ಕಲಬುರಗಿ: ನಗರದ ಹೊರವಲಯದ ನೃಪತುಂಗ ಕಾಲನಿ ಸಮೀಪದ ಅಲೆಮಾರಿ ಸಮುದಾಯ ಬಡವಾಣೆಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಶನಿವಾರ ಬಸವ ಪಂಚಮಿ ಆಚರಿಸಲಾಯಿತು. ಬಡಾವಣೆಯ ಅಲೆಮಾರಿ ಮಕ್ಕಳಿಗೆ ಪೌಷ್ಠಿಕ ಹಾಲು ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ನಾಗರ ಪಂಚಮಿಯಂದು ಕಲ್ಲ ನಾಗರಕ್ಕೆ ಹಾಲೆರೆದು ಪೋಲು ಮಾಡದೆ ಪೌಷ್ಠಿಕ ಹಾಲನ್ನು ಬಡ, ನಿರ್ಗತಿಕ ಮಕ್ಕಳು ಹಾಗೂ ವೃದ್ಧರಿಗೆ ವಿತರಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಿಳಿಸಿದರು.
ಮಾನವ ಬಂಧುತ್ವ ಹಾಗೂ ವಿದ್ಯಾರ್ಥಿ ಬಂಧುತ್ವ ವೇದಿಕೆಯ ಸಂಸ್ಥಾಪಕ ಸತೀಶ ಜಾರಕಿಹೊಳಿ ನಿರ್ದೇಶನದಂತೆ ಮಾನವ ಬಂಧುತ್ವ ವೇದಿಕೆಯ ನಾಗೇಂದ್ರ ಕೆ. ಜವಳಿ, ವಿದ್ಯಾರ್ಥಿ ಬಂಧುತ್ವ ವೇದಿಕೆಯ ದಿನೇಶ ದೊಡ್ಡಮನಿ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮುಖಂಡರಾದ ದತ್ತು ಗುತ್ತೇದಾರ, ಬಸವರಾಜ ಹೂಗಾರ, ವಿಠ್ಠಲ್ ಚಿಕಣಿ, ಸುನಿಲ ಮಾನ್ಪಡೆ ವೇದಿಕೆಯಲ್ಲಿದ್ದರು.
ಸಂತೋಷ ಮೇಲ್ಮನಿ, ಹನುಮಂತ ಇಟಗಿ, ಅಲ್ಲಮಪ್ರಭು ನಿಂಬರ್ಗಾ, ಧರ್ಮಣ್ಣ ಕೊಣೆಕರ್, ಶಿವು ನರೋಣಾ, ಲವಕುಶ ಕಡಗಂಚಿ, ಪ್ರಶಾಂತ ನಂದಿಕೂರ, ಶೀವು ಜಾಲವಾದ, ಧರ್ಮಣ್ಣ ಜೈನಾಪುರ, ಸಂಗರಾಜ ವಾಲೀಕಾರ, ರಾಣು ಮುದ್ದನಕರ್, ಶರಣು ಸುತಾರ, ಸಂದೇಶ ವಾಗ್ಮೋರೆ ಇತರರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…