50 ಜನರು ಮೀರದಂತೆ ಮದುವೆಗೆ ಅವಕಾಶ, ಯಾವ ಸೇವೆ ಸಿಗುತೆ ಯಾವುದಿಲ್ಲ? ಇಲ್ಲಿದೆ ಕಂಪ್ಲೀಟ್ ಡಿಟೈಲ್

0
379

ಕಲಬುರಗಿ: ಕೊರೋನಾ ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನಗಳನ್ವಯ ಸಾರ್ವಜನಿಕರ ಹಿತದೃಷ್ಟಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಕಂಟೇನ್‍ಮೆಂಟ್ ಝೋನ್ ಹೊರತುಪಡಿಸಿ ಉಳಿದ ಪ್ರದೇಶÀಗಳಿಗೆ ಕೆಲವೊಂದು ಸಡಿಲಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಸೋಮವಾರ ತಿಳಿಸಿದ್ದಾರೆ.

ಜಿಲ್ಲಾಡಳಿತದಿಂದ ಈಗಾಗಲೆ ಘೋಷಿಸಿರುವ ಹಾಗೂ ಘೋಷಿಸಲ್ಪಡುವ ಕಂಟೇನ್‍ಮೆಂಟ್ ಝೋನ್‍ಗಳಲ್ಲಿ ಲಾಕ್ ಡೌನ್ ಪ್ರಕ್ರಿಯೆಯು ಮುಂದುವರೆದು ಇದನ್ನು ಶೂನ್ಯ ಪ್ರದೇಶವೆಂದು ಘೋಷಿಸಿ ಯಾವುದೇ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂದು ಡಿ.ಸಿ. ಶರತ್ ಬಿ. ಅವರು ಸ್ಪಷ್ಠಪಡಿಸಿದ್ದಾರೆ.

Contact Your\'s Advertisement; 9902492681

ಲಾಕ್ ಡೌನ್ 3.0 ನಲ್ಲಿ ಅನುಮತಿ ನೀಡಿದ ಪ್ರಕರಣಗಳನ್ನು ಹೊರತು ಪಡಿಸಿ ಎಲ್ಲಾ ವಿಷಯಗಳಿಗೆ ಅನುಮತಿ ಇರುವುದಿಲ್ಲ ಎಂದು ಭಾವಿಸತಕ್ಕದ್ದು ಎಂದು ಡಿ.ಸಿ. ಅವರು ಸ್ಪಷ್ಠನೆ ನೀಡಿದ್ದಾರೆ.

