ಸುರಪುರದ ಗವಿ ಬುಧ್ದ ವಿಹಾರದಲ್ಲಿ ಗೌತಮ್ ಬುಧ್ದರ 2563ನೇ ಜಯಂತಿ ಆಚರಣೆ

0
124

ಸುರಪುರ: ಡಾ:ಬಿ.ಆರ್.ಅಂಬೇಡ್ಕರ ಜಯಂತ್ಯೋತ್ಸವ ಸಮಿತಿ ನೇತೃತ್ವದಲ್ಲಿ ನಗರದ ಗವಿ ಬುಧ್ದ ವಿಹಾರದಲ್ಲಿ ಸಾರಿಪುತ್ರ ಗೌತಮ್ ಬುಧ್ದರ ೨೫೬೩ನೇ ಜಯಂತಿ ಆಚರಿಸಲಾಯಿತು.ಬೌಧ್ಧ ಪೌರ್ಣಿಯ ಶನಿವರ ಬೆಳಿಗ್ಗೆ ಬುಧ್ಧ ವಿಹಾರದಲ್ಲಿ ಸೇರಿದಂತೆ ಅನೇಕ ಜನ ಬುಧ್ಧ ಅನುಯಾಯಿಗಳು ಬೆಳಿಗ್ಗೆ ೯ ಗಂಟೆಗೆ ಬುಧ್ದನ ಮೂರ್ತಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಮೇಣದ ಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿ ನಂತರ ಧಮ್ಮ ಧ್ವಾಜಾರೋಹಣ ನೆರವೇರಿಸಿ ಜಯಘೋಷ ಕೂಗಿ ವಿಜೃಂಭಣೆಯಿಂದ ಆಚರಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಡಾ:ಬಿ.ಆರ್.ಅಂಬೇಡ್ಕರ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ ಹೊಸಮನಿ ಮಾತನಾಡಿ,ಎರಡುವರೆ ಸಾವಿರ ವರ್ಷಗಳ ಹಿಂದೆ ಸಿಧ್ದಾರ್ಥನೆಂಬ ರಾಜನಾಗಿದ್ದ ಗೌತಮ್ ಬುಧ್ದರು ತನ್ನ ಸಾಮ್ರಾಜ್ಯದಲ್ಲಿನ ಜನರ ನೋವು ಕಷ್ಟಗಳ ಕಂಡು ಮರುಗಿ ರಾಜ್ಯಶಾಹಿಯನ್ನು ಬಿಟ್ಟು ಆತ್ಮಜ್ಞಾನಕ್ಕಾಗಿ ದೇಶ ಸಂಚಾರ ನಡೆಸಿ,ಬೋದಿ ವೃಕ್ಷದಡಿಯಲ್ಲಿ ಧ್ಯಾನಸ್ತನಾಗಿ ಕುಳಿತಾಗ ಮೂಡಿದ ಜ್ಞಾನದಿಂದಾಗಿ ಇಂದು ನಮಗೆಲ್ಲ ಗೌತಮ್ ಬುಧ್ದರಾಗಿ ಲೋಕ ಪಾವನಗೊಳಿಸಿದ್ದಾರೆ.ಅಲ್ಲದೆ ಗೌತಮ್ ಬುದ್ಧರು ನೀಡಿದ ಪಂಚಶೀಲಗಳ ಸಂದೇಶ ಅವರ ಜೀವನ ಅನುಭವವೆ ಧರ್ಮ ಸೂತ್ರಗಳಾಗಿವೆ.ಜಗತ್ತಿನ ಶಾಂತಿ ಬಯಸಿದ ಬುಧ್ದ ಮುಂದೆ ಬೌಧ್ಧ ಧರ್ಮವನ್ನೆ ಸ್ಥಾಪಿಸಿ ಬಾಬಾ ಸಾಹೇಬ್ ಅಂಬೇಡ್ಕರರಂತ ಮಹಾನ್ ಜ್ಞಾನಿಗಳಿಗು ಅವರು ಮತ್ತು ಬೌದ್ಧ ಧi ಪ್ರೇರಣೆಯಾಗಿದೆ ಎಂದರು.

Contact Your\'s Advertisement; 9902492681

ಮತ್ತೋರ್ವ ಮುಖಂಡ ರಾಹುಲ್ ಹುಲಿಮನಿ ಮಾತನಾಡಿ,ಮೊದಲಿಗೆ ಎಲ್ಲರಿಗು ಬುಧ್ಧನ ಧಮ್ಮ ಗೀತೆಯನ್ನು ಬೊಧಿಸಿ ನಂತರ ಮಾತನಾಡಿ,ಇಂದು ಜಗತ್ತಿನ ಅನೇಕ ಧರ್ಮUಳಿಗಿಂತ ಬೌಧ್ಧ ಧi ಮಾದರಿಯದ್ದಾಗಿದೆ.ಇವತ್ತು ಜಗತ್ತಿನ ಅನೇಕ ರಾಷ್ಟ್ರಗಳು ಬೌಧ್ಧ ಧರ್ಮವನ್ನು ಪಾಲಿಸುವ ಮೂಲಕ ಬುಧ್ದನನ್ನು ಒಪ್ಪಿವೆ.ಆದರೆ ಭಾರತದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಈ ಧರ್ಮ ಬೆಳೆಯಬೇಕಿದೆ ಎಂದರು.

ವೇದಿಕೆ ಸಮಿತಿ ಅಧ್ಯಕ್ಷ ನ್ಯಾಯವಾದಿ ಆದಪ್ಪ ಹೊಸಮನಿ,ಜಯಂತ್ಯೋತ್ಸವ ಸಮಿತಿ ಉಪಾಧ್ಯಕ್ಷರಾದ ನಾಗಣ್ಣ ಕಲ್ಲದೇವನಹಳ್ಳಿ,ನಿಂಗಣ್ಣ ಗೋನಾಲ,ಪ್ರಧಾನ ಕಾರ್ಯದರ್ಶಿ ರಾಜು ಕುಂಬಾರ,ಖಜಾಂಚಿ ಮಾಳಪ್ಪ ಕಿರದಹಳ್ಳಿ,ವೆಂಕಟೇಶ ಸುರಪುರ,ರಾಮಚಂದ್ರ ವಾಗಣಗೇರಾ,ರಾಮಣ್ಣ ಶೆಳ್ಳಿಗಿ,ಆಕಾಶ ಕಟ್ಟಿಮನಿ,ಚಂದಪ್ಪ ಪಂಚಮ್,ಅಜ್ಮೀರ್,ಹುಲಗಪ್ಪ ದೇವತ್ಕಲ್,ಅಪ್ಪಣ್ಣ ಗಾಯಕವಾಡ, ವೈಜನಾಥ ಹೊಸಮನಿ,ಹಣಮಂತ ಹೊಸಮನಿ,ಶರಣು ತಳವಾರಗೇರಾ,ಮಲ್ಲು ಕೆಸಿಪಿ,ರಾಜು ಕಟ್ಟಿಮನಿ,ಮಾನಪ್ಪ ಮೂಲಿಮನಿ,ಮಲ್ಲಿಕಾರ್ಜುನ ಮುಷ್ಠಳ್ಳಿ,ಶಂಕರ ಬೊಮ್ಮನಹಳ್ಳಿ, ರಮೇಶ ಬಡಿಗೇರ ಸ್ವಾಗತಿಸಿದರು,ಆನಂದ ಅರಕೇರಿ ನಿರೂಪಿಸಿದರು,ವಿಶ್ವನಾಥ ಹೊಸಮನಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here