ಕೊರೊನ ವೈರಸ್ ಲಾಕ್ ಡೌನ್.. ತತ್ತರಿಸಿ ಹೊದ ರೈತರು

0
111

ಕೊರೊನ ವೈರಸ್ ರೊಗದಿಂದ ನಿರಾವರಿ ರೈತರು ಬೆಳೆದ ತರಕಾರಿ ಬೆಳೆಗಳು ಲಾಕ್ ಡೌನ್ ಆಗಿರುವುದರಿಂದ ಮಾರ್ಕೇಟ್ ಬಂದಾಗಿ ರೈತರು ಕಂಗಾಲಾಗಿದ್ದಾರೆ ತರಕಾರಿ ಬೇಳೆ ಬೆಳೆದಿದ್ದಾರೆ ಬೆಂಡಿಕಾಯಿ ಬದನೆಕಾಯಿ ಟೊಮ್ಯಾಟೊ ಹೀರೇಕಾಯಿ ಗಜ್ಜರಿ ಮೆಣಸಿನಕಾಯಿ ಸೌತೆಕಾಯಿ.ಬಿಜ ದುಬಾರಿ ಬೆಲೆ ಖರಿದಿ ಮಾಡಿ ಬೆಳೆ ಬೆಳೆಯುವ ರೈತರಿಗೆ 3 ಬಾರಿ ಕಳೆ ತೆಗೆಸಿ 3 ಬಾರಿ ಔಷಧಿ ಸಿಂಪರಣೆ ಮಾಡಿದರೆ.4 ದಿನಕ್ಕೊಮ್ಮೆ ನೀರು ಬಿಟ್ಟು.ಬೆಳೆದ ತರಕಾರಿ ಬೆಳೆಗಳು ಮಾರಾಟ ವಾಗಲಾರದೆ ಲಾಗೊಡಿ ಮಾಡಿದ ರೈತರು ಈ ಬೆಳೆ ಮೇಲೆ ಅವಲಂಬಿತವಾಗಿದ ರೈತರಿಗೆ ಈಗಾಗಲೇ ನಿರಾಶದಾಯಕ ರಾಗಿದ್ದಾರೆ ಪ್ರತಿ ವಾರದಲ್ಲಿ ಎರಡು ಮೂರು ಬಾರಿ ತರಕಾರಿ ಕಡಿದು ಕಲಬುರಗಿ ಮಾರ್ಕೇಟ್ ಮತ್ತು ಹಳ್ಳಿಗಳಲ್ಲಿ ಸಂತೆಗಳಲ್ಲಿ ಕೂಡಾ ಸಂತೆ ಮಾರುಕಟ್ಟೆ ಬಂದಾಗಿರುವುದರಿಂದ . ಮತ್ತು ಮತ್ತು ಅಲ್ಲಲ್ಲಿ ರೈತರು ಕಾಯಿಪಲ್ಲೆ ತರಕಾರಿ ಮಾರಾಟ ಮಾಡುತ್ತಿದ್ದರು ಆದರೆ ಈ ಕೋರೊನ ವೈರಸ್ ಲಾಕ್ ಡೌನ್ ದಿಂದ ಮಾರ್ಕೇಟ್ ಸಂಪೂರ್ಣ ಬಂದಾಗಿದೆ .

ಅಲ್ಲದೆ ಸ್ವತಹ ರೈತರಿಗೆ ಟಂ ಟಂ ಆಟೊ ಬಾಡಿಗೆ ಮಾಡಿಕೊಂಡು ಹಳ್ಳಿಹಳ್ಳಿಗೆ ಹೊಗಿ ಮಾರಾಟ ಮಾಡಬೆಕಾದರೆ ಅಟೊ ಬಾಡಿಗೆ ದುಬಾರಿ ಆಗುತ್ತದೆ ಹಿಗಾಗಿ ರೈತರು ಪಾಡು ಹಳ್ಳಿ ಭಾಷೆಯಲ್ಲಿ ಹೇಳುತ್ತಾರೆ .ಚಾರಾಣೆ ಕೊಳಿ ಬಾರಾಣೆ ಮಸಾಲೆ.ಅನ್ನುವಹಾಗಿದೆ ಇನೋಂದು ರಿತಿಯಲ್ಲಿ ರೈತರು ತರಕಾರಿಗಳನ್ನು ಮಾರಾಟ ಮಾಡುವವರು .ಭಾಗವಾನರು ಅವರು ರೈತರು ಹತ್ತಿರ ಒಗ್ಗಟ್ಟು ಮುಗ್ಗು ಜೊಳ ಖರಿದಿ ಮಾಡಿದ ಹಾಗೆ .4 ರೂಪಾಯಿ ಕೆ.ಜಿ.ಬದನೆ ಕಾಯಿ ಟೊಮೋಟೊ ಬೆಂಡಿಕಾಯಿ ಬೆಕಾಬಿಟ್ಟಿಯಾಗಿ ಖರಿದಿ ಮಾಡಿ ಹಳ್ಳಿಗಳಲ್ಲಿ.ಸಿಕ್ಕಾಪಟ್ಟಿ ದುಬಾರಿ ಬೆಲೆಗೆ ಮಾರಾಟ ವ್ಯಾಪಾರ ಮಾಡುತ್ತಾರೆ.ಆದರೆ ರೈತರು ಹತ್ತಿರ ಖರಿದಿ ಮಾಡಿದ ಅದರ ಹತ್ತು ಪಟ್ಟು ಜಾಸ್ತಿ ‌ರೆಟಿಗೆ ವ್ಯಾಪಾರ ಮಾಡಿ ಲಾಭ ಮಾತ್ರ ವ್ಯಾಪಾರ‌ಸ್ಥರಿಗೆ .ಆದರೆ ನಿರಾವರಿ ರೈತರು ಕೈಗೆ ಚಿಪ್ಪು ಕೊಟ್ಟಂತಾಗಿದೆ ಹಿಗಾಗಿ ಕೇಲವರು ರೈತರು ಬದನೆಕಾಯಿ ಟೊಮ್ಯಾಟೊ ಹೀರೇಕಾಯಿ ಗಜ್ಜರಿ ಸೆವತಿಕಾಯಿ ಗಜ್ಜರಿ ಕಡಿದು ಆಕಳು ಎಮ್ಮೆ ಎತ್ತುಗಳಿಗೆ ಬೆಳೆದ ತರಕಾರಿ ಬೆಳೆಗಳು ಹಾಕುತ್ತಿದ್ದಾರೆ ಆದರೆ ರೈತರ ಮೈನಾತ್ ಅಮನಾ ದಂಡಾಗಿದೆ ಹಿಗಾಗಿ ರೈತರು ಕಂಗಾಲಾಗಿದ್ದಾರೆ.