ಲಭ್ಯವಿರುವ ಸೇವೆಗಳ ವಿವರ:
  1. ಜಿಲ್ಲಾಡಳಿತ ಘೋಷಿಸಿರುವ ಕಂಟೇನ್‍ಮೆಂಟ್ ಝೋನ್ ಹೊರತುಪಡಿಸಿ ಇನ್ನುಳಿದ ಸ್ಥಳಗಳಲ್ಲಿ ಮಾತ್ರ ಸಿಎಲ್-2 ಮತ್ತು ಸಿಎಲ್‍ಸಿ11-ಸಿ (ಒSIಐ ಮದ್ಯ ಮಳಿಗೆಗಳು) ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಜನದಟ್ಟನೆಯಾಗದಂತೆ ಪಾರ್ಸಲ್ ಮುಖಾಂತರ ಮಾರಾಟಕ್ಕೆ ಅನುಮತಿ. ಮದ್ಯದ ಅಂಗಡಿಗಳಲ್ಲಿ ನೀರಿನ ಬಾಟಲ್, ಸೋಡಾ, ತಂಪು ಪಾನೀಯ ಹಾಗೂ ತಿಂಡಿ ತಿನಿಸುಗಳ ಮಾರಾಟವನ್ನು ನಿಷೇಧಿಸಿದೆ.
  2.  ಜಿಲ್ಲಾ ವ್ಯಾಪ್ತಿಯೊಳಗೆ ಅವಶ್ಯ ಕಾರ್ಯಗಳಿಗೆ ಮಾತ್ರ ವಾಹನ ಸಂಚಾರವನ್ನು ಬೆಳಗ್ಗೆ 7 ರಿಂದ ರಾತ್ರಿ 7 ಗಂಟೆಯವರೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಪ್ರಯಾಣ ಮಾಡಲು ಅನುಮತಿ ನೀಡಿದೆ (ದ್ವಿಚಕ್ರ ವಾಹನದಲ್ಲಿ ಒಬ್ಬರಿಗೆ ಮಾತ್ರ ಹಾಗೂ ನಾಲ್ಕು ಚಕ್ರ ವಾಹನದಲ್ಲಿ ಚಾಲಕರು+ಇಬ್ಬರಿಗೆ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಕ್ಕೆ ಅವಕಾಶ)
     ಅಂತರ ಜಿಲ್ಲಾ ಪ್ರಯಾಣಕ್ಕೆ ಇಚ್ಚಿಸುವ ಸಾರ್ವಜನಿಕರು ಕಡ್ಡಾಯವಾಗಿ ಸರ್ಕಾರದ ಅಂತರ್ಜಾಲದಲ್ಲಿ https://kspclearpass.idp.mygate.comನಲ್ಲಿ ಮನವಿ ಸಲ್ಲಿಸಿ ಪರವಾನಿಗೆ ಪಡೆದು ಪ್ರಯಾಣಿಸಬಹುದು.
  3. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುತ್ತೋಲೆಯನ್ವಯ ಕೈಗಾರಿಕಾ ಘಟಕಗಳು, ಕಟ್ಟಡ ನಿರ್ಮಾಣ, ಕಟ್ಟಡ ನಿರ್ಮಾಣದ ಕಚ್ಚಾ ಹಾಗೂ ಬಿಡಿ ಸಾಮಾಗ್ರಿಗಳ ಮಾರಾಟ ಪ್ರಾರಂಭಿಸಲು ಅನುಮತಿ.
  4. ಅಗತ್ಯ ಮೂಲಭೂತ ಸೌಕರ್ಯಗಳ ದಿನಸಿ ಅಂಗಡಿಗಳು ಪ್ರಾರಂಭಿಸಲು ಅನುಮತಿ ನೀಡಲಾಗಿದೆ.
  5. ಎಲ್ಲಾ ತರಹದ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ಶೋರೂಂ ಹಾಗೂ ಸರ್ವಿಸ್ ಸೆಂಟರ್‍ಗಳು ಪ್ರಾರಂಭಿಸಲು ಹಸಿರು ನಿಶಾನೆ.
  6. ಹಾರ್ಡವೇರ್, ಎಲೆಕ್ಟ್ರೀಕಲ್ ಮಳಿಗೆಗಳು (ರೈತರ ಕೃಷಿ ಉದ್ಯಮಕ್ಕೆ ಸಂಬಂಧಪಟ್ಟಂತೆ) ತೆರೆಯಲು ಅವಕಾಶ ನೀಡಿದೆ.
  7. ಕೃಷಿ ಹಾಗೂ ನೀರಾವರಿಗೆ ಉತ್ತೇಜಿಸುವಂತಹ ರೈತರಿಗೆ ಅನ್ವಯಿಸತಕ್ಕ ಎಲ್ಲಾ ಅಂಗಡಿಗಳು ಪ್ರಾರಂಭಿಸಲು ಅನುಮತಿ ನೀಡಿದೆ.
  8. ಸರ್ಕಾರದ ಎಲ್ಲಾ ರೀತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ಪರವಾನಿಗೆಯ ಅವಶ್ಯಕತೆ ಇರುವುದಿಲ್ಲ.
  9. ಸಾರ್ವಜನಿಕರ ಮದುವೆಗಳಿಗೆ 50 ಜನ ಮೀರದಂತೆ ಸಂಬಂಧಪಟ್ಟ ತಹಶೀಲ್ದಾರರ ಅನುಮತಿ ಪಡೆದು ಆಯೋಜಿಸಲು ಅನುಮತಿ ನೀಡಿದೆ.
  10. ಮೃತ ಹೊಂದಿದ ಪ್ರಕರಣಗಳಲ್ಲಿ ಯಾವುದೇ ಪರವಾನಿಗೆ ಅವಶ್ಯಕತೆವಿಲ್ಲದೆ ಸಂಬಂಧಪಟ್ಟ ಪೆÇಲೀಸ್ ಠಾಣೆಗೆ ಮಾಹಿತಿ ನೀಡಿ 20 ವ್ಯಕ್ತಿಗಳು ಮೀರದಂತೆ ಅಂತ್ಯ ಸಂಸ್ಕಾರವನ್ನು ನೆರವೇರಿಸಬಹುದು.
ಲಭ್ಯವಿರದ ಸೇವೆಗಳು:
  • ಮಾಲ್, ಮಲ್ಟಿಪ್ಲೆಕ್ಸ್, ಸಿನಿಮಾ ಚಿತ್ರಮಂದಿರಗಳು ತೆರೆಯಲು ಅನುಮತಿ ಇರುವುದಿಲ್ಲ.
  • ಮಂದಿರ, ಮಸೀದಿ, ಗುರುದ್ವಾರ ಹಾಗೂ ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧ.
  • ಹೇರ್ ಕಟಿಂಗ್ ಸಲೂನ್ ಅಂಗಡಿಗಳು, ಮಸಾಜ್ ಸೆಂಟರ್ಸ್, ಈಜು ಕೊಳಗಳು, ಜಿಮ್‍ಗಳನ್ನು ತೆರೆಯುವಂತಿಲ್ಲ.
  • ಸದ್ಯಕ್ಕೆ ಹೋಟೆಲ್, ಲಾಡ್ಜ್, ಬೇಕರಿ ಅಂಗಡಿ ಹಾಗೂ ಬಟ್ಟೆ ಅಂಗಡಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿಲ್ಲ.
  • ಕಿರಾಣಾ ಅಂಗಡಿ, ಪಾನ್ ಅಂಗಡಿಗಳಲ್ಲಿ ಬೀಡಿ, ಸಿಗರೇಟ್, ಗುಟಕಾ, ಪಾನ್ ಬೀಡಾಗಳ ಮಾರಾಟ ಮಾಡುವಂತಿಲ್ಲ. ಸಾರ್ವಜನಿಕರು ಪಾನ್ ಬೀಡಾಗಳನ್ನು ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಸಹ ನಿಷೇಧ.
  • ಅನಾವಶ್ಯಕ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಅವಕಾಶವಿಲ್ಲ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here