ಕಲಬುರಗಿ: ಶರಣ ವೃತ್ತಿ ಯಾವುದೇ ಇದ್ದರೂ ಅದನ್ನು ಮೆಚ್ಚಿಕೊಳ್ಳುವಂತಹ ಒಪ್ಪಿಕೊಳ್ಳುವಂತಹ ಅಭಿಮಾನ ಪಡುವಂತಹ ವ್ಯಕ್ತಿತ್ವವುಳ್ಳವರಾಗಿದ್ದರು. ಹುಟ್ಟು ಸಾವುಗಳೆಂಬ ಜೀವನದ ನದಿಯನ್ನು ಕೂಡಾದಾಟಿಸುವಂತಹ ದಾರ್ಶನಿಕ ವಚನಕಾರರಾಗಿದ್ದರು ಎಂದು ಕನ್ನಡ ಪ್ರಾಧ್ಯಾಪಕರಾದ ಡಾ.ಚಿತ್ಕಳಾ ಮಠಪತಿ ಹೇಳಿದರು.
ಇಲ್ಲಿನ ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಲಿಂ. ರುದ್ರಪ್ಪ ಬೆನಕನಳ್ಳಿ ರಟಕಲ್, ಲಿಂ. ಸುಭಾಶ್ಚಂದ್ರರುದ್ರಪ್ಪ ಬೆನಕನಳ್ಳಿ ರಟಕಲ್ ಮತ್ತು ಲಿಂ. ರೇವಣಪ್ಪ ಸಂಗಪ್ಪ ಮೀಸೆ, ಲಿಂ.ಡಾ. ಅನಿಲ ರೇವಣಪ್ಪ ಮೀಸೆ ಸ್ಮರಣಾರ್ಥ ಆನ್‌ಲೈನ್ ಅರಿವಿನ ಮನೆ ೬೩೬ ನೆಯದತ್ತಿ ಕಾರ್ಯಕ್ರಮದಲ್ಲಿ ’ನಿಜ ಶರಣ ಅಂಬಿಗರಚೌಡಯ್ಯ’ಎಂಬ ವಿಷಯದ ಕುರಿತು ಮಾತನಾಡಿದರು.
ವೃತ್ತಿಯನ್ನು ಶರಣರುಉದರಪೋಷಣೆಂದು ಕೈ ಕೊಂಡಿದ್ದರೂಕೂಡಾಅದರ ನೆಲೆಯಲ್ಲಿದ್ದುಕೊಂಡು ಮಹಾನುಭಾವಿಗಳಾದದ್ದು ವಿಶೇಷವೆನ್ನಬಹುದು. ಅಂಬಿಗರಚೌಡಯ್ಯನವರುತಮ್ಮ ವೃತ್ತಿಯ ವೈಶಿಷ್ಟ್ಯಗಳನ್ನು ತಮ್ಮ ವಚನಗಳಲ್ಲಿ ಅದು ಬದುಕಿಗೂ ಹಾಗೂ ವೃತ್ತಿಗೂಅನ್ವಯವಾಗುವಂತೆ ಬರೆದಿದ್ದಾರೆ.ಚಂದಗೆಟ್ಟವರೆಲ್ಲಾ ಬಂದುಏರಿ ನನ್ನದೋಣಿ ಶಿವನ ನೆಲೆ ಕಾಣಿಸುವೆಎಂದು ಹೇಳುತ್ತಾ ಬದುಕಿನಬವಣೆಗಳ ಮಧ್ಯೆ ಸಿಲುಕಿಕೊಂಡವರನ್ನೂ ಆನುಭಾವಿಕ ನೆಲೆಗೆ ಕೊಂಡೊಯ್ಯವ ಮಾತುಗಳನ್ನಾಡಿದ್ದಾರೆ. ದೋಣಿಯನ್ನೇರಿದವರು ತನಗೆ ಕೊಡಬೇಕಾದ ಉದರ ಪೋಷಣೆಯದುಡ್ಡಿಗೂ ಸಹ ಹಿಡಿದ ಬಿಡುವ ಮನವನ್ನು ನನಗೆ ಕೊಡಿರೆಂದು ಹೇಳುತ್ತಾರೆ. ಮನದಚಾಂಚಲ್ಯವನ್ನು ಕಳೆದು ಜೀವನದ ಸಾರ್ಥಕತೆಯನ್ನುಕಾಣುವತ್ತ ಪಯಣಿಗರನ್ನುಒಯ್ಯುವ ಮಹದಾಸೆಯನ್ನುತಮ್ಮ ವಚನಗಳಲ್ಲಿ ವ್ಯಕ್ತಿಪಡಿಸುತ್ತಾರೆ.