Contact Your\'s Advertisement; 9902492681

ಉಳ್ಳಾಗಡ್ಡಿ ಬೆಳೆಗಾರರು ರೈತರು ತುಂಬಾ ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾರೆ ಉಳ್ಳಾಗಡ್ಡಿ ಬೆಳೆ ಮುರು ತಿಂಗಳು ಬೆಳೆಯಾಗಿದೆ ಆದರೆ ಉಳ್ಳಾಗಡ್ಡಿ ಮಾರ್ಕೇಟ್ ಕಲಬುರಗಿ . ಮತ್ತು ದೋಡ್ಡ ಮಾರ್ಕೇಟ್ ಬೆಂಗಳೂರು.ಹಾಗೂ ಹೈದರಾಬಾದ್ ಮಲಕಪೇಟ ಮಾರ್ಕೇಟ್ ಬಂದಾಗಿದೆ ಆದರೆ ಉಳ್ಳಾಗಡ್ಡಿ ಬೆಳೆ ಗೆ ಎರಡು ಬಾರಿ ರಸ ಗೋಬ್ಬರ ಮೂರು ಬಾರಿ ಕಳೆ . ನಾಲ್ಕು ಬಾರಿ ಔಷಧಿ ಸಿಂಪರಣೆ ಮಾಡಿದ್ದಾರೆ ಉಳ್ಳಾಗಡ್ಡಿ ಕಿತ್ತುವುದು ಉಳ್ಳಾಗಡ್ಡಿ ಕೊಯಿಲಿಕ್ಕೆ 200 ಹೆಣ್ಣು ಮಕ್ಕಳು ಕೂಲಿ ಆಳುಗಳ ಕೂಲಿಯಾಗಿರುತ್ತದೆ ಆದರೆ ಉಳ್ಳಾಗಡ್ಡಿ ಬೆಳೆಗಾರರ ರೈತರು ಉಳ್ಳಾಗಡ್ಡಿ ಇಟ್ಟು ಕಾಯ್ದಿಟ್ಟು ಮಾರುವಂತಿಲ್ಲ ಉಳ್ಳಾಗಡ್ಡಿ ಕೋಯ್ದು ಚಿಲಾ ದುಂಬಿ ಇಟ್ಟರೆ ಗಿಡದ ಕೆಳಗೆ ಕುಂಪಿ ಹಾಕಿಟ್ಟರೆ ಉಳ್ಳಾಗಡ್ಡಿ ಕೋಳೆತು ಹೋಗುತ್ತದೆ.

ಉಳ್ಳಾಗಡ್ಡಿ ಬೆಳೆ ಮೇಲೆ ಅವಲಂಬಿತವಾಗಿದ ರೈತರಿಗೆ ಈಗಾಗಲೇ ರೈತರು ತುಂಬಾ ಚಿಂತಾಜನಕ ಸ್ಥಿತಿಯಲ್ಲಿ ಇದ್ದಾರೆ ಉಳ್ಳಾಗಡ್ಡಿ ಖರಿದಿದಾರರು ಭಾಗವಾನರು ಕೋರೊನ ಇದೆ ರಿ ಅದಕ್ಕಾಗಿ 3 ರೂಪಾಯಿ.ಕೇಜಿ.4 ರೂಪಾಯಿ ಕೇಜಿ ರೇಟಿಗೆ ಖರಿದಿ ಮಾಡಿ ಇಲ್ಲಾಂದ್ರೆ ಬಿಸಿ ಎನ್ನುತ್ತಾರೆ ರೈತರು ಕಷ್ಟಾ ಪಟ್ಟು ದುಡಿದ ಬೆಳೆ ಮಾರಾಟ ವಾಗದ ಕಾರಣ ಗುಟ್ಟಿನ ಮೇಲೆ ಚೆಲ್ಲುತ್ತಿದ್ದಾರೆ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವುದು ಲಾಕ್ ಡೌನ್ ಎಫೇಕ್ಟ್ ಬಡವರು ಪರಿಸ್ಥಿತಿ ಅಧೊಗತಿಯಾಗಿದೆ ಹಿಂತಾ ಸಂಕಷ್ಟದಲ್ಲಿ ಸ್ವತಹ ಸರ್ಕಾರವೆ ಮುಂದಾಗಲಿಲ್ಲ ಇದೆ ಒಂದು ದುರಂತವಾಗಿದೆ.

-ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಅಧ್ಯಕ್ಷರು, ಕರ್ನಾಟಕ ಪ್ರಾಂತ್ಯ ರೈತ ಸಂಘಟನೆಯ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here