ಕೊರೋನಾ ಸೋಂಕಿನಿಂದ ಕಲಬುರಗಿ ನಗರದಲ್ಲಿ ಮತ್ತಿಬ್ಬರು ವೃದ್ಧರು ನಿಧನ

0
38

ಕಲಬುರಗಿ: ಕೊರೋನಾ‌ ಸೋಂಕಿನಿಂದ ಕಲಬುರಗಿ ನಗರದಲ್ಲಿ ಮತ್ತಿಬ್ಬರು ವೃದ್ಧರು ಮೃತಪಟ್ಟಿದ್ದಾರೆ. ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ ‌36ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯೊಂದಿಗೆ ಜ್ವರ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ನಗರದ ಸವೇರಾ ಕಾಲೋನಿಯ 84 ವರ್ಷದ ವೃದ್ಧ (P-26644) ಜು.4 ರಂದು ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಜು.7 ರಂದು ಕೊರೋನಾ ಸೋಂಕು ತಗುಲಿದ್ದು ಖಾತ್ರಿಯಾಗಿ ಜು.10 ರಂದು ನಿಧನ ಹೊಂದಿರುತ್ತಾರೆ.

Contact Your\'s Advertisement; 9902492681

ಅದೇ ರೀತಿ ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯೊಂದಿಗೆ ಅಧಿಕ ರಕ್ತದೊತ್ತಡ ಕಾಯಿಲೆಯೊಂದಿಗೆ ಬಳಲುತ್ತಿದ್ದ ಕಲಬುರಗಿ ನಗರದ ಎಂ.ಎಸ್.ಕೆ.ಮಿಲ್ ಪ್ರದೇಶದ 80 ವರ್ಷದ ವೃದ್ಧ (P-26648) ಇವರು ಜು.4 ರಂದು ಅಸ್ಪತ್ರೆಗೆ ದಾಖಲಾಗಿದ್ದರು. ಜು.7ರಂದು ಕೊರೋನಾ ತಗುಲಿದ್ದು ದೃಢವಾಗಿ ಜು.10 ರಂದು ನಿಧನ ಹೊಂದಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

ಜಿಲ್ಲೆಯಲ್ಲಿ ಶನಿವಾರ 65 ಜನರಿಗೆ ಕೋವಿಡ್-19 ದೃಢ ಸೋಂಕಿತರ ಸಂಖ್ಯೆ 2024ಕ್ಕೆ ಏರಿಕೆಯಾದ್ದು, 16 ಜನ ಚಿಕಿತ್ಸೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 258 ಕೋವಿಡ್-19 ಸಕ್ರಿಯ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿ.ಸಿ.ಶರತ್ ಬಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here