ಕಲಬುರಗಿ: ಅಫಜಲಪೂರ ತಾಲೂಕಿನಲ್ಲಿ ಸತತ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಬೆಳೆ ಹಾನಿಯಾದ ರೈತರಿಗೆ ಕೂಡಲೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಜೆ ಎಂ ಕೋರಬು ಮತ್ತು ಜೆ ಎಂ ಕೋರಬು ಪೌಂಡೇಶನ್ ಸದಸ್ಯರು ಹಾಗೂ ತಾಲೂಕಿನ ರೈತರು ಸೇರಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವ ಸಲ್ಲಿಸಿದರು.
ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ಬಿತ್ತನೆ ಮಾಡಿದ ತೊಗರಿ , ಗೋದಿ, ಹತ್ತಿ, ಹೆಸರು, ಶೇಂಗಾ, ಸೇರಿದಂತೆ ಇನ್ನಿತರ ವಾಣಿಜ್ಯ ಬೇಳೆಗಳು ಹೆಚ್ಚು ಮಳೆಯಿಂದಾಗಿ ಹಾನಿಗಿಡಾಗಿವೆ ಎಂದು ಸಮಾಜ ಸೇವಕ ಜೆ ಎಂ ಕೋರಬು ಈ ಸಂದರ್ಭದಲ್ಲಿ ತಿಳಿಸಿದರು.
ಹಿಗಾಗಿ ಸರಕಾರ ಕೂಡಲೆ ಬೇಳೆ ಹಾನಿ ಸಮಿಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಒಂದು ವೇಳೆ ಸರಕಾರ ಕೂಡಲೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನಿಡಿದರು.