ಎಚ್.ಕೆ.ಇ ಸಂಸ್ಥೆ ಇಂದ ಕೊರೊನಾ ರೋಗ ಧೃಡಪಡಿಸುವ ಪರೀಕ್ಷಾಕೇಂದ್ರ 

0
418

ಕಲಬುರಗಿ: ಕೊರೊನಾ ಮಹಾಮಾರಿಯು ವಿಶ್ವದೆಲ್ಲೆಡೆ ಸಾವಿರಾರುಜನರ ಬಲಿಪಡೆದು ಅಟ್ಟಹಾಸದಿ ಮೆರೆಯುತ್ತಿದೆ. ಇವರೆಗೆ ನಿಯಂತ್ರಣಕ್ಕಾಗಿ ವಿಶ್ವವೆ ಪರದಾಡುತ್ತಿದೆ, ನಮ್ಮ ಭಾರತದಲ್ಲಿಕೂಡ ಇದರ ರಣಕೆಕೆ ಮುಂದುವರೆದಿದೆ, ನಮ್ಮ ಕಲಬುರಗಿಜಿಲ್ಲೆಯ ಸಿದ್ದಿಕಿ ಎಂಬ ವೃದ್ಧ ಇಡಿ ಭಾರತದಲ್ಲೆ ಕೊರೊನಾಗೆ ಮೊದಲ ಬಲಿಯಾಗಿದ್ದಾರೆ, ಇಂದು ಕಲಬುರಗಿಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ನಾಲ್ಕು ಶತಕದ ಗಡಿ ದಾಟಿದೆ.

ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿದೊಡ್ಡ ಶಿಕ್ಷಣ ಸಂಸ್ಥೆಯಾದ ಹೈ.ಕ.ಶಿ.ಸಂ (ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ) ಈಗಾಗಲೆ ಕೊರೊನಾ ಕುರಿತು ಸೇವೆಗಾಗಿ ಸಂಸ್ಥೆಯ ಅಧ್ಯಕ್ಷರಾದ ಡಾ|| ಭೀಮಾಶಂಕರ ಸಿ. ಬಿಲಗುಂದಿಯವರ ಘನನೇತೃತ್ವದಲ್ಲಿ ಸಂಸ್ಥೆಯ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿಗಳನ್ನು ನೀಡಿದೆ. ಅಲ್ಲದೆ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜಿನ ವೈದ್ಯರು ಕೂಡ ಕೊರೊನ ವಾರಿಯರ್ಸರಾಗಿ ಸೇವೆ ಸಲ್ಲಿಸಿದಾರೆ, ಅಲ್ಲದೆ ಸಂಸ್ಥೆಯ ಪಿ.ಡಿ,ಎ ಇಂಜೀನಿಯರಿಂಗ್ ಕಾಲೇಜ್ ಕೂಡ ಕೊರೊನಾ ನಿಯಂತ್ರಣ ಉಪಕರಣ ಸಿದ್ದಪಡಿಸುವ ನಿಟ್ಟಿನಲ್ಲಿ ಸಂಶೋದನೆ ನಡೆಸುತ್ತಿದೆ ಇದಕ್ಕೆ ಸಂಭಂದಿಸಿದಂತೆ ಈಗಾಗಲೆ ಟೆಕ್ಯುಪ್ ಅಡಿಯಲ್ಲಿ ಂಟಿಣi ಅಔಗಿIಆ-19 ಎಂಬರಾಷ್ಟ್ರೀಯ ಮಟ್ಟದ ಊಂಅಏಖಿಊಔಓ ಕೈಗೊಂಡಿದೆ.

Contact Your\'s Advertisement; 9902492681

ಕೊರೊನಾ ನಿಯಂತ್ರಿಸಬೇಕಾದರೆ ರೋಗವನ್ನು ಬೇಗ ಪತ್ತೆ ಹಚ್ಚಬೇಕು. ರೋಗವನ್ನು ಬೇಗ ಪತ್ತೆ ಹಚ್ಚಬೇಕಾದರೆ, ಪತ್ತೆ ಹಚ್ಚಲು ಖಖಿ-Pಅಖ ಯಂತ್ರದ ಅವಶ್ಯಕತೆ ಇದೆ. ಈಗಾಗಲೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೊರೊನಾ ರೋಗ ಪತ್ತೆ ಹಚ್ಚುವದಕ್ಕಾಗಿ ಸರಕಾರ ಗುಲಬರ್ಗಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಉIಒS) ನಲ್ಲಿರೋಗ ಪತ್ತೆ ಹಚ್ಚಲು ಖಖಿ-Pಅಖ ಯಂತ್ರವನ್ನು ಸ್ಥಾಪಿಸಲಾಗಿದೆ.

