ಬೀಜಿಂಗ್: ಚೀನಾದಲ್ಲಿ ಕೊರೋನಾ ವೈರಸ್ ನಂತರ ಮತ್ತೊಂದು ಆಘಾತಕಾರಿ ವೈರಸ್ ಪತ್ತೆಯಾಗಿದ್ದು, ಸೋಮವಾರ ಯುನ್ಮಾನ್ ಪ್ರಾಂತ್ಯದ ವ್ಯಕ್ತಿಯೊಬ್ಬನಲ್ಲಿ ಹಂಟಾ ವೈರಸ್ ಸೋಂಕಿಗೆ ಬಲಿಯಾಗಿದ್ದಾನೆ. 32 ಮಂದಿ ಇತರರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಇದು ಇಲಿಗಳ ಮೂಲಕ ಹರಡುವ ವೈರಾಣುವಾಗಿದೆ. ಸೋಂಕು ಪೀಡಿತ ಇಲಿಗಳಿದ್ದರೆ ಈ ಹಂಟಾ ವೈರಸ್ ಸೋಂಕು ಆರೋಗ್ಯವಂತ ಮನುಷ್ಯರಿಗೂ ತಗಲಬಹುದಾಗಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲವಾದರೂ ಇಲಿಯ ಮಲ, ಮೂತ್ರ ಇತ್ಯಾದಿಗಳನ್ನು ಮುಟ್ಟಿ ನಂತರ ಕಣ್ಣು, ಮೂಗು, ಬಾಯಿ ಮುಟ್ಟಿದರೆ ಈ ಸೋಂಕು ತಗಲಬಹುದಾಗಿದೆ.