ನಾನು, ನನ್ನಿಂದಲೇ ಎಂಬ ಭ್ರಮೆ ಕಳಚಿದ ಕೊರೊನಾ

0
257

“ಸ್ವಾರ್ಥದಿಂದ ನಿಸ್ವಾರ್ಥದೆಡೆಗೆ ” ಈ ಭುವಿಗೆ ಹುಟ್ಟಿ ಬರುವ ಪ್ರತಿಯೊಬ್ಬ ಮನುಷ್ಯಪ್ರಾಣಿಯು ಹುಟ್ಟಿನಿಂದ ಸಾವಿನತನಕ ಮಧ್ಯದ ಜೀವನದುದ್ದಕ್ಕೂ ಕಲಿಯುತ್ತ, ಕಲಿಸುತ್ತ ಹೋಗುತ್ತಾನೆ,ಕಲಿಕೆ ಎಂಬುವುದು ನಿರಂತರ ನಡೆಯುವ ಒಂದು ಪ್ರಕ್ರಿಯೆಯಾಗಿದೆ.(LEARNING HAS NO END) ಎಲ್ಲವನ್ನು ಕಲಿತಿದ್ದೆವೆ ಎಂದು ಹೇಳ ಲಾಗದು,ಕಲಿಯುವುದು ಬಹಳಷ್ಟಿದೆ,ಆದರೆ ಆಯುಷ್ಯ ಕಡಿಮೆಯಿದೆ.ಒಬ್ಬ ಕವಿ ಹೇಳುತ್ತಾನೆ. “ಸರ್ವರೊಳು ಒಂದೊಂದು ವಿದ್ಯಯನು ಕಲಿತು ಗರ್ವದಿಂದಾದ ಸರ್ವಜ್ಣ” ನಾವು ಕಲಿಯುವುದು ಕೇವಲ ಮನುಷ್ಯರಿಂದ ಮಾತ್ರವಲ್ಲ ಪ್ರಾಣಿ,ಪಕ್ಷಿಗಳಿದ ಸಮಯ,ಸಂದರ್ಭದಿಂದ ಅದಕ್ಕಿಂತ ಹೆಚ್ಚು ನಿಸರ್ಗದಿಂದ ನಾವು ಏನೆಲ್ಲಾ ಕಲಿಯುತ್ತೆವೆ ಎಂದು ಹೇಳಬಹುದು.

ಮನುಷ್ಯನ ಪ್ರತಿ ಹಂತದಲ್ಲಿ ಒಂದು ಕಲಿಕೆ ಅದರ ಅನುಭವ ಪದೆದುಕೊ ಳ್ಳುತ್ತಾನೆ.ಕೆಲವೊಂದು ತಾನಾಗಿ ತಿಳಿದುಕೊಂಡರೆ ಇನ್ನೂ ಕೆಲವೊಂದು ನೋಡಿ ಮಾಡಿ ಕಲಿಯುತ್ತಾನೆ.ಹಾಗೆ ಜೀವನವು ಒಂದು ಪಾಠವಿದ್ದಂತೆ ಬದುಕುವ ರೀತಿ ನೀತಿಗಳೆ ಅಧ್ಯಯನಗಳಾ ಗುತ್ತವೆ.ಮನುಜ ತಿಳಿದು ಮಾಡುವ ತಪ್ಪಿಗು ತಿಳಿಯದೆ ತಪ್ಪಿಗು ವ್ಯತ್ಯಾಸ ಮತ್ತು ಏನೆಲ್ಲಾ ಅನುಭವ ಪಡೆಯುತ್ತಾನೆ.ಈಗಾಗಲೇ ಮನುಜ ನಿರ್ಮಿಸಿದ ಒಂದು ವೈರಾಣು ಪ್ರಪಂಚದಾದ್ಯಂತ ಕೊರೋನಾ ವೈರಸ್ ಸೊಂಕಿನ ಪ್ರಭಾವವು ಮನುಜಕುಲಕ್ಕೆ ತಲ್ಲಣಗೊಳಿಸಿದೆ.ತಿಲಿದವನು ಅರಿತವನು ಗೊತ್ತಿದ್ದು ತನ್ನ ಸ್ವಾರ್ಥ ವಿಚಾರದಿಂದ,ನಿಸರ್ಗದ ಮೂಲಕ ಕೆಟ್ಟ ದುಷ್ಪರಿಣಾಮಗಳನ್ನು ಬೀರುತ್ತಿದ್ದಾನೆ.ಕೊರೋನಾ ಸೋಂಕು ತಗುಲಿ ಪ್ರಪಂಚದಲ್ಲಿ ಸಾವಿರಾರು ಜನರು ಬಲಿಯಗುತ್ತಿದ್ದಾರೆ.

