ಮಸೀದಿಯಲ್ಲಿ ಕೇವಲ ನಾಲ್ಕು ಜನ ಮಾತ್ರ ನಮಾಜ್ ಮಾಡಿ: ಸಾಜೀದ್ ಖಾನ್

0
250

ಸೇಡಂ: ದೇಶದ್ಯಂತ ಕೊರೊನಾ ವೈರಸ್ ಆತಂಕ ಮೂಡಿಸಿದ್ದು, ಜಿಲ್ಲೆಯಲ್ಲಿ ದಿನೇ ದಿನೇ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಮುಂಜಾಗ್ರತೆಗಾಗಿ ಕಠಿಣ ಕ್ರಮಗಳು ಕೈಗೊಂಡಿದ್ದು, ಸೋಂಕು ನಿಯಂತ್ರಣ ಸವಾಲಾಗಿ ಪರಿಣಮಿಸಿದೆ.

ಈ ಹಿನ್ನೆಲೆಯಲ್ಲಿ ಪವಿತ್ರ ರಂಜಾನ್ ಪ್ರಯುಕ್ತ ಮಸೀದಿಯಲ್ಲಿ ನಮಾಜ್ ನಿರ್ವಹಿಸಲು ನಾಲ್ಕು ಜನರಿಗೆ ಪೊಲೀಸ್ ಇಲಾಖೆಯಿಂದ ಪಾಸ್ ಪಡೆದವರಿಗೆ ಮಾತ್ರ ಅವಕಾಶ ಇದೆ ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಅಧ್ಯಕ್ಷ ಸಾಜಿದ್ ಖಾನ್  ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಈ ಕುರಿತು ಮಾತನಾಡಿದ ಅವರು ಪಟ್ಟಣದಲ್ಲಿ ಬಡವರಿಗೆ ಹಾಗೂ ನಿರ್ಗತಿಕರಿಗೆ  ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ವತಿಯಿಂದ, ಇಲ್ಲಿನ ಮೋಮಿನ್ ಪುರಾ 48, ಇಂದಿರಾ ನಗರದಲ್ಲಿ 35 ಜನರಿಗೆ, ಇಂತಹ 16 ವಾರ್ಡ್ ಗಳಲ್ಲಿ 220 ಜನರಿಗೆ ಹೊದಿಕೆಗಳು ಮತ್ತು 50 ಆಹಾರ ಧಾನ್ಯ ಕಿಟ್ ವಿತರಿಸಿದರು.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ, ಕೂಲಿ ಕಾರ್ಮಿಕರಿಗೆ ಮತ್ತು ಕಡು ಬಡವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುವುದಾಗಿ ಅವರು ಇ-ಮೀಡಿಯಾ ಲೈನ್ ಜೊತೆ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಇಕ್ಬಾಲ್ ಖಾನ ಸಾಬ್, ಮೌಲಾನಾ ಯಾಸಿನಸಾಬ್, ಮೊಹಮ್ಮದ್ ಜಾವಿದ್ ನಿರನಾವಿ , ಅಜೀಜ್ ಖಾನ ಸಾಬ್, ಮುಬಿನ್ ಖಾನ್ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here