ಬಿಸಿ ಬಿಸಿ ಸುದ್ದಿ

ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ

ಸುರಪುರ: ಕೊರೊನಾ ಲಾಕ್‍ಡೌನ್ ಘೋಷಣೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನತೆಯ ನೆರವಿಗೆ ಕನ್ನಡ ಸಾಹಿತ್ಯ ಸಂಘ ಬಂದಿದೆ.ನಗರದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘ ಇಲ್ಲಿಯವರೆಗೆ ಅನೇಕ ಭಾಷೆ ಮತ್ತು ಸಾಂಸ್ಕøತಿಗೆ ಸಂಬಂಧಿಸಿದ ಕೆಲಸಗಳನ್ನು ಕಳೆದ 75 ವರ್ಷಗಳಿಂದ ಮಾಡುತ್ತಾ ಬರುತ್ತಿದ್ದು,ಈಗ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರಿಗೆ ಹಸಿವು ನೀಗಿಸುವತ್ತ ಮುಂದಾಗಿದೆ.

ನಗರದ ರಂಗಂಪೇಟೆಯಲ್ಲಿನ ಕನ್ನಡ ಸಾಹಿತ್ಯ ಸಂಘದಿಂದ ಗುರುವಾರ ಸಂಘದ ಕಚೇರಿಯಲ್ಲಿ ಅನೇಕ ಬಡ ಕುಟುಂಬಗಳಿಗೆ ಅಕ್ಕಿ ಬೇಳೆ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಕಿಟ್ ವಿತರಿಸಿದರು.ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಬೂದಿಹಾಳ ಮಾತನಾಡಿ,ಇಂದು ಕೊರೊನಾ ವೈರಸ್ ಇಡೀ ಜಗತ್ತಿಗೆ ನಡುಕ ಹುಟ್ಟಿಸಿದೆ.ಕಳೆದ 40 ದಿನಗಳಿಂದ ಲಾಕ್‍ಡೌನ್ ಮುಂದುವರೆದಿದ್ದು ಇದರಿಂದ ಬಡವರ ಕಷ್ಟ ವಿಪರೀತವಾಗಿದೆ.ಅಂದೆ ದುಡಿದು ಕುಟುಂಬ ನಿರ್ವಹಣೆ ಮಾಡುವವರ ಬದುಕು ಮೂರಾಬಟ್ಟೆಯಾಗಿದೆ.ಬಡ ಜನರು ಒಂದೊತ್ತಿನ ಊಟಕ್ಕು ಕಷ್ಟಪಡುವಂತಾಗಿದೆ.ಸರಕಾರ ಅವರ ನೆರವಿಗೆ ನಿಂತರು ಎಲ್ಲಾ ತೊಂದರೆಯನ್ನು ನಿವಾರಿಸಲಾಗದು. ಆದ್ದರಿಂದ ಬಡ ಜನರ ಕಷ್ಟ ಅರಿತು ನಮ್ಮ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘವು ಬಡ ಜನರ ಹಸಿವು ನೀಗಿಸುವ ನಿಟ್ಟಿನಲ್ಲಿ ಇಂದು ಆಹಾರ ಧಾನ್ಯಗಳ ವಿತರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಸಾಂಕೇತಿಕವಾಗಿ ಕಿಟ್ ವಿತರಿಸಲಾಯಿತು. ಸೋಮಶೇಖರ ಶಾಬಾದಿ,ಯಜ್ಞೇಶ್ವರ ಭಟ್,ಪತ್ರಕರ್ತ ಮಲ್ಲು ಗುಳಗಿ, ರಘುರಾಮ್ ಕಡಬೂರ,ವಲ್ಲಭ ಕಡಬೂರ,ಯಂಕಣ್ಣ ಟಿ.ಗದ್ವಾಲ್,ಪ್ರಕಾಶ ಅಲಬನೂರ ಸೇರಿದಂತೆ ಅನೇಕರಿದ್ದರು.

emedialine

Recent Posts

ಅರಿವು ಯೋಜನೆಯಡಿ ಶೈಕ್ಷಣಿಕ ಸಾಲಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು; ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಬೆಂಗಳೂರು ನಗರ ಕೇಂದ್ರೀಯ ವಿಭಾಗದಿಂದ 2023-24 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ…

3 mins ago

ನಾಳೆ ಶರಣಬಸವ ವಿಶ್ವವಿದ್ಯಾಲಯದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ನಿಂgದ ಅಪ್ರೆಂಟಿಸ್ಶಿ ಪ್ ಕ್ಯಾಂಪಸ್ ಆಯ್ಕೆ

ಕಲಬುರಗಿ; ಕರ್ನಾಟಕದಲ್ಲಿರುವ ಕೋಲಾರ ಮೂಲದ ಕಂಪನಿಯಾದ ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸೊಲ್ಯೂಷನ್ಸ್, ಜುಲೈ 06ರಂದು ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ…

21 mins ago

ಮಕ್ಕಳ ಸೃಜನಶೀಲತೆ ಅನಾವರಣಗೊಳಿಸಿದ ಮಣ್ಣೆತ್ತಿನ ಸ್ಪರ್ಧೆ

ರಾವೂರ: ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಮಣ್ಣೆತ್ತಿನ ಸ್ಪರ್ಧೆಯ ಅಂಗವಾಗಿ ಹಮ್ಮಿಕೊಂಡಿದ್ದ ಮಣ್ಣೇತ್ತು ಮಾಡುವ ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು…

4 hours ago

ವಾಡಿ: ಕುಸ್ತಿ ಪಂದ್ಯಾವಳಿ: 50ಗ್ರಾಂ.ಬೆಳ್ಳಿ ಕಡಗ ವಿಜೇತ ಮಂಜುನಾಥ

ಇಂಗಳಗಿ ಹಜರತ್ ಸೈಯದ್ ಶೇರ್.ಖಾನ್.ವಲಿ ದುರ್ಗಾದ 621ನೇ ಜಾತ್ರಾ ಮಹೋತ್ಸವ ವಾಡಿ: ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ಹಜರತ್ ಸೈಯದ್…

4 hours ago

ಹಿರಿಯ ನಾಗರಿಕರ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಅಗತ್ಯ: ಅರ್ಥಶಾಸ್ತ್ರಜ್ಞ ವಿಜಯ್ ದೇಶಮುಖ್

ಕಲಬುರಗಿ: ದೇಶದ ಹಿರಿಯ ನಾಗರಿಕರನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ ಅವರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರವು ಹಿರಿಯ ನಾಗರಿಕರ ಸಚಿವಾಲಯವನ್ನು…

6 hours ago

ಪ್ರಣವ್ ಮೆಂಡನ್ ಫಿಸಿಯೋಥೆರಪಿ ಪದವಿ ಪ್ರದಾನ

ಕಲಬುರಗಿ : ಜಿಲ್ಲಾ ಹೋಟೆಲ್ ಅಸೋಸಿಯೇಷನ್ ನ ಕಾರ್ಯದರ್ಶಿ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಸದಸ್ಯರಾದ ನರಸಿಂಹ ಮೆಂಡನ್ ಅವರ…

7 hours ago