ಆಳಂದ: ಲಾಕಡೌನ್ ಮುಗಿಯುವವರೆಗೆ ಮಾತೃಭೂಮಿ ಸೇವಾ ಸಮಿತಿಯಿಂದ ಸಿಬ್ಬಂದಿಗಳಿಗೆ ಆಹಾರ ಪೂರೈಕೆ
ಕೊರೋನಾ ವೈರಸ್ ವಿರುದ್ಧ ಹಗಲು ರಾತ್ರಿ ಹೋರಾಡುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ, ಅರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ, ಮಾನಸಿಕ ಅಸ್ವಸ್ಥರಿಗೆ ಆಳಂದ ಮಾತೃಭೂಮಿ ಸೇವಾ ಸಮಿತಿಯಿಂದ ವತಿಯಿಂದ ಲಾಕಡೌನ್ ಮುಗಿಯುವವರೆಗೆ ಉಚಿತ ಆಹಾರ ಪೂರೈಕೆ ಮಾಡಲು ನಿರ್ಧರಿಸಲಾಗಿದೆ.
ಶುಕ್ರವಾರ ಆಳಂದ ಪಟ್ಟಣದಲ್ಲಿ ಸಮಿತಿಯ ಪದಾಧಿಕಾರಿಗಳಾದ ಅಧ್ಯಕ್ಷ ಮಹೇಶ ಗೌಳಿ, ಕಾರ್ಯದರ್ಶಿ ಮಹಾಂತೇಶ ಪೂಜಾರಿ, ಸದಸ್ಯರಾದ ರೋಹಿತ ಬಂಡಗಾರ, ಆಕಾಶ ಸೋನಾರ, ಓಂಕಾರ ಕಾಂಬಳೆ, ಶುಭಂ ರಂಗದಾಳ ಸೇರಿದಂತೆ ಇತರರು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಸಿಬ್ಬಂದಿಗಳು ಇದ್ದ ಕಡೆ ಹೋಗಿ ಆಹಾರ ಸಾಮಗ್ರಿಯ ಪಾಕೇಟನ್ನು ವಿತರಿಸಿದರು.
ಸಮಿತಿಯ ಅಧ್ಯಕ್ಷ ಮಹೇಶ ಗೌಳಿ ನಮ್ಮ ಪ್ರತಿನಿಧಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಲಾಕಡೌನ್ ಮುಗಿಯುವವರೆಗೆ ಮಾತೃಭೂಮಿ ಸೇವಾ ಸಮಿತಿಯಿಂದ ಸಿಬ್ಬಂದಿಗಳಿಗೆ ಉಚಿತವಾಗಿ ಆಹಾರ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.