ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಆಹಾರ ಧಾನ್ಯಗಳ ವಿತರಣೆ

0
39

ಸುರಪುರ: ಕೊರೊನಾ ಭೀತಿಯಿಂದ ಮನೆಯಿಂದ ಹೊರಗೆ ಬರದೆ ಲಾಕ್‌ಡೌನ್ ಆಚರಿಸುತ್ತಿರುವ ನಗರದಲ್ಲಿನ ಬಡ ಜನತೆಗೆ ಆಗಿರುವ ತೊಂದರೆಯನ್ನು ಅರಿತ ವೀರಶೈವ ಲಿಂಗಾಯತ ಯುವ ವೇದಿಕೆ ಬಡವರ ಮನೆ ಬಾಗಿಲಿಗೆ ಹೋಗಿ ಆಹಾರ ಸಾಮಗ್ರಿಗಳು ಮತ್ತು ಸಾಬೂನು ಪೇಸ್ಟ್ ಮುಂತಾದ ಅಗತ್ಯ ವಸ್ತುಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ ಮಾತನಾಡಿ,ಇಂದು ಲಾಕ್‌ಡೌನ್ ಜಾರಿಯಿಂದಾಗಿ ಜನರು ಮನೆಯಿಂದ ಹೊರಗೆ ಬರದೆ ಜೀವನ ನಡೆಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ದಿನ ಕೂಲಿಮಾಡಿ ಜೀವನ ನಡೆಸುವ ಕುಟುಂಬಗಳು ಒಂದೊತ್ತಿನ ಊಟಕ್ಕು ಕಷ್ಟಪಡಬೇಕಾದ ಸ್ಥಿತಿ ಉಂಟಾಗಿದೆ.ಇದನ್ನು ಮನಗಮಡಿರುವ ನಮ್ಮ ವೀರಶೈವ ಲಿಂಗಾಯತ ಯುವ ವೇದಿಕೆಯು ನಗರದಲ್ಲಿ ಬಡ ಕುಟುಂಬಗಳ ಬಳಿಗೆ ಹೋಗಿ ಆಹಾರ ಧಾನ್ಯಗಳನ್ನು ನೀಡುವ ಜೊತೆಗೆ ಏನೆ ಕಷ್ಟವಾದರು ಕೊರೊನಾ ನಿರ್ಮೂಲನೆಯಾಗಬೇಕಾದರೆ ನಿಮ್ಮ ಸಹಕಾರ ಮುಖ್ಯವಾಗಿದೆ. ನೀವು ಮನೆಯಿಂದ ಹೊರಗೆ ಬರದಿದ್ದರೆ ಅದರಿಂದ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಂಡಂತಾಗಲಿದೆ, ಜೊತೆಗೆ ಬೇರೆಯವರನ್ನು ರಕ್ಷಣೆ ಮಾಡಿದಂತಾಗಲಿದೆ.ಆದ್ದರಿಂದ ನೀವು ಮನೆಯಿಂದ ಹೊರಗೆ ಬರದೆ ಮನೆಯಲ್ಲಿದ್ದು ಲಾಕ್‌ಡೌನ್‌ಗೆ ಬೆಂಬಲಿಸಿ.ನಿಮಗೆ ಬೇಕಾದ ಅಗತ್ಯ ವಸ್ತುಗಳನ್ನು ನಿಮ್ಮ ಮನೆಗೆ ತಂದು ಕೊಡುವುದಾಗಿ ತಿಳಿಸಿ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಿದರು.

Contact Your\'s Advertisement; 9902492681

ನಗರದ ಕಬಾಡಗೇರಾದಲ್ಲಿನ ಹಾಗು ತಾಲೂಕಿನ ತಳವಾರಗೇರಾದಲ್ಲಿನ ಬಡ ಜನರ ಮನೆಗಳಿಗೆ ಆಹಾರ ಧಾನ್ಯ ವಿತರಿಸಿದರು.ಈ ಸಂದರ್ಭದಲ್ಲಿ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಶೇಖರ ಡೊಣೂರ,ಪ್ರದೀಪ ಕದರಾಪುರ,ಜಗದೀಶ ಪಾಟೀಲ ಸುಗೂರ,ವೀರೇಶ ಪಂಚಾಂಗಮಠ,ಕೊಟ್ರಯ್ಯ ಸ್ವಾಮಿ,ಭಾಗೇಶ ಕಾಳಗಿ,ಶಿವುಕುಮಾರ ಹಳ್ಳದ,ಮಲ್ಲಿಕಾರ್ಜುನ ಹಳ್ಳದ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here