ಅಂಬಿಗರಚೌಡಯ್ಯನವರ ವಚನಗಳಲ್ಲಿ ರೊಟ್ಟಿ,ಹೊಟ್ಟಿಉದರನ್ನಮುಟಿಗಿ, ಸೀತನಿ ಮುಂತಾದ ಪದಗಳು ಬರುವುದನ್ನು ನೋಡಿದರೆಅವರುಉತ್ತರಕರ್ನಾಟಕ ಭಾಗದವರೆಂಬುದುಖಚಿತವಾಗುತ್ತದೆ. ಈ ಬಗ್ಗೆ ಅನೇಕ ಸಂಶೋಧಕರೂ ಸಹಮತ ವ್ಯಕ್ತ ಪಡಿಸುತ್ತಾರೆ.ಕಲ್ಯಾಣದತ್ರಿಪುರಾಂತಕಕೆರೆಯಲ್ಲಿತನ್ನಕಾಯಕವನ್ನುಕೈಗೊಂಡಿದ್ದರ ಬಗ್ಗೆ ಉಲ್ಲೇಖಗಳು ಸಿಗುತ್ತವೆ. ಕನ್ನಡಅಭಿವೃದ್ಧಿ ಪ್ರಾಧಿಕಾರದವರು ಪ್ರಕಟಿಸಿದ ವಚನ ಸಂಕಲನದಲ್ಲಿಚೌಡಯ್ಯನವರ ೨೭೯ ವಚನಗಳನ್ನು ಕಾಣಬಹುದು ಬೇರೆ ಬೇರೆಕಡೆ ಪ್ರಕಟಗೋಂಡ ೩೦೦ ವಚನಗಳನ್ನು ನಾವು ಗುರುತಿಸಬಹುದು.
ತಮ್ಮ ಹೆಸರನ್ನೇ ವಚನಾಂಕಿತವನ್ನಾಗಿಸಿಕೊಂಡ ಏಕೈಕ ಧೀರೋದ್ದಾತ ವ್ಯಕ್ತಿತ್ವದ ಶರಣ ನೆಂದರೆ ಅದು ಅಂಬಿಗರಚೌಡಯ್ಯ ಮಾತ್ರ.ಅವರ ವಚನಗಳಲ್ಲಿ ನಿಷ್ಠುರ, ನಿರ್ಭಿಡೆಯ ನುಡಿಗಳನ್ನು ನಾವು ಸಾಕಷ್ಟು ಸಂಖ್ಯೆಯಲ್ಲಿಕಾಣಬಹುದಾಗಿದೆ.ಕಟ್ಟಿದ ಲಿಂಗವ ಬಿಟ್ಟು.ಬೆಟ್ಟದಲಿಂಗಕ್ಕೆ ಹೋಗಿ, ಹೊಟ್ಟೆಯಡಿಯಾಗಿ ಬೀಳುವ ಲೊಟ್ಟಿ ಮೂಳರ ಕಂಡರೆ ಮೆಟ್ಟಿದಎಡಪಾದರಕ್ಷೆಯಕೊಂಡು ಲೊಟ ಲೊಟನೆ ಹೊಡೆಯೆಂದಾತ ನಮ್ಮಅಂಬಿಗರಚೌಡಯ್ಯಎಂದು ಹೇಳುತ್ತಾ ಮೌಢ್ಯತೆಯ ವಿರುದ್ಧ ಮುಲಾಜಿಲ್ಲದೆಗುಡುಗಿದ್ದನ್ನು ನಾವು ಕಾಣಬಹುದಾಗಿದೆ.
ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ.ಜಯಶ್ರೀದಂಡೆ, ಡಾ. ಬಿ.ಡಿಜತ್ತಿ ವಚನ ಅಧ್ಯಯ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ. ವೀರಣ್ಣದಂಡೆ ಹಾಗೂ ದತ್ತಿ ದಾಸೋಹಿಗಳಾದ ಶ್ರೀ ಶೀಲಾ ಕೋಣಿನ ಮತ್ತು ಡಾ.ಶಶಿಕಾಂತ ಆರ್.ಮೀಸೆಉಪಸ್ಥಿತರಿದ್ದರು.ಶ್ರೀ ಹೆಚ್.ಕೆ.ಉದ್ದಂಡಯ್ಯಕಾರ್ಯಕ್ರಮ ನಿರೂಪಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…