಗಳಲ್ಲಿ ಅಶ್ಲೀಲತೆ, ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಅತ್ಯಾಚಾರ ಪ್ರಕರಣಗಳಿಗೆ ಕುಮ್ಮಕ್ಕು ನೀಡುತ್ತಿವೆ. ಆದರ್ಶಗಳ ಆಕರ್ಷಣೆಯಿಲ್ಲದೇ ಕೊಳ್ಳುಬಾಕ ಸಂಸ್ಕೃತಿಯ ಹಿಂದೆ ಓಡುತ್ತಿರುವ ಇಂದಿನ ಯುವಜನರನ್ನು ಕಂಡರೆ ಭಗತ್ ಏನನ್ನುತ್ತಿದ್ದರು? ಆಳುವ ವರ್ಗವು, ಯುವಜನರು ಭಗತ್‌ಸಿಂಗ್ ಮಾರ್ಗವನ್ನು ಅನುಸರಿಸದೇ ಇರಲಿ ಇಂದು ಅವರಿಗೆ ದುರ್ವ್ಯಸನಗಳನ್ನು ಕಲಿಸುವ ಪಿತೂರಿಯನ್ನು ಕಂಡರೆ ಭಗತ್‌ಸಿಂಗ್ ಏನು ಮಾಡುತ್ತಿದ್ದರು? ಪದವಿಗಳನ್ನು ಗಳಿಸುವುದೇ ಜೀವನದ ಪರಮ ಗುರಿ ಎಂದು ಸಮಾಜವನ್ನು ಬದಿಗೊತ್ತುವ ಪುಸ್ತಕದ ಹುಳುಗಳನ್ನು ಕಂದರೆ ಭಗತ್‌ಸಿಂಗ್ ಹೇಗೆ ಪ್ರತಿಕ್ರಿಯಿಸುತ್ತದ್ದರು? ಭಗತ್ಸಿಂಗ್ ತಾವು ಅವತಾರಪುರುಷರೆಂದು ಭಾವಿಸಿರಲಿಲ್ಲ. ಅವರಿಗೆ ಅವತಾರಗಳಲ್ಲಿ ನಂಬಿಕೆಯೂ ಇರಲಿಲ್ಲ. ಮನುಷ್ಯ ತನ್ನ ಸುತ್ತಲಿನ ಸಮಾಜವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು ಶ್ರಮಿಸಬೇಕು. ಅದಕ್ಕಾಗಿ ಅವನು ಯಾವುದೇ ತ್ಯಾಗಕ್ಕಾದರೂ ಸಿದ್ಧರಾಗಬೇಕು. ಆಗ ಅವನ ಚಾರಿತ್ರ್ಯ, ಜ್ಞಾನ, ಭಾವನೆಗಳು ಎಲ್ಲವೂ ಉದಾತ್ತವಾಗುತ್ತವೆ ಎಂದು ಅವರು ನಂಬಿದ್ದರು. ಭಗತ್‌ಸಿಂಗ್ ಒಂದು ಮಹಾನ್ ಸಾಮಾಜಿಕ ಹೋರಾಟದಿಂದ ಹೊರಹೊಮ್ಮಿದ ಅದ್ಭುತ ಸೃಷ್ಟಿ.

ಇಂದು ದೇಶದಲ್ಲಿ ಎಲ್ಲಾ ರಂಗದಲ್ಲಿ ಹಲವಾರು ಬಿಕ್ಕಟ್ಟುಗಳು, ಭೀಕರ ಪರಿಸ್ಥಿತಿಗಳಿಂದ ಅನೇಕ ಸಮಸ್ಯೆಗಳ ಸುಳಿಗೆ ಸಿಲುಕಿ ಜನರು ದಿಗ್ಭ್ರಾಂತರಾಗಿದ್ದಾರೆ. ಆದ್ದರಿಂದ ಎಲ್ಲಾ ರಂಗದಲ್ಲಿ ಯುವಕರಾದ ನಾವೆಲ್ಲರೂ ನವ ಚೇತನವನ್ನು ಹರಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ರಾಜಗುರು, ಸುಖದೇವ, ಭಗತಸಿಂಗ್ ಮೂವರು ಕ್ರಾಂತಿಕಾರಿಗಳನ್ನು ಸರ್ವಸ್ವವನ್ನೇ ತ್ಯಾಗ ಮಾಡಿ, ಜೀವನವನ್ನೇ ದೇಶಕ್ಕಾಗಿ ಮುಡುಪಿಟು, ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ನೇಣುಗಂಬಕ್ಕೆ ಏರಿ ಮಾರ್ಚ ೨೩ ಕ್ಕೆ ೮೯ ವರ್ಷಗಳು ಕಳೆದು ಹೋಗಿವೆ. ಆದರೆ ದೇಶದ ಕೊಟ್ಯಾಂತರ ಯುವಕರ ಜನರ ಮಧ್ಯದಲ್ಲಿ ಅವರು ಕಂಡ ಸಮಾಜವಾದ ಕನಸು ನನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಬಿಟ್ಟು ಹೋಗಿದ್ದಾರೆ.

ಆದ್ದರಿಂದ ಶಹೀದ್ ಭಗತ್‌ಸಿಂಗ್‌ರವರು ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನ, ಆದರ್ಶ ವ್ಯಕ್ತಿತ್ವವನ್ನು ಸಂಕಲ್ಪ ಮಾಡಿ, ಕೋಟ್ಯಾಂತರ ಯುವಕರು ಒಮ್ಮೆ ಮೈಗೂಡಿಸಿಕೊಂಡು ಎಲ್ಲಾ ರೀತಿಯ ಅನ್ಯಾಯದ ವಿರುದ್ಧ ಸಿಡಿದೆದ್ದರೆ, ಈ ದೇಶದಲ್ಲಿ ಮತ್ತೊಂದು ಹೊಸ ಕ್ರಾಂತಿ ಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಭಗತ್‌ಸಿಂಗರ ಹುತಾತ್ಮ ದಿನ?ಂದು ಸಮಾಜದ ಒಳಿತಿಗಾಗಿ ಜೀವನ ಮುಡುಪಾಗಿಡಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ತುಂಬಾ ಅಗತ್ಯವಾಗಿದೆ.

1 ಕಾಮೆಂಟ್

  1. ತುಂಬ ಚೇನ್ನಾಗಿ ವಿವರಣೆ ಮಾಡಿದ್ದಿರ ಭೀಮಾಶಂಕರ ನೀಮ್ಮ ಬರವಣಿಗೆ ಚೇನ್ನಾಗಿದೆ.ಹೀಗೆ ಮುಂದುವರಿಸಿ
    ಭಗತ ಸಿಂಗ ಅವರ ಚರೀತ್ರೆ ಎಷ್ಟೋ ಜನಕ್ಕೆ ಸ್ಪೂರ್ತಿ ಅವರು ಎಲ್ಲ ಪೀಳಿಗೆಯ ಮನದಲ್ಲಿ ಅಜರಾಮರ.
    ಜೈ ಹಿಂದ ಇಂಕ್ಲಿಲಾಬ್ ಜಿಂದಾಬಾದ..

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here