ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ

0
67

ಸುರಪುರ: ಕೊರೊನಾ ಲಾಕ್‍ಡೌನ್ ಘೋಷಣೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನತೆಯ ನೆರವಿಗೆ ಕನ್ನಡ ಸಾಹಿತ್ಯ ಸಂಘ ಬಂದಿದೆ.ನಗರದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘ ಇಲ್ಲಿಯವರೆಗೆ ಅನೇಕ ಭಾಷೆ ಮತ್ತು ಸಾಂಸ್ಕøತಿಗೆ ಸಂಬಂಧಿಸಿದ ಕೆಲಸಗಳನ್ನು ಕಳೆದ 75 ವರ್ಷಗಳಿಂದ ಮಾಡುತ್ತಾ ಬರುತ್ತಿದ್ದು,ಈಗ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರಿಗೆ ಹಸಿವು ನೀಗಿಸುವತ್ತ ಮುಂದಾಗಿದೆ.

ನಗರದ ರಂಗಂಪೇಟೆಯಲ್ಲಿನ ಕನ್ನಡ ಸಾಹಿತ್ಯ ಸಂಘದಿಂದ ಗುರುವಾರ ಸಂಘದ ಕಚೇರಿಯಲ್ಲಿ ಅನೇಕ ಬಡ ಕುಟುಂಬಗಳಿಗೆ ಅಕ್ಕಿ ಬೇಳೆ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಕಿಟ್ ವಿತರಿಸಿದರು.ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಬೂದಿಹಾಳ ಮಾತನಾಡಿ,ಇಂದು ಕೊರೊನಾ ವೈರಸ್ ಇಡೀ ಜಗತ್ತಿಗೆ ನಡುಕ ಹುಟ್ಟಿಸಿದೆ.ಕಳೆದ 40 ದಿನಗಳಿಂದ ಲಾಕ್‍ಡೌನ್ ಮುಂದುವರೆದಿದ್ದು ಇದರಿಂದ ಬಡವರ ಕಷ್ಟ ವಿಪರೀತವಾಗಿದೆ.ಅಂದೆ ದುಡಿದು ಕುಟುಂಬ ನಿರ್ವಹಣೆ ಮಾಡುವವರ ಬದುಕು ಮೂರಾಬಟ್ಟೆಯಾಗಿದೆ.ಬಡ ಜನರು ಒಂದೊತ್ತಿನ ಊಟಕ್ಕು ಕಷ್ಟಪಡುವಂತಾಗಿದೆ.ಸರಕಾರ ಅವರ ನೆರವಿಗೆ ನಿಂತರು ಎಲ್ಲಾ ತೊಂದರೆಯನ್ನು ನಿವಾರಿಸಲಾಗದು. ಆದ್ದರಿಂದ ಬಡ ಜನರ ಕಷ್ಟ ಅರಿತು ನಮ್ಮ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘವು ಬಡ ಜನರ ಹಸಿವು ನೀಗಿಸುವ ನಿಟ್ಟಿನಲ್ಲಿ ಇಂದು ಆಹಾರ ಧಾನ್ಯಗಳ ವಿತರಿಸಲಾಗುತ್ತಿದೆ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಸಾಂಕೇತಿಕವಾಗಿ ಕಿಟ್ ವಿತರಿಸಲಾಯಿತು. ಸೋಮಶೇಖರ ಶಾಬಾದಿ,ಯಜ್ಞೇಶ್ವರ ಭಟ್,ಪತ್ರಕರ್ತ ಮಲ್ಲು ಗುಳಗಿ, ರಘುರಾಮ್ ಕಡಬೂರ,ವಲ್ಲಭ ಕಡಬೂರ,ಯಂಕಣ್ಣ ಟಿ.ಗದ್ವಾಲ್,ಪ್ರಕಾಶ ಅಲಬನೂರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here