ಐಡಿವಾಯ್‌ಓ ಸಂಘಟನೆಯ ೫೩ನೇ ಸಂಸ್ಥಾಪನಾ ದಿನಾಚರಣೆ

0
47

ಶಹಾಬಾದ: ನಿರೋದ್ಯೋಗದ ವಿರುದ್ಧ ಹೋರಾಡಲು ಯುವಜನರು ಸಂಘಟಿತರಾಗಿ ಎಂದು
ಎಸ್‌ಯುಸಿಐ ಕಮುನಿಷ್ಟ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ.ಎಸ್.ಇಬ್ರಾಹಿಂಪುರ ಹೇಳಿದರು.

ಅವರು ನಗರದ ಎಐಡಿವಾಯ್‌ಓ ಸಂಘಟನೆಯ ವತಿಯಿಂದ ಎಐಡಿವಾಯ್‌ಓ ಕಛೇರಿಯಲ್ಲಿ ಆಯೋಜಿಸಲಾದ ಎಐಡಿವಾಯ್‌ಓ ಸಂಘಟನೆಯ ೫೫ನೇ ಸಂಸ್ಥಾಪನಾ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರಪಂಚದಲ್ಲಿಯೇ ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಷ್ಟ್ರವೆಂದರೆ ಅದು ಭಾರತ ದೇಶ.ಆದರೆ ನಮ್ಮನಾಳುವ ಸರ್ಕಾರ ಯುವಕರ ಶಕ್ತಿಯನ್ನು ಬಳಸಿಕೊಳ್ಳಲು ಸಂಪೂರ್ಣವಾಗಿ ವಿಫಲವಾಗಿವೆ. ಕೋಟಿ ಕೋಟಿ ಸಂಖ್ಯೆಯಲ್ಲಿ ನಿರೋದ್ಯೋಗ ಯುವಕರು ಕೆಲಸವಿಲ್ಲದೇ ಹತಾಶರಾಗಿದ್ದಾರೆ.

Contact Your\'s Advertisement; 9902492681

ಕೆಲಸವಿಲ್ಲದೇ ವಾಮಮಾರ್ಗದ ಮೂಲಕ ಹಣವನ್ನು ಸಂಪಾದಿಸಲು ಹೋಗಿ ಸಮಾಜ ಘಾತುಕರಾಗುವ ಸಂಭವವಿದೆ.ಆದ್ದರಿಂದ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.ಅಲ್ಲದೇ ಶ್ರಮಾಧಾರಿತ ಕಾರ್ಖಾನೆಗಳನ್ನು ತೆಗೆಯಲು ಮುಂದಾಗಬೇಕು.ಆದರೆ ಕೇಂದ್ರ ಸರ್ಕಾರ ಕೇವಲ ಬಾಯಿ ಮಾತಿನಲ್ಲಿ, ಪ್ರಚಾರಗೋಸ್ಕರ ಎರಡು ಕೋಟಿ ಉದ್ಯೋಗಗಳನ್ನು ನೀಡುತ್ತೆವೆ ಎಂದು ಜನರಿಗೆ ಯಾಮಾರಿಸಿದ್ದಾರೆ.

ಕೊವಿಡ್ ೧೯ ಕೊರಾನಾ ಮಹಾಮಾರಿಯಂದ ದುಡಿಯುಜನ ಬಹಳ ಸಂಕಷ್ಟದಲ್ಲಿದ್ದಾರೆ ಯುವಜನರು ಅವರ ನೆರವಿಗೆ ಬಂದು ಅವರ ಸಮಸ್ಯಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ಕಟ್ಟಬೇಕೆಂದರು.

ಎಸ್‌ಯುಸಿಐ ಕಮುನಿಷ್ಟ ಪಕ್ಷದ ಕಾರ್ಯದರ್ಶಿ ಗಣಪತರಾವ ಮಾನೆ,ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್.ಹೆಚ್, ಸ್ಥಳೀಯ ಕಾರ್ಯದರ್ಶಿ ಪ್ರವೀಣ ಬಣಮಿಕರ್ ಮಾತನಾಡಿದರು. ಸಂಘಟನೆಯ ಅಧ್ಯಕ್ಷ ಸಿದ್ದು ಚೌಧರಿ ಅಧ್ಯಕ್ಷತೆ ವಹಿಸಿದ್ದರು. ತಿಮ್ಮಯ್ಯ.ಬಿ.ಮಾನೆ, ನೀಲಕಂಠ ಹುಲಿ, ವಿಶ್ವ ಎಮ್ ಸಿಂಘೆ, ರಘು ಪವರ್, ತಿರುಪತಿ, ಪ್ರಕಾಶ ಯಲಗೋಡ್,ಶ್ರೀನಿವಾಸ, ಮಹಮ್ಮದ್ ದಾವುದ್, ರಾಕೇಶ ಪೊತನಕರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here