ಕೊರೋನಾ ವೈರಸ್: ನೃಪತುಂಗ ಕಾಲನಿಯಲ್ಲಿ ರಾಸಾಯನಿಕ ದ್ರಾವಣ ಸಿಂಪರಣೆ

0
75

ಕಲಬುರಗಿ: ನಗರದ ಹೊರ ವಲಯದ ನೃಪತುಂಗ ಕಾಲನಿಯಲ್ಲಿ ಭಾನುವಾರ ಸಂಜೆ ಸಾಂಕ್ರಾಮಿಕ ರೋಗ ನಿಯಂತ್ರಣ ರಾಸಾಯನಿಕ ದ್ರಾವಣವನ್ನು ಬಡಾವಣೆ ಪ್ರದೇಶಗಳಲ್ಲಿ ಗ್ರಾಪಂ ವತಿಯಿಂದ ಸಿಂಪಡಿಸಲಾಯಿತು.

ದೇಶದಲ್ಲಿ ದಿನದಿಂದ ದಿನಕ್ಕೆ ಕರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ‌ ಹೆಚ್ಚಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಬಿ. ಶಾಣಪ್ಪ ಅವರು ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಅವರ ಕಟ್ಟು ನಿಟ್ಟಿನ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ದೇಶದಲ್ಲೇ ಮೊದಲ ಬಲಿ ಪಡೆದ ಕಲಬುರಗಿಯಲ್ಲಿ ಈವರೆಗೆ ಕೇವಲ ಮೂರು ಪಾಸಿಟಿವ್ ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ಬಹುಶಃ ರೋಗ ಹರಡದಂತೆ ಜಿಲ್ಲಾಧಿಕಾರಿಯವರ ಕಟ್ಟು ನಿಟ್ಟಿನ ದಿಟ್ಟ ಕ್ರಮವೇ ಕಾರಣವಾಗಿದೆ ಎಂದು ಕಾಲನಿಯ ಸೂರ್ಯಕಾಂತ ನಾಶಿ, ಸೋಮಶೇಖರ ಆಳಂದ, ಯನೂಸ್ ಮುಂತಾದವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here