ಆಶ್ರಯ ಕಾಲೋನಿ ನಿವಾಸಿಗಳಿಗೆ ಆಹಾರ ಪದಾರ್ಥ ವಿತರಣೆ

0
44

ಶಹಾಬಾದ: ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದರೆ ಅದಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಮಂಗಳವಾರ ನಗರದ ರಾಮಘಡ ಆಶ್ರಯ ಕಾಲೋನಿಯ ಬಡಜನರಿಗೆ ಹಾಗೂ ನಿರ್ಗತಿಕರ ಕುಟುಂಬದವರಿಗೆ ಆಹಾರ ಪದಾರ್ಥಗಳನ್ನು ನೀಡಿ ಮಾತನಾಡಿ, ಕರೋನಾ ರೋಗಕ್ಕೆ ಯಾವುದೇ ಮದ್ದಿಲ್ಲ.ತಾವು ಮನೆಯಲ್ಲಿರುವುದೇ ಅದಕ್ಕೆ ಮದ್ದು.ಆದ್ದರಿಂದ ಯಾರು ಮನೆಯಿಂದ ಅನಾವಶ್ಯಕವಾಗಿ ಹೊರಗೆ ಬರಬೇಡಿ.ಆದಷ್ಟು ಸಾಮಾಜಿಕ ಅಂತರ ಕಾಪಾಡಿ. ಯಾವುದೇ ಕಾರಣಕ್ಕೂ ಬಡಜನರು ಆಹಾರಕ್ಕಾಗಿ ತೊಂದರೆಪಡಬಾರದೆಂಬ ಉದ್ದೇಶದಿಂದ ಆಹಾರದ ಪೊಟ್ಟಣಗಳನ್ನು ವಿತರಿಸಲಾಗುತ್ತಿದ್ದು, ಅದನ್ನು ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು ತೆಗೆದುಕೊಳ್ಳಬೇಕೆಂದು ಹೇಳಿದರು.

Contact Your\'s Advertisement; 9902492681

ಬಿಜೆಪಿ ನಗರಾಧ್ಯಕ್ಷ ಅಣವೀರ ಇಂಗಿನಶೆಟ್ಟಿ ಮಾತನಾಡಿ, ಶಾಸಕರು ತಮ್ಮ ಮತಕ್ಷೇತ್ರದ ಜನರು ಆಹಾರ ತೊಂದರೆ ಪಡಬಾರದೆಂಬ ಉದ್ದೇಶದಿಂದ ಪೊಟ್ಟಣದಲ್ಲಿ ಮನೆಗೆ ಬೇಕಾದ ಅಗತ್ಯ ವಸ್ತುಗಳಾದ ಅಕ್ಕಿ, ಗೋಧಿ ಹಿಟ್ಟು, ಎಣ್ಣೆ, ಸಕ್ಕರೆ, ಹಾಲು, ಚಹಾಪತ್ತಿ, ಜೀರಗಿ, ಸಾಸಿವೆ ಸೇರಿದಂತೆ ಅನೇಕ ವಸ್ತುಗಳನ್ನು ನೀಡಿದ್ದಾರೆ. ಈಗಾಗಲೇ 500 ಜನಕ್ಕೆ ನೀಡಿದ್ದು, ಇನ್ನುಳಿದ 150 ಜನರಿಗೆ ನಾಳೆ ನೀಡಲಾಗುವುದೆಂದು ತಿಳಿಸಿದರು.
ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತೆ ನೀಲಗಂಗಾ ಬಬಲಾದ, ತಹಸೀಲ್ದಾರ ಸುರೇಶ ವರ್ಮಾ, ನಿಂಗಣ್ಣ ಹುಳಗೋಳಕರ್, ಚಂದ್ರಕಾಂತ ಗೊಬ್ಬೂರಕರ್, ಸುಭಾಷ ಜಾಪೂರ, ರವಿ ರಾಠೋಡ, ಸದಾನಂದ ಕುಂಬಾರ,ಕನಕಪ್ಪ ದಂಡಗುಲಕರ್, ಅಣ್ಣಪ್ಪ ದಸ್ತಾಪೂರ,ಭೀಮಯ್ಯ ಗುತ್ತೆದಾರ, ಶ್ರೀಧರ್ ಜೋಷಿ, ಡಿ.ಸಿ.ಹೊಸಮನಿ, ಅಮರ ಕೋರೆ, ಸಂಜಯ ಕೋರೆ, ಶರಣು ಕವಲಗಿ,ದುರ್ಗಪ್ಪ ಪವಾರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here