ರಾಯಚೂರು: ಕಲಬುರಗಿ ವಿಶ್ವವಿದ್ಯಾಲಯದ ಬಿ.ಕಾಂ ಸೆಕೆಂಡ್ ಸೆಮ್, ಪ್ರಶ್ನೆ ಪತ್ರಿಕೆಯ ಪರೀಕ್ಷೆಯನ್ನು ವಿದ್ಯಾರ್ಥಿಗಳು ಖಾಸಗಿ ಬಾಡಿಗೆ ಮನೆಯೊಂದರಲ್ಲಿ ಆಕ್ರಮವಾಗಿ ಪರೀಕ್ಷೆ ಬರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೌದು ಜಿಲ್ಲೆಯ ಐಡಿಎಸ್ ಬಡಾವಣೆಯ ವಿವೇಕಾಂದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಆಕ್ರಮವಾಗಿ ಪರೀಕ್ಷೆ ಬರೆಯುತ್ತಿದ 30ಕ್ಕು ಹೆಚ್ಚು ವಿದ್ಯಾರ್ಥಿಗಳು ಸಿಕ್ಕಾಕಿಕೊಂಡಿದ್ದಾರೆ. ಎಕನಾಮಿಕ್ಸ್ ಪ್ರಶ್ನೆ ಪತ್ರಿಕೆಗೆ ಉತ್ತರವನ್ನು ಖಾಸಗಿ ಬಾಡಿಗೆ ಮನೆಯೊಂದರಲ್ಲಿ ಆಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಆಗಮಿಸಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕಲಬುರಗಿ ವಿಶ್ವ ವಿದ್ಯಾಲಯದ ಪದವಿ ಪರೀಕ್ಷೆಗಳು ಎಲ್ಲಾ ಕ್ಲಸ್ಟರ್ ಆಗಿದ್ದು, ಇಂದು ನಡೆದಿರುವ ಬಿ.ಕಾಂ ಪರೀಕ್ಷೆ ಕೂಡ ಕ್ಲಸ್ಟರ್ ಪದ್ದತಿ ಇತು. ಆಕ್ರಮವಾಗಿ ನಡೆದ ಪರೀಕ್ಷೆಯಲ್ಲಿ ವಿವೇಕಾಂದ ಸೇರಿದಂತೆ ಇತರೆ ಕಾಲೇಜು ವಿದ್ಯಾರ್ಥಿಗಳು ಈ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಯಾವುದೇ ಮೂಲ ಸೌಕರ್ಯ ಇಲ್ಲದೆ ಹೋದರು ಪದವಿ ಕಾಲೇಜಗಳಿಗೆ ಹಣಕ್ಕಾಗಿ ನಾಯಿ ಕೊಡಿಗಳಂತೆ ಅನುಮತಿ ನೀಡುವ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿಯು ಭ್ರಷ್ಟಾಚಾರಿಗಳ ಅಡಾ ಆಗಿದೆ …..
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯ ಈ ಕೂಡಲೇ ಹಿಂತಾ ಕಾಲೇಜುಗಳನ್ನು ಮುಚ್ಚಬೇಕು…..
ಗುಲಬರ್ಗಾ ವಿಶ್ವ ವಿದ್ಯಾಲಯದ VC ಯವರಾದ ನಿರಂಜನ್ ಸಾಹೇಬರು ಈ ವಿಶ್ವವಿದ್ಯಾಲಯದ ಕುಲಪತಿ ಇದ್ದರೋ ಅಥವಾ ತಿಂಗಳಿಗೆ ಮೂರು – ನಾಲ್ಕು ದಿನಗಳ ಪ್ರವಾಸ ಮಾಡಲು ಬರುತ್ತಾರೆ .. ನಗರದಲ್ಲಿ ಎಲ್ಲಾದರು ಎರಡು ಮೂರು ಕಾರ್ಯಕ್ರಮ ಉದ್ಘಾಟಿಸಿ ದೊಡ್ಡ ದೊಡ್ಡ ಭಾಷಣ ಮಾಡಿ ಚಪ್ಪಾಳೆ ತಟ್ಟಿಸುಕೊಂಡು …
ಖರ್ಚಿಗೆ ಬರ್ತಿ ಮಾಡಿಕೊಂಡು ಹೋಗುವದೇ ಆಗಿದೆ ಇದರಿಂದ ವಿಶ್ವವಿದ್ಯಾಲಯದಲ್ಲಿ ಹಲವಾರು ಸಮಸ್ಯೆಗಳು ಬಗೆಹರಿಯದೆ ಪ್ರತಿದಿನ ಮಾದ್ಯಮ ಸುದ್ದಿಯಲ್ಲಿ ಬರುವದು ಖಂಡನೀಯ…