ಶಹಾಬಾದ: ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಬಿಜೆಪಿಯಿಂದ ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನ ದಿನವನ್ನು ಆಚರಿಸಲಾಯಿತು.
ಬಿಜೆಪಿ ಹಿರಿಯ ಮುಖಂಡ ಬಸವರಾಜ ಬಿರಾದಾರ ಮಾತನಾಡಿ, ತತ್ವದ ಆಧಾರದ ಮೇಲೆ ಮಂತ್ರಿ ತ್ಯಾಗ ಮಾಡಿದ ಸ್ವಾತಂತ್ರ್ಯ ಭಾರತದ ಪ್ರಪ್ರಥಮ ರಾಷ್ಟ್ರ ನಾಯಕ ಎಂದರೆ ಶ್ಯಾಮ ಪ್ರಸಾದ ಮುಖರ್ಜಿಯವರು. ದೇಶದ ಪರಿಸ್ಥಿತಿ ಅಧೋಗತಿಗೆ ಇಳಿದಾಗ, ರಾಜಕೀಯ ಅಸ್ಥಿರತೆ, ಆಡಳಿತ ದೋಷ ಕಂಡಾಗ ಅವಿರತ ದುಡಿದು ಭಾರತೀಯ ಜನಸಂಘವನ್ನು ಸ್ಥಾಪನೆ ಮಾಡಿದರು.
ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಅವರ ತ್ಯಾಗ, ಬಲಿದಾನ ವ್ಯರ್ಥವಾಗದಂತೆ ದೇಶದ ಅಖಂಡತೆಯನ್ನು ಉಳಿಸಿ, ದೇಶವನ್ನು ಕಟ್ಟಿ ಬೆಳೆಸುವ ಪ್ರಯ್ತನ ಮಾಡೋಣ ಎಂದು ಹೇಳಿದರು.
ಸದಾನಂದ, ಕುಂಬಾರ, ಶ್ರೀಧರ ಜೋಷಿ, ಜ್ಯೋತಿ ಶರ್ಮಾ, ಭೀಮರಾವ ಖಂಡ್ರೆ, ಕನಕಪ್ಪ ದಂಡಗುಲಕರ್,ಶಿವುಗೌಡ ಪಾಟೀಲ, ಸೂರ್ಯಕಾಂತ ವಾರದ, ಬಸವರಾಜ ಬಿರಾದಾರ, ನಿಂಗಣ್ಣ ಹುಳಗೋಳಕರ್, ಸಂಜಯ ಕೋರೆ, ಸಂಜಯ ವಿಠಕರ್,ಮೋಹನ ಘಂಟ್ಲಿ, ದತ್ತು ಘಂಟಿ, ಶರಣು ವಸ್ತ್ರದ್, ಸಂಜಯ ಸೂಡಿ, ಭೀಮಯ್ಯ ಗುತ್ತೆದಾರ, ಸುನೀಲ ಕುಂಬಾರ ಇತರರು ಇದ್ದರು.