ಮಕ್ಕಳಿಗೆ ಸೂಕ್ತ ಭದ್ರತೆ ಒದಗಿಸಿ ಶಾಲೆ ಪ್ರಾರಂಭಿಸಿ: ಣಮಂತರಾಯ ಅಟ್ಟೂರ

0
28

ಕಲಬುರಗಿ: ಕೋರೋನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ದಿಢೀರನೇ ಶಾಲೆ ಪ್ರಾರಂಭ ಮಾಡುವುದು ಬೇಡ. ಮೊದಲೇ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಸಂದರ್ಭದಲ್ಲಿ ಕೋರೊನಾ ಸೋಂಕು ಹರಡುವ ಸಂಭವ ಹೆಚ್ಚಿರುತ್ತದೆ. ಮಕ್ಕಳಿಗೆ ಒಬ್ಬರಿಗೆ ಸೋಂಕು ಬಂದರೆ ಇಡೀ ಶಾಲೆಯ ಮಕ್ಕಳಿಗೆ ಹರಡುವ ಸಂಭವವಿರುತ್ತದೆ ಅದಕ್ಕಾಗಿ ಅಪಘಾತಕ್ಕೆ ಅವಸರವೆ ಕಾರಣ ಅನ್ನುವ ಹಾಗೆ ದಿಢೀರನೆ ಶಾಲೆ ಪ್ರಾರಂಭ ಮಾಡಿ ಎಡವಟ್ಟು ಮಾಡಿಕೊಳ್ಳುವುದು ಬೇಡ ಎಂದು ಅಖಿಲ ಭಾರತ ಯುವಜನ ಒಕ್ಕೂಟ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ಒತ್ತಾಯಿಸಿದ ಅವರು ಶಾಲೆ ಪ್ರಾರಂಭಿಸಲು ಪೂರ್ವ ಸಿದ್ಧತಾ ಕ್ರಮಗಳ ಬಗ್ಗೆ ಸರ್ಕಾರ ಹೇಳಲಿ ಸರಕಾರಿ ಶಾಲೆ ಮಕ್ಕಳಿಗೆ ಶಾರೀರಿಕ ಅಂತರ, ಮಾ, ಸ್ಯಾನಿಟೈಜರ್ ಯಾವ ರೀತಿ ಪೂರೈಸುವುದು? ಸೋಂಕಿನಿಂದ ವಿಧಾನಸಭೆಯಲ್ಲಿ ಸದನ ನಡೆಸದೆ ಆಗದಿರುವ ಸಂದರ್ಭದಲ್ಲಿ ಶಾಲೆ ನಡೆಸಲು ಹೇಗೆ ಸಾಧ್ಯ? ಕಾರಣ ಸೋಂಕು ತಡೆಗಟ್ಟುವ ಕಾರ್ಯದೊಂದಿಗೆ ಶಾಲೆ ಪ್ರಾರಂಭಿಸಲು ಪೂರ್ವ  ಸಿದ್ಧತೆ ಮಾಡಿಕೊಂಡು ಶಾಲೆ ಪ್ರಾರಂಭಿಸಿ ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಈಗಾಗಲೇ ಹಲವಾರು ಜನ ಶಾಸಕರಿಗೆ, ಸಚಿವರಿಗೆ ಸೋಂಕು ಹರಡುತ್ತಿದ್ದು ಹಲವಾರು ಜನ ಬಲಿಯಾಗುತ್ತಿರುವುದು, ಪ್ರತಿ ಜಿಯಲ್ಲಿ ರೋಗಿಗಳ ಸಂಖ್ಯೆ ಮೂರು ಅಂಕಿ ದಾಟುತ್ತಿರುವ ಸಂದರ್ಭದಲ್ಲಿ ಸಂಧಿಗ್ದ ಪರಿಸ್ಥಿತಿಗಳಲ್ಲಿ ಜೀವನ ನಡೆಸುತ್ತಿದೇವೆ. ಮಕ್ಕಳಿಗೆ ಸೂಕ್ತ ಭದ್ರತೆ ಒದಗಿಸಿ ಶಾಲೆ ಪ್ರಾರಂಭಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here