ಶಿಕ್ಷಕರ ವೃತ್ತಿ ಸಾರ್ಥಕ ಸಮರ್ಪಕ ಭಾವದಿಂದ ಕೂಡಿರಬೇಕು: ಮೇಜರ್ ಸಿದ್ಧಲಿಂಗಯ್ಯ ಹಿರೇಮಠ

0
75

ಚಿತ್ತಾಪೂರ: ಶಿಕ್ಷಕ ವೃತ್ತಿ ಪರಮಪಾವಿತ್ರ್ಯತೆ ಹೊಂದಿದೆ, ನಮ್ಮ ತಂದೆ ತಾಯಿ ಇಬ್ಬರೂ ಶಿಕ್ಷಕರಾಗಿದ್ದು ಅವರ ಆಶಿರ್ವಾದವೇ ನಾವಿಂದು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಶಿಕ್ಷಕರ ವೃತ್ತಿ ಸಾರ್ಥಕ ಸಮರ್ಪಕ ಭಾವದಿಂದ ಕೂಡಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯ ಹಿರೆಮಠ ಅಭಿಮತ ವ್ಯಕ್ತಪಡಿಸಿದರು.

ತಾಲ್ಲೂಕಿನ ಪ್ರಜ್ಞಾ The institute of innovative learning ಹೃದಯಾಂತರಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಹಾಗೂ ಪ್ರಜ್ಞಾ ಸಂಸ್ಥೆಯ ನಿರ್ದೇಶಕರಾದ ಕೆ.ಎಂ.ವಿಶ್ವನಾಥ ಮರತೂರ ಅವರು ಮಕ್ಕಳು ಮೆಚ್ಚುವ ಶಿಕ್ಷಕರಾಗಲು ಇರುವ ಸಾಧ್ಯತೆ ಮತ್ತು ಸವಾಲುಗಳ ಕುರಿತು ವಿ?ಯ ಮಂಡನೆ ಮಾಡಿದರು.

