ಕಲಬುರಗಿ: ಕಲ್ಯಾಣ ಕರ್ನಾಟಕದ ಸೂಫಿ ಹಜರತ್ ಖಾಜಾ ಬಂದಾ ನವಾಜ್ ಗೇಸುದರಾಜ್ (ರ.ಅ) ಅವರ 616 ನೇ ಉರುಸ್ ನಿಮಿತ್ತಿ ಸೋಮವಾರ ದರ್ಗಾದ ಆವರಣದಲ್ಲಿ ದರ್ಗಾದಿಂದ ಪೀಠಾಧಿಪತಿ ಡಾ.ಸೈಯದ್ ಶಾ ಖುಸ್ರೊ ಹುಸ್ಸೇನಿ ಅವರ ನೇತೃತ್ವದಲ್ಲಿ ದರ್ಗಾದ ಸಮಿತಿಯಿಂದ ಸರಳ ರೀತಿಯಲ್ಲಿ ಗಂಧದ ಮೆರೆವಣಿಗೆ ನಡೆಸಿ ತಡ ರಾತ್ರಿ 2 ಗಂಟೆಗೆ ದರ್ಗಾದ ಗರ್ಭಗುಡಿಗೆ ಗಂಧದ ಲೇಪನ ನೆರವೇರಿಸಲಾಯಿತು.
ಪ್ರತಿ ವರ್ಷ ಜಗತ್ ವೃತದ ಹತ್ತಿರದ ಮಹೇಬುಬ್ ಗುಲಶನ್ ಉದ್ಯಾನ ವನದಿಂದ ವಿಜೃಂಭಣೆಯಿಂದ ತೆರಳಬೇಕಿದ ಗಂಧದ ಮೆರವಣಿಗೆ, ಈ ಬಾರಿ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ಆದೇಶದ ಅನ್ವಯ ಸಕಲ ಮುಂಜಾಗ್ರತೆ ಮತ್ತು ಮುನ್ನೆಚ್ಚರಿಕೆ ಕೈಗೊಂಡು ದರ್ಗಾದ ಪೀಠಾಧಿಪತಿಗಳ ಕುಟುಂಬದ ಸದಸ್ಯರ ಸಯೋಗದಲ್ಲಿ ದರ್ಗಾದ ಆವರಣದಿಂದ ಮೆರವಣಿಗೆ ನಡೆಯಿತು.
ಈ ವೇಳೆಯಲ್ಲಿ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸ್ಸೇನಿ, ಡಾ. ಸೈಯದ್ ಮುಸ್ತಫಾ ಹುಸ್ಸೇನಿ, ಛೋಟಿ ದರ್ಗಾದ ಪೀಠಾಧಿಪತಿ ಸೈಯದ್ ಶಾ ಹಸನ ಶಬ್ಬಿರ ಹುಸ್ಸೇನಿ, ಸೈಯದ್ ಬಾಖರ್ ಶಬ್ಬಿರ್ ಹುಸ್ಸೇನಿ, ಸೈಯದ್ ಶಾ ತಕೀವುಲ್ಲಾ ಹುಸ್ಸೇನಿ ಸೇರಿದಂತೆ ಇತರು ಇದ್ದರು.