ಶಹಾಬಾದ: ಸುಮಾರು ಒಂದು ವರ್ಷದಿಂದ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಶಹಾಬಾದ ಉಪವಿಭಾಗದ ಅಪರಾಧ ಪತ್ತೆ ದಳದವರು ಬಂಧಿಸಿ ಸುಮಾರು 163 ಗ್ರಾಂ ಬಂಗಾರ, 50 ಸಾವಿರ ನಗದು ಹಣ ಹಾಗೂ ಐದು ಬೈಕಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜೇವರ್ಗಿ ತಾಲೂಕಿನ ಬೀರಾಳ(ಕೆ) ಗ್ರಾಮದ ಶಿವ ಅಲಿಯಾಸ ಶಿವಪ್ಪ ಮಲ್ಲಪ್ಪ ತಣಕೇದಾರ ಬಂಧಿತ ಆರೋಪಿ.ಸುಮಾರು ಒಂದು ವರ್ಷದಿಂದ ವಿವಿಧ ಜಿಲ್ಲೆಯ ವಿವಿಧ ಗ್ರಾಮದ ಮನೆಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನಿಂದ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 163 ಗ್ರಾಂ ಬಂಗಾರ, 50 ಸಾವಿರ ನಗದು ಹಣ ಹಾಗೂ ಐದು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಲಬುರಗಿ ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ್, ಹೆಚ್ಚುವರಿ ಎಸ್ಪಿ ಪ್ರಸನ್ನಕುಮಾರ ದೇಸಾಯಿ, ಡಿವಾಯ್ಎಸ್ಪಿ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ಪಿಐ ಅಮರೇಶ.ಬಿ, ಚಿತ್ತಾಪೂರ ಪಿಐಕಲ್ಲದೇವರು,ವಾಡಿ ಪಿಎಸ್ಐ ದಿವ್ಯಾ, ನಗರದ ಪಿಎಸ್ಐ ತಿರುಮಲೇಶ, ಸಿಬ್ಬಂದಿಗಳಾದ ಗುಂಡಪ್ಪ ಕೋಗನೂರ್, ನಾಗೇಂದ್ರ ತಳವಾರ, ಬಸವರಾಜ ಹುಚ್ಚಡ್, ವಿಶ್ವಾನಾಥ ಹೂಗಾರ, ಲಕ್ಷ್ಮಣ ವಾಡಿ,ಬಸವರಾಜ ವಾಡಿ ಸೇರಿದಂತೆ ಸಿಡಿಆರ್ ತಂಡದ ಬಲರಾಮ ಸಹಯೋಗದಿಂದ ಆರೋಪಿಯನ್ನು ಬಂಧಿಸಿದ್ದಾರೆ.