ಸರಕಾರದ ವಿರುದ್ಧ ಆಶಾಗಳ ಆಕ್ರೋಶ

0
54

ವಾಡಿ: ಗೌರವಧನ ಹೆಚ್ಚಿಸದೆ ಸರಕಾರ ನಮ್ಮ ಹೋರಾಟವನ್ನು ಅಗೌರವದಿಂದ ಕಾಣುತ್ತಿದೆ ಎಂದು ಆಶಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಸೋಮವಾರ ವಾಡಿ ಪಟ್ಟಣದ ಪುರಸಭೆ ಎದುರು ಪ್ರತಿಭಟನೆ ನಡೆಸಿದ ಕೊರೊನಾ ವಾರಿಯರ್ಸ್‌ಗಳ ಭಾಗವಾದ ಆಶಾ ಕಾರ್ಯಕರ್ತೆಯರು, ಮಾಸಿಕ ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೇರೂರ, ರಾಜ್ಯದಾದ್ಯಂತ ಕರೆ ನೀಡಲಾಗಿರುವ ಆಶಾಗಳ ಮುಷ್ಕರ ಉನ್ನತ ಹಂತಕ್ಕೆ ಕಾಲಿಡಲಿದೆ. ಪತ್ರ ಚಳುವಳಿ, ಮಾನವ ಸರ್ಪಳಿ, ರಸ್ತೆ ತಡೆ, ಸರಕಾರಿ ಕಚೇರಿಗಳಿಗೆ ಮುತ್ತಿಗೆ, ಧರಣಿ, ರ‍್ಯಾಲಿ ಸೇರಿದಂತೆ ಇನ್ನಿತರ ಸ್ವರೂಪದ ಹೋರಾಟಕ್ಕೆ ಆಶಾಗಳು ಎಐಯುಟಿಯುಸಿ ನೇತೃತ್ವದಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ. ಸರಕಾರ ಗೂಡಲೇ ಎಚ್ಚೆತ್ತುಕೊಂಡ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಹೋರಾಟ ಬೆಂಬಲಿಸಿದ ಸ್ಥಳೀಯ ಮುಖಂಡರಾದ ಚಂದ್ರಸೇನ ಮೇನಗಾರ, ಕಾಶೀನಾಥ ಧನ್ನಿ, ಬಸವರಾಜ ಕೇಶ್ವಾರ, ಮಲ್ಲಯ್ಯ ಗುತ್ತೇದಾರ, ದೇವಿಂದ್ರ ಕರದಳ್ಳಿ, ವಿಜಯಕುಮಾರ ಸಿಂಗೆ ಸೇರಿದಂತೆ ನಗದ ವಿವಿಧ ಬಡಾವಣೆಗಳ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here