ಬಡವರಿಗೆ ಅಗತ್ಯ ವಸ್ತು ವಿತರಿಸಿ ಜನುಮ ದಿನ ಆಚರಿಸಿಕೊಂಡ ಪಿಎಸ್‌ಐ ಚೇತನ್

0
93

ಸುರಪುರ: ಇಂದು ಅನೇಕರು ತಮ್ಮ ಜನುಮ ದಿನವನ್ನು ಮುಗಿಲೆತ್ತರದ ಕಟೌಟ್‌ಗಳನ್ನು ಹಾಕಿಕೊಂಡು,ಹಾರ ತುರಾಯಿಗಳ ಧರಿಸಿಕೊಂಡು,ಪ್ರಚರಕ್ಕಾಗಿ ತಮ್ಮ ಜನುಮ ದಿನವನ್ನು ಆಚರಿಸಿಕೊಳ್ಳುವವರ ಮದ್ಯೆ ಅಪರೂಪವಾಗಿ ವಿಶೇಷ ಜನುಮ ದಿನವನ್ನು ಆಚರಿಸಿಕೊಂಡು ನಗರ ಠಾಣೆಯ ಪಿಎಸ್‌ಐ ಚೇತನ್ ಇತರರಿಗೆ ಮಾದರಿಯಾಗಿದ್ದಾರೆ.

ಈಗಾಗಲೆ ಸಂಚಾರಿ ನಿಯಮಗಳ ಪಾಲಿಸದವರಿಗೆ ಸರಿಯಾದ ಬಿಸಿ ಮುಟ್ಟಿಸುವ ಮೂಲಕ ಎಲ್ಲರಿಗು ಪರಿಚಿತರಾದ ಚೇತನ್ ಅವರು,ಈಗ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾದಾಗಿನಿಂದ ನಗರದಲ್ಲಿ ಅನಾವಶ್ಯಕವಾಗಿ ಬೈಕ್ ಹತ್ತಿ ಹೊರಗಡೆ ತಿರುಗಾಡುವವರಿಗೆ ಲಾಠಿಯಿಂದ ಬಿಸಿ ಮುಟ್ಟಿಸಿ ಬುದ್ಧಿ ಹೇಳುತ್ತಿದ್ದ ಅಧಿಕಾರಿ ಇಂದು ತನ್ನ ಜನುಮ ದಿನವನ್ನು ಬಡ ಜನರ ಬದುಕಿಗೆ ಆಸರೆಯಾಗುವ ಮೂಲಕ ಮಾದರಿ ಎನಿಸಿದ್ದಾರೆ.

Contact Your\'s Advertisement; 9902492681

ತಾಲೂಕಿನ ತಳವಾರಗೇರಾ ಗ್ರಾಮದಲ್ಲಿನ ಅನೇಕ ಬಡ ಕುಟುಂಬಗಳು ಕೊರೊನಾ ನಿರ್ಮೂಲನೆಗೆ ಭಾರತ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ದುಡಿಮೆಯಿಲ್ಲದೆ ಸಂಕಷ್ಟದಲ್ಲಿವೆ.ಕೆಲಸವು ಇಲ್ಲ ಇತ್ತ ಮನೆಯಲ್ಲಿ ಅಗತ್ಯ ವಸ್ತುಗಳಿಗು ತೊಂದರೆ,ಇಂತಹ ಕುಟುಂಬಗಳ ಕಷ್ಟವನ್ನು ತಿಳಿದು ಆ ಕುಟುಂಬಗಳಿಗೆ ಕನಿಷ್ಟ ಹತ್ತು ದಿನಗಳಿಗೆ ಆಗುವಷ್ಟು ಅಗತ್ಯ ವಸ್ತುಗಳಾದ ಅಕ್ಕಿ ಬೇಳೆ ಸಕ್ಕರೆ ಸಾಬೂನು ಹೀಗೆ ವಿವಿಧ ದಿನಸಿಗಳ ಕಿಟ್ ವಿತರಿಸುವ ಮೂಲಕ ತಮ್ಮ ಜನುಮ ದಿನವನ್ನು ಆಚರಿಸಕೊಂಡಿದ್ದಾರೆ.

ಈ ಕುರಿತು ಚೇತನ್ ಅವರು ಮಾತನಾಡಿ,ಬಡ ಜನರಿಗೆ ನೆರವಗುವುದಕ್ಕಿಂತ ದೊಡ್ಡ ಸೇವೆ ಬೇರೆನಿಲ್ಲ.ನಮ್ಮ ಕರ್ತವ್ಯದ ಜೊತೆಗೆ ಕಷ್ಟದಲ್ಲಿರುವವರಿಗೆ ನೆರವಾಗುವುದು ಎಲ್ಲರ ಕರ್ತವ್ಯವಾಗಬೇಕು.ಅಂದಾಗ ಜನರಲ್ಲಿ ಪ್ರೀತಿ ವಿಶ್ವಾಸ ಮೂಡಲು ಸಾಧ್ಯ.ಆದ್ದರಿಂದ ಇಂದು ಅನೇಕರು ಜನುಮ ದಿನ ಆಚರಿಸುವ ಕುರಿತು ಕೇಳಿದರು,ಆದರೆ ಅವರೆಲ್ಲರಿಗು ನಾನು ದೇಶವೆ ಕೊರೊನಾದ ಸಂಕಷ್ಟ ಹೆದರಿಸುವಾಗ ನನ್ನ ಜನುಮ ದಿನ ಆಚರಿಸುವುದು ಬೇಡವೆಂದು ನಿರಾಕರಿಸಿದೆ.ಆದರೆ ಕಷ್ಟದಲ್ಲಿರುವವರ ನೆರವಿಗೆ ನಿಲ್ಲುವ ಕಾರಣದಿಂದ ಅವರಿಗೆ ಒಂದಿಷ್ಟು ಸಹಾಯವಾಗುವ ಸೇವೆಗೆ ಮುಂದಾಗಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗಂಗಾಧರ ನಾಯಕ, ಪರಶುರಾಮ ನಾಟೆಕಾರ್,ತಿಗಳಪ್ಪ ಕವಡಿಮಟ್ಟಿ,ರಮೇಶ ಯಾದವ್,ಲಕ್ಷ್ಮಣ ಕವಡಿಮಟ್ಟಿ,ಬಸವರಾಜ ಹುಬ್ಬಳ್ಳಿ,ಪವನ್,ಚೇತನ್,ಆಕಾಶ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here