ಲಾರಿಯಲ್ಲಿ ಜನರನ್ನು ಗೌಪ್ಯವಾಗಿ ಸ್ಥಳಾಂತರಿಸುತ್ತದ ಚಾಲಕನಿಗೆ ಪೊಲೀಸರಿಂದ ಲಾಠಿ ಏಟು

0
122

ಕಲಬುರಗಿ: ಕೊರೋನಾ ವೈರಸ್ ಹರಡದಂತೆ ದೇಶದ್ಯಂತ ಲಾಕ್ ಡೌನ್ ವಹಿಸಲಾಗಿದ್ದು, ಅಲ್ಲದೇ ಜಿಲ್ಲೆಯಲ್ಲಿ ಕಲಂ 144 ಜಾರಿ ಇದೆ ಆದರೆ ಚಾಲಕನೊಬ್ಬ ಲಾರಿಯಲ್ಲಿ ಕುರಿ ತುಂಬಿದಂತೆ ಜನರನ್ನ ತುಂಬಿ ಕರೆತಂದಿರುವ ಘಟನೆ ಇಲ್ಲಿನ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದ ಬಳಿ ಗಡಿ ಚೆಕ್ ಪೋಸ್ಟ್​ನಲ್ಲಿ ತಪಾಸಣೆ ವೇಳೆ ಬೆಳಕಿಗೆ ಬಂದಿದೆ.

ಪುಣೆಯಿಂದ ತೆಲಂಗಾಣಕ್ಕೆ ಎರಡು‌ ಲಾರಿಗಳಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರನ್ನ ಕರೆದೊಯ್ಯಲಾಗ್ತಿತ್ತು ಎಂದು ತಪಸಣೆ ನಡೆಸುವ ವೇಳೆ ಗೊತ್ತಾಗಿದ್ದು. ಒಳಗೆ ಜನರನ್ನು ತುಂಬಿ ಹೊರಗಡೆಯಿಂದ ಪ್ಲಾಸ್ಟಿಕ್​ನಿಂದ ಕವರನ ಟಾರ್ಪಲ್​ನಲ್ಲಿ ಮುಚ್ಚಲಾಗಿತ್ತು. ಸದ್ಯ ಪೊಲೀಸರು ಚಾಲಕನಿಗೆ ಲಾಠಿ ರುಚಿ ತೋರಿಸಿ ಲಾರಿಗಳನ್ನ ವಾಪಸ್​ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here