ಆನ್ ಲೈನ್ ಬಸವ ಜಯಂತಿ ಆಚರಣೆ

0
246

ನವದೆಹಲಿ: ಕೋರೋನಾ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ಜಯಂತಿ, ಹಬ್ಬ ಆಚರಣೆಗಳು ನಿಂತಿವೆ. ಸಾಮಾಜಿಕ ಅಂತರ ಉಲ್ಲಂಘಿಸದೆ, ಮನೆಯಲ್ಲಿ ಕುಳಿತು ಬಸವ ಜಯಂತಿ ಯನ್ನು ವಿಶಿಷ್ಟವಾಗಿ ಆಚರಣೆ ಮಾಡಬಹುದು ಅನ್ನೋದಕ್ಕೆ ಒಂದು ಮಾದರಿ. ಇಂದು ರಾಜ್ಯ ಮತ್ತು ದೇಶದಾದ್ಯಂತ ಬಸವ ಜಯಂತಿ ಅದರ ಅಂಗವಾಗಿ ಸಮಾನ ಮನಸ್ಕರು ಕೂಡಿಕೊಂಡು ನಮ್ಮ ನಮ್ಮ ಮನೆಯಲ್ಲಿ ಬಸವ ಜಯಂತಿ ಆಚರಣೆ ನಿಮಿತ್ತ ಫೇಸ್ಬುಕ್ ಬಳಸಿಕೊಂಡು ಲೈವ್ ಅಲ್ಲಿ ವಚನಗಳ ಮತ್ತು ವಚನಕಾರರ ಸಂದೇಶ ಸಾರಿ ಮಾದರಿ ಆಗಿದ್ದಾರೆ.

ಇಂದು ಬೆಳಿಗ್ಗೆ ಫೇಸ್ಬುಕ್ ಲೈವ್ ಕಾರ್ಯಕ್ರಮ ಬೆಳಿಗ್ಗೆ 09:30 ಕೆ ಕಾರ್ಯಕ್ರಮದ ಆಯೋಜಕ ಭೀಮನಗೌಡ ಪರಗೊಂಡ. ವಕೀಲರು, ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕಾರ್ಯಕ್ರಮ ದ ಆಶಯ, ಗುರಿ, ಉದ್ದೇಶ, ಮತ್ತು ಶರಣರ ಬಗ್ಗೆ ವಿವರಿಸಿದರು.

Contact Your\'s Advertisement; 9902492681

ನಂತರ ಕಾರ್ಯಕ್ರಮದಲ್ಲಿ ಮೊದಲಿಗೆ ವಿಜಯಪುರ ಬಿ. ಎಲ್. ಡೀ. ಈ ಸಂಸ್ಥೆಯ ಪ್ರಚಾರ ಅಧಿಕಾರಿ ಹಾಗೂ ಶರಣ ತತ್ವ ಪ್ರಚಾರರಾದ ಮಹಾಂತೇಶ ಬಿರಾದಾರ ಪ್ರಸ್ತುತ ಪರಿಸ್ಥಿತಿ
, ಬಸವಣ್ಣ ಮತ್ತು ಶರಣರ ವಿಚಾರಗಳ ಅಗತ್ಯ ಬಗ್ಗೆ ವಿವಿರವಾಗಿ ಮಾತಾಡಿದರು. ನಂತರ ಕಲಬುರ್ಗಿ ಜಿಲ್ಲೆ ಹಿರಿಯ ಪತ್ರಕರ್ತರಾದ ಶೀವರಂಜನ ಸತ್ಯಂಪೇಟ
ಮಾತನಾಡಿ,ಬಸವಣ್ಣ ಲೋಕ ಸೂರ್ಯ. ಸೂರ್ಯ ಇರುವಲ್ಲಿ ಕತ್ತಲೆ ಹೇಗೆ ತನಗೆ ತಾನೆ ಕಾಲ್ತೆಗೆಯುವುದೋ ಹಾಗೆ ಬವವಣ್ಣ ಇರುವಲ್ಲಿ ಜಾತಿ ಸೂತಕ ಇಲ್ಲ. ಮತ ಮೌಢ್ಯಗಳಿಲ್ಲ. ಮೇಲು-ಕೀಳುಗಳಿಲ್ಲ. ಬಡವ-ಬಲ್ಲಿದನಿಲ್ಲ, ಜಾಣ-ದಡ್ಡನಿಲ್ಲ, ಸ್ತ್ರೀ-ಪುರುಷ ಎಂಬ ಲಿಂಗಭೇಧವಿಲ್ಲ. ಲಂಚ-ವಂಚನೆಗಳಿಲ್ಲ, ದರ್ಪ-ದಬ್ಬಾಳಿಕೆ ಇಲ್ಲ. ಇಲ್ಲಿ ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು, ಒಟ್ಟಿನ ಮೇಲೆ ಈ ನೆಲ ನೆಮ್ಮದಿಯ ನೆಲೆವನೆಯಾಗಬೇಕು. ಇದು ಬಸವಮಾರ್ಗ, ಶರಣಮಾರ್ಗದ ಕನಸು ಬಗ್ಗೆ ಒತ್ತಿ ಹೇಳಿದರು.

