ಡಿ.ದೇವರಾಜ ಅರಸ ರ 38 ನೇ ಸ್ಮರಣೋತ್ಸವ

0
79

ಕಲಬುರಗಿ: ಇಂದು ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸ ರ 38 ನೇ ಸ್ಮರಣೋತವ ಜಿಲ್ಲಾ ಕಚೇರಿಯ ಆವರಣದಲ್ಲಿ ಬೆಳೆಗ್ಗೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಲಾಯಿತು.

ಈ ಭಾಗದ ಹಿರಿಯ ರಾಜಕೀಯ ಧುರೀಣರು ಅದ ಚಂದ್ರಶೇಖರ ಸುಲ್ತಾನಪುರ್ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಹಿಂದುಳಿದ ಜನಾಂಗಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಮಹಾನಾಯಕನನ್ನು ಇಂದಿನ ಯುವ ಪೀಳಿಗೆ ಕಡೆಗಣಿಸುತ್ತಿದೆ ಎಂದು ವಿಷಾದ ವೇನುಸುತ್ತಿದೆ ಎಂದರು. ಕೇವಲ ಮೀಸಲಾತಿ ಪಡೆಯಲು ಅವರ ಹೆಸರು ಬಳಿಸಿಕೊಂಡು ಲಾಭ ಪಡೆಯಲು ಬಡೆದಾಡುತ್ತಾರೆ, ನೈಜವಾಗಿ ಅವರ ತತ್ವಗಳನ್ನು ಯಾರು ಪಾಲಿಸುತಿಲ್ಲ ಎಂದರು.

Contact Your\'s Advertisement; 9902492681

ಮೊದಲಿಗೆ ಕರ್ನಾಟಕ ಹಿಂದುಳಿದ ಜಾಗ್ರತಿ ವೇದಿಕೆ ಕಾರ್ಯದರ್ಶಿ ಬಸವರಾಜ್ ರಾವೂರ್ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಯುವ ನ್ಯಾಯವಾದಿ ಮತ್ತು ನೇಕಾರ ಸಮುದಾಯ ಒಕ್ಕೂಟದ ಜಿಲ್ಲಾ ಪ್ರತಿನಿಧಿ ಹಾಗೂ ರಾಜ್ಯ ಹಟಗಾರ ಸಮಾಜದ ಪ್ರಧಾನ ಕಾರ್ಯದರ್ಶಿ ವಿನೋದ ಕುಮಾರ ಜೆನವೇರಿ ಯವರು ಪಾಲ್ಗೊಂಡು ಕಾರ್ಯಕ್ರಮ ನಿಮಿತ್ಯ ಮಾತನಾಡುತ್ತ ಮಹಾರಾಷ್ಟ್ರ ರಾಜ್ಯದಲ್ಲಿ 2% ಮೀಸಲಾತಿ ನೀಡಿದಂತೆ, ನೇಕಾರರ ಸಮುದಾಯಕ್ಕೆ ಪ್ರತ್ಯೇಕ ವಾಗಿ 3% ಮೀಸಲಾತಿ ನೀಡಲು ರಾಜ್ಯ ಸರಕಾರಕ್ಕೆ ಅಗ್ರಹಿಸಿದರು.

ಅದೇ ರೀತಿ ಮಾನ ಮುಚ್ಚುವ ನೇಕಾರರಿಗೆ ಪ್ರಥಮ ಆದ್ಯತೆ ಮೇರೆಗೆ ಒಂದು ಸ್ಥಾನ ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಲು bjp ಪಕ್ಷದ ಮುಖಂಡರಿಗೆ ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹೇಳವರ, ವಿವಿಧ ಸಮುದಾಯದ ಮುಖಂಡರು ಮತ್ತು ಕಛೇರಿಯ ನೌಕರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here