ಡಿಕೆ ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾಗಿದ್ದು‌, ಪಕ್ಷಕ್ಕೆ ನವ ಚೇತನ ಬಂದಿದೆ: ಈಶ್ವರ ಖಂಡ್ರೆ

0
169

ಕಲಬುರಗಿ: ಹಿರಿಯ ಮುಖಂಡರಾದ ಡಿ.ಕೆ. ಶಿವಕುಮಾರ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷಕ್ಕೆ ನವ ಚೈತನ್ಯ ಬಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಹೇಳಿದರು.

ಅಧ್ಯಕ್ಷರಾಗಿ ಮೊದಲ ಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ ಅವರನ್ನು ಸನ್ಮಾನಿಸಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಕಾಂಗ್ರೆಸ್ ಅಗ್ರನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರು ಶಿವಕುಮಾರ ಅವರ ಗಟ್ಟಿ ನಾಯಕ್ವದಲ್ಲಿ ಪಕ್ಷ ಬಲಗೊಳ್ಳುವ ನಂಬಿಕೆಯಲ್ಲಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದರು.

ಅವರ ದಕ್ಷ ಅಧ್ಯಕ್ಷತೆಯಲ್ಲಿ ನಾವೆಲ್ಲ ಕೋವಿಡ್-19 ನಿರ್ವಹಣೆಯಲ್ಲಿ ಬಿಜೆಪಿ ಸರಕಾರ ವಿಫಲರಾಗಿರುವುದಕ್ಕೆ ವಿರೋಧಿಸಿ ಹೋರಾಟ ಪ್ರಾರಂಭಿಸಿ “ಸ್ಪೀಕ್ ಅಪ್ ಕರ್ನಾಟಕ ಲೆಕ್ಕ ಕೊಡಿ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರಕಾರ ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ದಲ್ಲಿ ತೊಡಗಿದೆ. ಇದನ್ನು‌ ಪ್ರಶ್ನಿಸಿದರೆ ನಮ್ಮ ನಾಯಕರಿಗೆ ಲೀಗಲ್ ನೋಟೀಸ್ ಕೊಟ್ಟಿದ್ದಾರೆ. ಇದು ಕಳ್ಳರೇ ಪೊಲೀಸರಿಗೆ ನೋಟಿಸು ಕೊಟ್ಟಂತೆ ಇದಕ್ಕೆ ನಾವು ಹೆದರುವುದಿಲ್ಲ. ಸರಕಾರದ‌ ನಡೆಗೆ ಹಿರಿಯ ನಾಯಕರ ಮಾರ್ಗದರ್ಶನ ದಲ್ಲಿ ರಾಜ್ಯದ ಎಲ್ಲ ಕಡೆ ಲೆಕ್ಕ ಕೊಡಿ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ರಾಜ್ಯ ಸರಕಾರ ಭ್ರಷ್ಟಾಚಾರ ದಲ್ಲಿ ತೊಡಗುವುದರ ಜೊತೆಗೆ ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ರೈತವಿರೋಧಿ, ಜನ ವಿರೋಧಿ‌ ನೀತಿ‌ ಅನುಸರಿಸುತ್ತಿದೆ. ಇದರ ವಿರುದ್ದ ನಮ್ಮ‌ ಪಕ್ಷದ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.

ಹೃದಯಹೀನ‌ ಸರಕಾರ ಆಡಳಿತ ನಡೆಸುತ್ತಿದ್ದು ಅಸಂವಿಧಾನ ರೀತಿಯಲ್ಲಿ ಬಿಜೆಪ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷ ಈ ಭ್ರಷ್ಟಾಚಾರಿ ಸರಕಾರ ಕಿತ್ತೊಗೆಯುವರೆಗೆ ಹೋರಾಟ ನಡೆಸುತ್ತದೆ. ನಮ್ಮ ಪಕ್ಷ ನಾಯಕರ ಪಕ್ಷದಿಂದ ತಳಮಟ್ಟದ ಕಾರ್ಯಕರ್ತರ ಪಕ್ಷವಾಗಿ ಸರಕಾರದ ವಿರುದ್ದ ಜನ ಜಾಗಜಾಗೃತಿ ಕಾರ್ಯಕ್ರಮ ನಡೆಸುತ್ತದೆ ಎಂದು ಖಂಡ್ರೆ ಹೇಳಿದರು.

