ಶಹಾಪುರ: ಮಹಾರಾಷ್ಟ್ರದ ಮಹಾಮಳೆಗೆ ನಾರಾಯಣಪುರ ಜಲಾಶಯ ತುಂಬಿರುವುದರಿಂದ ಕೃಷ್ಣಾ ನದಿಗೆ 2.60 ಸಾವಿರ ಕ್ಯೂಸೆಕ ನೀರು ನದಿಗೆ ಹರಿಬಿಡಲಾಗುತ್ತಿದೆ.
ಆದ್ದರಿಂದ ಶಹಾಪುರ – ದೇವದುರ್ಗ ಸಂಪರ್ಕ ರಸ್ತೆ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ ಸೇತುವೆಯ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ.
ನದಿ ತಟದ ಗ್ರಾಮಗಳಿಗೆ ಹಿನ್ನೀರು ನುಗ್ಗಿರುವುದರಿಂದ ಜನ ಹಾಗೂ ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.