ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರೀ ಯೋಜನೆಯಡಿ ಬಿ.ಎಫ್.ಟಿ. ನೇಮಕಾತಿ ತಾರತಮ್ಯ ಪರೀಕ್ಷೆಯನ್ನು ಹಣ ಕೊಟ್ಟವರಿಗೆ ಮಾತ್ರ ಪರೀಕ್ಷೆ ಬರೆಯಲು ಅನುಮತಿ ನೀಡಿ ಉಳಿದ ಅಭ್ಯಾರ್ಥಿಗಳಿಗೆ ಕೈ ಬಿಟ್ಟಿರುವುದನ್ನು ಖಂಡಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬಿ. ಎಫ್. ಟಿ ಹುದ್ದೆಗಾಗಿ ಅರ್ಜಿ ಸಲ್ಲಿಸಿದ ನೂರಾರು ಅಭ್ಯರ್ಥಿ ಗಳಿಗೆ ಪರೀಕ್ಷೆಯಿಂದ ಹೊರಗೆ ಇಟ್ಟಿದ್ದು ದೊಡ್ಡ ಅನ್ಯಾಯವಾಗಿ ದ್ದು ಇನ್ನೊಮ್ಮೆ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿ ನ್ಯಾಯ ಒದಗಿಸಬೇಕು ಅಭ್ಯರ್ಥಿಗಳಿಗೆ ತಾರತಮ್ಯ ಮಾಡಿದ ಉಪಕಾರ್ಯದರ್ಶಿಗೆ ತನಿಖೆಗೆ ಒಳಪಡಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ್ ಮ್ಯಾಗೇರಿ, ಎಸ್ ಎಫ್ ಐ ಜಿಲ್ಲಾ ಕಾರ್ಯದರ್ಶಿ ಸಿದ್ದಲಿಂಗ ಪಾಳಾ, ಕೆ.ಪಿ.ಆರ್.ಎಸ್ ಪಾಂಡುರಂಗ ಮಾವಿನಕರ, ಮೈಲಾರಿ ದೊಡ್ಡಮನಿ, ರಾಯಪ್ಪ ಹುರಮುಂಜಿ, ಶಾಂತಪ್ಪ ಪಾಟೀಲ್, ಲಕ್ಷ್ಮಣ ಪಾಳಾ, ಶಿವಕುಮಾರ್ ಕೂಲಕುಂದಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಇದ್ದರು.