ನಂತರ, ವಿಜಯಪುರ ಜಿಲ್ಲೆಯ ರಾಷ್ಟ್ರೀಯ ಬಸವ ಸೇನೆ ಜಿಲ್ಲಾಧ್ಯಕ್ಷ ರವಿ ಬಿರಾದಾರ ಅವರು ಮಾತನಾಡಿ, ಬಸವಣ್ಣನವರ ಸಾಮಾಜಿಕ ಚಳುವಳಿ ಬಗ್ಗೆ, ಕಲಬುರ್ಗಿ ಯ
ಬಸವರಾಜ ಕೋಣಿನ್ ಸಿರನೂರ ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ತಾಲ್ಲೂಕಿನ ಆನಂದ ಏಣಗಿ ಅವರು ಬಸವಣ್ಣ ಮತ್ತು ಮಡಿವಾಳ ಮಾಚಿದೇವ, ಅಕ್ಕಮಹಾದೇವಿ ಅವರ ಕಲ್ಯಾಣ ರಾಜ್ಯ ಬಗ್ಗೆ ಹೇಳಿದ್ರು.

ಬೆಳಗಾವಿ ಜಿಲ್ಲೆಯ ಅಥಣಿ ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಶಿಂಗೆ ಅವರು, ಅಸ್ಪಶ್ಯತೆ, ಸಾಮಾಜಿಕ ನ್ಯಾಯ ಮತ್ತು ಬಸವಣ್ಣನವರ ವಚನಗಳು ಬಗ್ಗೆ ಅರ್ಥಪೂರ್ಣವಾಗಿ ಮಾತನಾಡಿದರು. ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ
ವಿಲಾಸ ಗೌತಮ್ ನಿಡಗುಂದಿ ಮಾತನಾಡಿ, ಕಲ್ಯಾಣ ಕ್ರಾಂತಿ ಯ ವಿಭಿನ್ನ ಆಯಾಮಗಳ ಬಗ್ಗೆ ವಿವರಿಸಿದರು..
ಧಾರವಾಡ ದ ಶರಣಪ್ಪ ಗೊಲ್ಲರ , ವ್ಯಕ್ತಿಯೊಬ್ಬ ಮೂಲತ ದರೋಡೆಕೋರ ಆಗಿ ಬಸವಣ್ಣ ಮತ್ತು ಶರಣರ ವಿಚಾರದಿಂದ ಪರಿವರ್ತನೆ ಆದ ಶರಣ ನನ್ನಯ್ಯ ಅವರನ್ನು ಪರಿಚಯಿಸಿ ಕೊಟ್ಟರು. ಕೊನೆಗೆ ಸಮಾರೋಪದ ಮಾತುಗಳು ವಕೀಲರು ಭೀಮನಗೌಡ ಪರಗೊಂಡ ಅವರು ಹೇಳಿದ್ರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here