ಆದರೆ ಸುಮಾರು 25 ಲಕ್ಷ ಜನಸಂಖ್ಯೆ ಇರುವ ಗುಲಬರ್ಗಾಜಿಲ್ಲೆಗೆ ಇಂತಹ ಅನೇಕ ಯಂತ್ರಗಳ ಅವಶ್ಯಕತೆಯಿದೆ, ಇದನ್ನು ಮನಗಂಡು ಹೈ.ಕ.ಶಿ. ಸಂಸ್ಥೆಯ ಅಧ್ಯಕ್ಷರಾದ ಡಾ|| ಭೀಮಾಶಂಕರ ಸಿ. ಬಿಲಗುಂದಿ ಮತ್ತು ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಕಲಬುರಗಿಯಜನತೆಗೆ ಸಿಹಿ ಸುದ್ದಿ ಕೊಡಲು ಮುಂದಾಗಿದ್ದಾರೆ, ಕೋವಿಡ-19 ಕೊರೊನಾನಂತಹ ಮಹಾಮಾರಿ ಮತ್ತು ಕ್ಷಯ (ಖಿಃ) ಎಚ್,ಆಯಿ.ವ್ಹಿ, ಹೆಪೆಟೆಟಿಸ್-ಬಿ ಮತ್ತು ಹೆಪೆಟೆಟಿಸ್-ಸಿ ಅಂತಹಮಾರಕ ಸಂಕ್ರಾಮಿಕ ರೋಗಗಳನ್ನು ನಿರ್ಣಯಿಸುವ ಮತ್ತುದೃಡಿಕರಿಸುವ ಒಂದೆಒಂದು ಪರೀಕ್ಷೆ, ಅದೆನೆಂದರೆ ಖಖಿ-Pಅಖ. ಇಂತಹ ಪರೀಕ್ಷೆಯ ಉಪಕರಣ ಹೊಂದಿದ, ಅತ್ಯುನತ ತಾಂತ್ರಿಕ ಮಟ್ಟದ ಮೊಲಿಕ್ಯುಲಾರ್ ಪ್ರಯೋಗಾಲಯವನ್ನು ಹೈ.ಕ.ಶಿ. ಸಂಸ್ಥೆಯ ಬಸವೆಶ್ವರ ಆಸ್ಪತ್ರೆಯಲ್ಲಿ ಪ್ರತಿಸ್ಠಾಪಿಸಲು ಉದ್ದೇಶಿಸಲಾಗಿದೆ. ಇದು ಸಂಸ್ಥೆಯ ಇತಿಹಾಸದಲ್ಲಿಯೆ ಒಂದುದೊಡ್ಡ ಮೈಲುಗಲ್ಲು ಎನ್ನಬಹುದು, ಈಗಾಗಲೆ ಅಮೇರಿಕಾದ ಥರ್ಮೊಫಿಶರ್ ಸೈಂಟಿಫಿಕ್ ಎಂಬ ಕಂಪನಿಗೆ ಸುಮಾರು ಒಂದುಕೋಟಿ ಹದಿನೈದು ಲಕ್ಷದ ಯಂತ್ರಕ್ಕಾಗಿ ಅರ್ಜಿಸಲ್ಲಿಸಿಲಾಗಿದ್ದು, ಇನ್ನೆರಡು-ಮೂರು ವಾರಗಳಲ್ಲಿ Iಅಒಖ ನಿಂದ ಅನುಮತಿ ಪಡೆದು ಮೊಲಿಕ್ಯುಲಾರ್ ಪ್ರಯೋಗಾಲಯವನ್ನು ಪ್ರಾರಂಭಮಾಡಲಾಗುವುದು ಎಂದು ಅಧ್ಯಕ್ಷರಾದ ಡಾ. ಭೀಮಾಶಂಕರ.ಸಿ. ಬಿಲಗುಂದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಉಪಾಧ್ಯಕ್ಷರಾದ ಡಾ..ಶಿವಾನಂದ ದೇವರಮನಿ, ಕಾರ್ಯದರ್ಶಿಗಳಾದ ಡಾ. ನಾಗೇಂದ್ರ ಮಂಠಾಳೆ, ಜಂಟಿ-ಕಾರ್ಯದರ್ಶಿಗಳಾದಬ, ಗಂಗಾಧರ ಎಲಿ, ಆಡಳಿತ ಮಂಡಳಿಯ ಸದಸ್ಯರಾದ, ವಿಜಯಕುಮಾರ ದೇಶಮುಖ ಡಾ..ಸಂಪತ್‍ಕುಮಾರ ಲೊಯಾ, ಡಾ. ಬಸವರಾಜ ಜಿ. ಪಾಟಿಲ್,. ನೀತಿನ.ಬಿ. ಜವಳಿ, ಅನುರಾಧಾ ದೆಸಾಯಿ,. ಉದಯಕುಮಾರ ಚಿಂಚೋಳಿ, ಅರುಣ ಪಾಟಿಲ್, ಅನೀಲ ಮರಗೋಳ, ಡಾ. ಎಸ್. ಕಾಮರೆಡ್ಡಿ,. ಸತೀಶ್ಚಂದ್ರ ಹಡಗಲಿಮಠ್, ಡಾ.ಶಿವಪುತ್ರಪ್ಪಾ ಹರವಾಳ,  ಸಂಜಯ ಮಾಕಾಲ್ ಮತ್ತು ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ಬಿ. ಎ. ರುದ್ರವಾಡಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here