Contact Your\'s Advertisement; 9902492681

ಅದರ ಪ್ರಭಾವದಿಂದ ಮನುಜನ ಬದುಕು,ಜೀವನ ವ್ಯವಸ್ಥೆಗಳು ಅಸ್ಥ ವ್ಯಸ್ಥವಾಗಿವೆ.ಈ ಸೋಂಕಿನಿಂದ ಕೇ ಂದ್ರ ಹಾಗೂ ರಾಜ್ಯ ಸರಕಾರಗಳು ಹತ್ತಾರೂ ರೀತಿಯ ಕ್ರಮಗಳನ್ನು ಕೈಗೊಂಡು ಯಾವುದೆ ಮನುಜರು ಎಲ್ಲಿಯೂ ಹೋಗದಂತೆ ಯಾವ ಕೆಲಸವು ಮಾಡದಂತೆ ಮನುಜನಿಂದ ಮನುಜ ರಕ್ಷಿಸಿಕೊಳ್ಳುವಂತೆ ಒಬ್ಬನಿಂದ ಇನ್ನೊಬ್ಬನಿಗೆ ಕೊರೋನಾ ವೈರಸ್ ಸೋಂಕು ಹರಡದಂತೆ ನಂಮೆಲ್ಲರನ್ನು ಮನೆಯಲ್ಲಿ ಬಂಧಿಸಿ ಕೂಡಿ ಹಾಕಿಬಿಟ್ಟಿದೆ.ಇದು ನಮ್ಮೆಲ್ಲರ ಬದುಕಿಗೆ ಮನುಕುಲಕ್ಕೆ ಹೊಸ ಪಾ ಠವಿದ್ದಂತೆ ಈ ಸೋಂಕು ಸಾವುಗಳನ್ನು ಕದಿಯುವುದೆಂದರೆ ಶ್ರೀಮಂತ,ಬಡವ,ಹಿಂದುಳಿದವ,ಬ್ರಾಹ್ಮಣ,ಲಿಂಗಾಯತ,ದಲಿತ,ಮುಸ್ಲಿಮ ಕೃಶ್ಚನರೆನ್ನದೆ ತಪ್ಪು ಮಾಡಿದವರನ್ನು ಮಾಡುತ್ತಿರುವವರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿದೆ,ಮನುಜ ತಾನು ಸಾಯುವುದಲ್ಲದೆ ಇನ್ನೊಬ್ಬರನ್ನು ಸಾಯಿಸುತ್ತಿದ್ದಾನೆ.ಇದು ಎಲ್ಲರನ್ನು ಮನೆಯಲ್ಲಿಯೇ ಇರುವಂತೆ ಲಾಕ್ ಡೌನ್ ಮಾಡಿದ ಹೊಸ ಅಧ್ಯಯ ನವಾಗಿದೆ.ಅಣ್ಣ ಬಸವಣ್ಣನವರು ಹೇಳುವಂತೆ, . “ದಯವಿಲ್ಲದಾ ಧರ್ಮ ಅದಾವುದಯ್ಯಾದಯವಿರಬೇಕು ಸಕಲ ಪ್ರಾಣಿಗಳಲ್ಲಿಯು|ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ಹೇಳಿದ ಆ ವಾಣಿ ಶತ ಶತಮಾನಗಳಿಗು ಸತ್ಯಂಶವಾಗಿದೆ.

