ಖಾಸಗೀಕರಣ: ಜನಸಾಮಾನ್ಯರಿಂದ ರೈಲು ದೂರ: ಎಸ್‌ಯುಸಿಐ ಪಕ್ಷ ಆಕ್ರೋಶ

0
37

ವಾಡಿ: ಕೇಂದ್ರ ಸರಕಾರ ರೈಲು ಖಾಸಗೀಕರಣಗೊಳಿಸಲು ತುದಿಗಾಲಮೇಲೆ ನಿಂತಿದ್ದು, ಪ್ರಯಾಣ ದರದಲ್ಲಿ ಮತ್ತಷ್ಟು ಏರಿಕೆ ಕಾಣಲಿದೆ. ಜನಸಾಮಾನ್ಯರ ಪಾಲಿಗೆ ರೈಲು ಪ್ರಯಾಣ ಗಗನಕುಸುಮಾಗಲಿದೆ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಕಾರ್ಮಿಕ ಸಂಘಟನೆ ಆತಂಕ ವ್ಯಕ್ತಪಡಿಸಿದೆ.

ರೈಲ್ವೆ ಖಾಸಗೀಕರಣ ವಿರೋಧಿಸಿ ಸ್ಥಳೀಯ ರೈಲು ನಿಲ್ದಾಣ ವ್ಯವಸ್ಥಾಪಕರ ಮೂಲಕ ಪ್ರಧಾನಮಂತ್ರಿಗೆ ಮನವಿಪತ್ರ ಸಲ್ಲಿಸಿದ ಎಐಯುಟಿಯುಸಿ ಮುಖಂಡರು, ರೈಲು ಖಾಸಗೀಕರಣ ಕೈಬಿಡಬೇಕು ಎಂದು ಆಗ್ರಹಿಸಿದರು. ರೈಲ್ವೆ ಇಲಾಖೆಯು ಭಾರತದಲ್ಲಿ ಅತಿದೊಡ್ಡ ಸಾರ್ವಜನಿಕ ಸಾರಿಗೆ ಸಂಸ್ಥೆಯಾಗಿದೆ. ಜನಸಾಮಾನ್ಯರ ಹಣದಿಂದ ಸ್ಥಾಪಿತಗೊಂಡಿರುವ ಈ ಇಲಾಖೆ, ರಾಷ್ಟ್ರೀಯ ಆಸ್ತಿಯಾಗಿದೆ.

Contact Your\'s Advertisement; 9902492681

ಈ ಸಾರ್ವಜನಿಕ ಸಂಪತ್ತನ್ನು ಖಾಸಗಿ ಬಂಡವಾಳಗಾರರಿಗೆ ಹಸ್ತಾಂತರಿಸುವ ಅಧಿಕಾರ ಯಾವೂದೇ ರಾಜಕೀಯ ಪಕ್ಷಕ್ಕೆ ಇಲ್ಲ. ಒಂದು ವೇಳೆ ರೈಲ್ವೆ ಖಾಸಗೀಕರಣಗೊಂಡರೆ ಟಿಕೆಟ್ ದರಗಳು ಗಣನೀಯವಾಗಿ ಏರಿಕೆಯಾಗುತ್ತದೆ. ಆಗ ಜನಸಾಮಾನ್ಯರಿಗೆ ರೈಲು ಪ್ರಯಾಣ ಸಾಧ್ಯವಾಗುವುದಿಲ್ಲ. ಬಡವರನ್ನು ರೈಲು ಪ್ರಯಣದಿಂದ ವಂಚಿಸಬೇಕೆಂಬ ಷಢ್ಯಂತ್ರ ಸರಕಾರ ಮಾಡುತ್ತಿದೆ ಎಂದು ದೂರಿದ್ದಾರೆ.

ರೈಲ್ವೆ ಇಲಾಖೆ ಖಾಸಗಿ ಬಂಡವಾಳಿಗರ ಪಾಲಾದರೆ ಸುಲಿಗೆ ಶುರುವಾಗುತ್ತದೆ. ಉದ್ಯೋಗಗಳು ನಾಶವಾಗುತ್ತವೆ. ನೇಮಕಾತಿ ಸಂಪೂರ್ಣ ನಿಲ್ಲುತ್ತದೆ. ಉದ್ಯೋಗ ಭದ್ರತೆ ಇಲ್ಲವಾಗುತ್ತದೆ. ರೈಲ್ವೆ ಇಲಾಖೆ ಖಾಸಗೀಯವರಿಗೆ ಕೊಡುವುದಿಲ್ಲ ಎಂದು ಮೂರು ಬಾರಿ ಸಂಸತ್ತಿನಲ್ಲಿ ಹೇಳಿದ್ದ ಪ್ರಧಾನಿ ಮೋದಿಯವರು ಮಾತು ತಪ್ಪಿದ್ದಾರೆ.

ಲಾಭಕೋರರಿಗೆ ರೈಲ್ವೆ ಧಾರೆಯರೆದು ಉಳ್ಳವರಿಗಾಗಿ ಮಾತ್ರ ರೈಲು ಸಾರಿಗೆ ಮೀಸಲಿಡಲಿದೆ. ಬಡಜನರಿಂದ ರೈಲು ದೂರ ಇಡಲು ಎಲ್ಲಾರೀತಿಯ ಸಿದ್ಧತೆಗಳು ಕೇಂದ್ರ ಬಿಜೆಪಿ ಸರಕಾರ ಮಾಡಿಕೊಂಡಿದೆ ಎಂದು ಆಪಾದಿಸಿರುವ ಎಐಯುಟಿಯುಸಿ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೇರೂರ ಹಾಗೂ ಮುಖಂಡ ರಾಜು ಒಡೆಯರ, ರೈಲು ಖಾಸಗೀಕರಣ ತಡೆಯದಿದ್ದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here