ಸುರಪುರ: ವ್ಯಾಪಾರವನ್ನೆ ಕುಲಸಬನ್ನಾಗಿಸಿದ ಆರ್ಯ ವೈಶ್ಯ ಸಮಾಜದ ಕುಲದೇವತೆಯಾದ ಶ್ರೀ ವಾಸವಿದೇವಿಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ನಗರದ ಶ್ರೀ ವಾಸವಿದೇವಿಯ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಭೀಮಸೇನ ಆಚಾರ ಅವರಿಂದ ದೇವಿಗೆ ಬೆಳ್ಳಿಗ್ಗೆ ಸುಪ್ರಭಾತಸೇವೆ ಹಾಗೂ ದೇವಿಗೆ ಕುಂಭಾಭೀಶೇಖ, ಕುಂಕುಮಾರ್ಚನೆ ಹಾಗೂ ವಿಶೇಷ ಅಲಂಕಾರ ನೇರವೇರಿಸಿ ಮಹಾಮಂಗಳಾರತಿಯನ್ನು ಮಾಡಲಾಯಿತು ಇದಕ್ಕೂಮೂನ್ನ ದೇವಿಯ ಬಿತ್ತಿಚಿತ್ರವನ್ನು ತಾಲೂಕಿನ ವಿವಧ ಕಡೆಯಿಂದ ಜಯಂತಿ ನಿಮಿತ್ಯ ಆಗಮಿಸಿದ ಸಮಾಜದವರು ನಗರದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ನಡೆಸಿದರು.
ನಂತರ ದೇವಸ್ಥಾನದಲ್ಲಿ ಬಂದು ದೇವಿಯ ಮಹಿಮೆ ಕುರಿತು ಪ್ರಧಾನ ಅರ್ಚಕರು ಮಾತನಾಡಿ ಶ್ರೀ ವಾಸವಿದೇವಿಯ ಮಹಿಮೆ ಅಪಾರವಾದದ್ದು ದೇವಿಯ ಪುರಾಣದಲ್ಲಿ ತಿಳಿಸಿದಂತೆ ಇಡಿ ಸಮಾಜವು ನಡೆದುಕೊಂಡು ಜಗತ್ತಿಗೆ ಮಾದರಿಯಾಗಿ ನಿಂತಿದೆ ಎಂದು ತಿಳಿಸಿದರು.
ಆರ್ಯವೈಶ್ಯ ಸಮಾಜದ ಅಧ್ಯಕ್ಷ ಗೋವಿಂದಯ್ಯ ಮುದಗಲ್, ಶ್ರೀನಿವಾಸ ಚಿದಳ್ಳಿ, ಶಿವು ದೇವರಶಟ್ಟಿ, ಮಂಜುನಾಥ ಕೋಸ್ಗಿ, ರಾಘವೇಂದ್ರ ರಾಜಲಬಂಡಿ, ಜನಾರ್ಧನ ಕೊಸ್ಗಿ, ಸತೀಶ ಇಲ್ಲೂರ, ಶ್ರೀರಂಗ ಮುದಗಲ್, ಆರ್.ಕೆ ರಾಮು, ಶ್ರೀನಿವಾಸ ಕೊಸ್ಗಿ, ವೆಂಕಟೇಶ ಚಿದಳ್ಳಿ, ವಿರೇಶ ಕೊಸ್ಗಿ ಸೇರಿದಂತೆ ಇನ್ನಿತರರಿದ್ದರು.