ಸೇವೆ- ಸಂಘಟನೆ- ಸಂಘರ್ಷ ಹೆಸರಿನಲ್ಲಿ ಬಿಜೆಪಿ ವಿರುದ್ದ ಕಾಂಗ್ರೆಸ್ ಹೋರಾಟಕ್ಕೆ ಮುಂದೆ ಬಂದಿದೆ. ಇದಕ್ಕೆ ಸೂಕ್ತ ಸ್ಪಂದನೆ ದೊರಕಿದ್ದು. ರಾಜ್ಯ ಮಾತ್ರವಲ್ಲ ಕೇಂದ್ರದಲ್ಲಿ ಬಿಜೆಪಿ ಪಕ್ಷ ತೊಲಗಿ ಜನಪರ ಆಡಳಿತ ನೀಡಲು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಯಾಣ‌ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ಧೋರಣೆ ರಾಜ್ಯ ಸರಕಾರ ಮುಂದುವರೆಸಿದೆ ಎಂದಯ ದೂರಿದ ಖಂಡ್ರೆ ಕಕ ಭಾಗದ ಅಭಿವೃದ್ದಿಗೆ ಅನುದಾನ ನಿಗದಿ ಹಾಗೂ ಬಿಡುಗಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನೇರ ನೇಮಕಾತಿಗೆ ತಡೆಹಿಡಿದಿರುವ ಸರಕಾರ ಈ ಭಾಗದ ನಿರುದ್ಯೋಗಿ ಯುವಕರ ಅನ್ನ ಕಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಕ ಭಾಗದ ಸಮಗ್ರ ಅಭಿವೃದ್ದಿಗೆ ಕೆಪಿಸಿಸಿ ಅಧ್ಯಕ್ಷರು ಶ್ರಮಿಸಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಡಿ.ಕೆ.‌ಶಿವಕುಮಾರ ಅವರಿಗೆ ಮನವಿ ಮಾಡಿ, ಶಿವಕುಮಾರ‌ ಅವರ ನೇತೃತ್ವದಲ್ಲಿ‌ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದ ರಾಮಯ್ಯ ಅವರ ಮಾರ್ಗದರ್ಶನದಲ್ಲಿ‌‌ ಮಸ್ಕಿ ಯಲ್ಲಿ ನಡೆಯುವ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿ ಸರಕಾರದ ಅವನತಿಗೆ ದಾರಿಮಾಡಿಕೊಡುತ್ತೇವೆ ಎಂದು ಹೇಳಿದರು.

ಯಾವುದೇ ಸಂದರ್ಬದಲ್ಲಿಯೂ ವಿಧಾನಸಭೆಗೆ ಚುನಾವಣೆ ಎದುರಾಗಬಹುದು.‌ ಪಕ್ಷದ‌ ಕಾರ್ಯಕರ್ತರು ಪಕ್ಷ ಸಂಘಟನೆ ಮಾಡಿ‌ ಕಕ ಭಾಗದ 40 ಸ್ಥಾನಗಳಲ್ಲಿ 35 ಸ್ಥಾನಗಳನ್ನು ಗೆಲ್ಲಲಿವೆ ಎಂದು ಖಂಡ್ರೆ ಹೇಳಿದರು.

ವೇದಿಕೆ ಮೇಲೆ ಶಾಸಕರಾದ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್, ಜಗದೇವ ಗುತ್ತೇದಾರ ಸೇರಿದಂತೆ ಮತ್ತಿತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here