ಎರಡು ತಿಂಗಳ ಪಡಿತರ ವಿತರಿಸದ ಡೀಲರ್ ಮೇಲೆ ಕ್ರಿಮಿನಲ್ ಕೇಸ್: ರಾಜುಗೌಡ

1
101

ಸುರಪುರ: ಕೊರೊನಾ ನಿರ್ಮೂಲನೆಗಾಗಿ ಸರಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಜನತೆಗೆ ಬದುಕು ನಡೆಸಲು ಕಷ್ಟವಾಗಲಿದೆ ಎಂದಬುದನ್ನ ಅರಿತಿರುವ ಸರಕಾರ ಎಲ್ಲಾ ಪಡಿತರ ಚೀಟಿದಾರರಿಗೆ ಎರಡು ತಿಂಗಳ ರೇಷನ್ ಉಚಿತವಾಗಿ ನೀಡುತ್ತಿದ್ದು,ಪಡಿತರ ಬಡವರ ಮನೆ ಬಾಗಿಲಿಗೆ ತಲುಪಿಸುವಂತ ಕೆಲಸವನ್ನು ರೇಷನ್ ಡೀಲರ್‌ಗಳು ಮಾಡಬೇಕು.ಪಡಿತರ ನೀಡದ ಡೀಲರ್‌ಗಳ ಮೇಲೆ ಕ್ರಮಿನಲ್ ಕೇಸ್ ಹಾಕಲಾಗುವುದು ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಜನತೆಗೆ ಯಾವುದೆ ರೀತಿಯಿಂದ ತೊಂದರೆಯಾಗಬಾರದೆಂದು ಸರಕಾರ ಉಚಿತ ಪಡಿತರ ನೀಡುತ್ತಿದೆ.ಯಾವುದೆ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲದ ಗ್ರಾಮಕ್ಕೂ ಆಹಾರ ಧಾನ್ಯಗಳನ್ನು ಹೊಯ್ದು ಶಾಲೆ ಅಥವಾ ಅಂಗನವಾಡಿ ಕೇಂದ್ರದಲ್ಲಿ ಇಟ್ಟು ಪ್ರತಿಯೊಬ್ಬರಿಗು ಪಡಿತರ ಧಾನ್ಯ ನೀಡಬೇಕು.ಯಾವುದೆ ಕಾರಣಕ್ಕೂ ಒಂದು ರೂಪಾಯಿಯನ್ನು ಕೂಡ ಪಡೆಯುವಂತಿಲ್ಲ.ಅಲ್ಲದೆ ಯಾರಿಗಾದರೂ ಪಡಿತರ ಚೀಟಿ ಇಲ್ಲದಿದ್ದರೆ ಅಂತವರಿಗೂ ಉಚಿತ ಪಡಿತರ ನೀಡಲು ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಸರ್ವೆ ಮಾಡಿಸಿ ಅಂತವರಿಗೂ ಪಡಿತರ ನೀಡಲಾಗುವುದು.

Contact Your\'s Advertisement; 9902492681

ಈಗಾಗಲೆ ಸರಕಾರ ಬೆರಳ ಗುರುತು ಪಡೆಯುವುದನ್ನು ಕೊರೊನಾ ಹರಡುವ ಸಾಧ್ಯತೆಯಿಂದ ರದ್ದುಪಡಿಸಿದೆ,ಅಲ್ಲದೆ ಕೆಲವು ಪಡಿತರ ಚೀಟಿಗಳಿಗೆ ಮೊಬೈಲ್ ಸಂಖ್ಯೆ ಜೊಡಣೆ ಮಾಡಿರದಿದ್ದಲ್ಲಿ ಅಂತಹ ಕಾರ್ಡುದಾರರಿಂದ ಬರೆಯಿಸಿಕೊಂಡು ರೇಷನ್ ಕೊಡಲು ಜಿಲ್ಲಾಧಿಕಾರಿಗಳಿಗೆ ನಿಯಮ ರೂಪಿಸಲು ಮನವಿ ಮಾಡಲಾಗಿದೆ ಎಂದರು.

ಕೊರನಾ ಜೊತೆಗೆ ಗ್ರಾಮೀಣ ಭಾಗದಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಬಾರದಂತೆ ನೋಡಿಕೊಳ್ಳುವ ಜವಬ್ದಾರಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಮೇಲಿದೆ.ಯಾವುದೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಅದಕ್ಕೆ ಆಯಾ ಗ್ರಾಮ ಪಂಚಾಯತಿ ಅಧಿಕಾರಿಗಳನ್ನೆ ಹೊಣೆಯಾಗಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here