“ದಯವಿಲ್ಲದ ಧರ್ಮ ಅದಾವುದಯ್ಯ ದಯವಿರಬೇಕು ಸಕಲ ಪ್ರಾಣಿಗಳಲ್ಲಿಯು ದಯವೇ ಧರ್ಮದ ಮೂಲವಯ್ಯ,ಎಂದು ಹೇಳಿರುವ ಮಾತು ಸತ್ಯವಾಗಿದೆ.” ಜಾತಿ, ಧರ್ಮಕ್ಕಿಂತ ಮಿಗಿಲಾಗಿರುವುದು ಮನುಜಕುಲ ಮಾತ್ರ ಎಂದರಿತು,ಸ್ವಾರ್ಥವ ತ್ಯಜಿಸಿ ನಿಸ್ವಾರ್ಥದ ಬದುಕಿನೊಂದಿಗೆ ತನ್ನ ಹಿತಕ್ಕಿಂತ ಪರರಹಿತ ಬಯಸುವುದು ಶ್ರೀಮಂತ, ಬಡವ, ದೀನ, ದಲಿತ, ಮೇಲು ಕೀಳು ಎಂಬ ತಾರತಮ್ಯ ಮಾಡಬಾರದೆಂಬ ಅರಿವು ನಮಗಾಯ್ತು.

ಸದಾ ನಮಗೆ ಟೈಮಿ ಲ್ಲಂತ ಹೇಳುವವರು ನಾವು,ಇಂದು ಮನೆಯಲ್ಲಿ ಲಾಕ್ಡೌನಾಗಿ ಸಮಯದ ಪರಿವೆ ನಮಗಾಗಿದೆ.ನಾವು ಒಂದು ಚಟಕ್ಕೆ ಅಂಟಿಕೊಂದವರಾದರೂ ಅದನ್ನು ಬಿಡಲು ಸಾಧ್ಯವಿಲ್ಲ ಎನ್ನುವವರಿಗೆ ಕೊರೋನಾ ಸಾಧ್ಯಮಾಡಿತೊರಿಸಿದೆ. ಸದಾ ಹಣಗಳಿಕೆಯಲ್ಲಿ ಹಪ ಹಪಿಸುತ್ತಿದ್ದ ನಾವು ಕೊರೊನಾದಿಂದ ಸೋತುಹೋದ ಇಟಲಿಯ ಜನರು ಹಣವೆಲ್ಲ ಬೀದಿಗೆ ಎಸೆದಾಗ ಮಾತ್ರ ಜೀವ ಮುಖ್ಯವೆನ್ನುವುದು ನಮಗೆ ಅರಿವು ಮೂಡಿತು.

ನಾನು ನನ್ನದು ನನ್ನಿಂದಲೆ ನಡೆಯುತ್ತದೆ ಎನ್ನುವ ಭ್ರಮೆಯು ಅಲ್ಲಿರುವುದು ನಮ್ಮ ಮನೆ ಇಲ್ಲಿಗೆ ಬಂದೆ ಸುಮ್ಮನೆ ಎನ್ನುವುದು ತಿಳಿದಮೇಲೆ,ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಕಾಲ ಕಳೆಯುವಂತೆ ಮಾಡಿದ ಕೊರೋನಾ ವೈರಸ್ ಸೋಂಕು ಮನುಕುಲಕ್ಕೆ ಒಂದು ಉತ್ತಮ ಸಂದೇಶ ಕೊಟ್ಟಿದೆ.ಅದರಿಂದ ನಾವು ಪಾಠ ಕಲಿತ್ತಿದ್ದೆವೆ ಎಂದರೆ ತಪ್ಪಾಗದು.

ಸಿ.ಎಸ್.ಮಾಲಿಪಾಟೀಲ ಅಧ್ಯಕ್ಷರು ಕಸಾಪ ತಾಲೂಕು ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here