ಕಲಬುರಗಿ: ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಮೇ 10 ರಂದು ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಜಯಂತಿ ಯನ್ನು ಅತ್ಯಂತ ಸರಳ ರೀತಿಯಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಚರಿಸೋಣ ಎಂದು ಎ.ಬಿ.ವಿ.ಎಂ.ಎಸ್ ಜಿಲ್ಲಾ ಅಧ್ಯಕ್ಷೆರಾದ ಡಾ. ನಾಗವೇಣಿ ಎಸ್ ಪಾಟೀಲ್ ಮನವಿ ಮಾಡಿದ್ದಾರೆ.
ತಾಯಂದಿರು, ಸಹೋದರಿಯರು ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಆದರ್ಶಗಳನ್ನು ಸ್ಮರಣೆ ಮಾಡಿಕೊಂಡು ಅವುಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂಬುದು ನಮ್ಮ ಅಶಯ, ಒಳ್ಳೆಯ ಸಂಸ್ಕಾರಯುತ ಆದರ್ಶದ ಬದುಕು ನಮ್ಮೆಲ್ಲದಾಗಿರಲಿ. ಇದಕ್ಕೆ ತಾಯಿ ಮಲ್ಲಮ್ಮನ ಕೃಪೆಯಿರಲಿ ಎಂದು ಪ್ರಾರ್ಥಿಸಿಸೋಣ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.