Contact Your\'s Advertisement; 9902492681

ಶಿಕ್ಷಕರಿಂದ ಸುಗಮಕಾರರಾಗಿ ಬದಲಾಗಬೇಕಾದದ್ದು ಇಂದಿನ ಅಗತ್ಯವಾಗಿದೆ.ಶಿಕ್ಷಕ ಸದಾ ನಗುಮುಖದಿಂದಿರುವುದು ಬಹಳ ಅವಶ್ಯಕೆತಯಿದೆ. ಶಿಕ್ಷಕರಾದವರಿಗೆ ಆತ್ಮವಿಶ್ವಾಸ ಬಹಳ ಮುಖ್ಯವಾಗುತ್ತದೆ. ಶಿಕ್ಷಕರಿಗೆ ಉತ್ತಮವಾಗಿ ಓದುವ ಹವ್ಯಾಸವಿರಬೇಕು.ಶಿಕ್ಷಕನ ಬಹುಮುಖ್ಯ ಆಸ್ತಿ ಅವರ ಧ್ವನಿ ಅಥವಾ ಕಂಠ. ಶಿಕ್ಷಕರು ತಮ್ಮದೇ ಆದ ಶಾರೀರಿಕ ಅಭಿವ್ಯಕ್ತಿಯನ್ನು ಹೊಂದುವುದು ಅತ್ಯಂತ ಮುಖ್ಯವಾಗುತ್ತದೆ. ಉತ್ತಮ ಶಿಕ್ಷಕ ಉತ್ತಮ ಬರವಣಿಗೆಕಾರನು ಆಗಿರುವುದು ಅಗತ್ಯವಾಗಿದೆ.ಮಾತು ಮಕ್ಕಳ ಮನಸ್ಸಿನಾಳಕ್ಕಿಳಿದರೆ ಅರ್ಧಪಾಠ ಮುಗಿಸಿದ ಹಾಗೆ.ಶಿಕ್ಷಕ ವೃತ್ತಿಯನ್ನು ಪ್ರೀತಿಸಿ ಅದರಂತೆ ವರ್ತಿಸುವುದು ಅನಿವಾರ್ಯವಿದೆ. ಸಮರ್ಪಕ ತಯಾರಿ ನಡೆಸದೇ ತರಗತಿ ಪ್ರವೇಶಿಸಬೇಡಿ.ಸಮಯವನ್ನು ಸರಿಯಾಗಿ ನಿರ್ವಹಿಸಿ ನೀವು ಮಕ್ಕಳಿಗೆ ಮಾದರಿಯಾಗಿ. ಶಿಕ್ಷಕ ವೃತ್ತಿಯಲ್ಲಿ ನಂಬಿಕೆ ಅವಶ್ಯಕೆತೆಯಿದೆ.ಮಕ್ಕಳಿಗೆ ಅನುಕೂಲಿಸುವ ಪಾತ್ರ ನಮ್ಮದು.ಸರ್ವಧರ್ಮ ಸಮಾನತ್ವ ಭಾವನೆಯನ್ನು ಬೆಳಸಬೇಕುನಾವು ಶೋಧಕ-ಬೋಧಕ ಶಿಕ್ಷಕರಾಗಬೇಕು. ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ ವಾಸುದೇವ ಶರ್ಮಾ ಕಾರ್ಯನಿರ್ವಾಹಣ ಅಧಿಕಾರಿಗಳು ಚೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರು ಇವರು ಶಿಕ್ಷಕರ ಕುರಿತು ವಿಷಯ ಮಂಡನೆ ತುಂಬಾ ಅರ್ಥಪೂರ್ಣವಾಗಿತ್ತು. ಮಕ್ಕಳ ಹಕ್ಕುಗಳ ದೃಷ್ಠಿಯಲ್ಲಿ ಎಲ್ಲಾ ಶಿಕ್ಷಕರು ಮಕ್ಕಳನ್ನು ತಾರತಮ್ಯರಹಿತ ಶಿಕ್ಷಣ ಕೊಡಬೇಕು. ಮಕ್ಕಳನ್ನು ಹೋಲಿಕೆ ಮಾಡದೇ ಅವರಲ್ಲಿ ಇರುವ ಕೌಶಲ್ಯಕ್ಕೆ ತಕ್ಕಂತೆ ಸುಗಮಕಾರರಾಗಿ ಮಕ್ಕಳಿಗೆ ಕಲಿಸಬೇಕು. ಮಕ್ಕಳನ್ನು ಸರ್ವಧರ್ಮ ಸಮಾನತ್ವ, ಸಂವಿಧಾನದ ತತ್ವದಡಿಯಲ್ಲಿ ಕಲಿಕೆಗೆ ಅಣಿಮಾಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಎಸ್.ಆರ್. ಬುರಡಿ, ವಿಠೋಬಾ ಎಂ. ಪತ್ತಾರ್ ಡಾ. ನಾಗರಾಜ ಹೆಬ್ಬಾಳ , ಡಾ. ಕೃ?ಮೂರ್ತಿ ಕುಲಕರ್ಣಿ ,ಡಾ. ಸಿದ್ಧರಾಜ ರೆಡ್ಡಿ , ಕಿರಣ ಕೆ.ಪಿ. ಉಮಾಮಹೇಶ ಎ. ತಮ್ಮ ಅಮುಲ್ಯವಾದ ಪ್ರತಿಕ್ರಿಯೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ೮೦ ಜನ ಶಿಕ್ಷಣ ಪ್ರೇಮಿಗಳು ಶಿಕ್ಷಕರು ಭಾಗವಹಿಸಿ ಯಶಶ್ವೀಗೊಳಿಸಿದರು.

ಶಿಕ್ಷಣ ಪ್ರೇಮಿ ಕಾಶಿನಾಥ ಪುಜಾರಿ ಉಪಸ್ಥಿತರಿದ್ದು ಉಮೇಶ ಗುತ್ತೇದಾರ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here