ರತ್ತಾಳ ಗ್ರಾಮದ ಶಾಲೆಯ ಇಬ್ಬರು ಶಿಕ್ಷಕರು ಮಕ್ಕಳಿಗೆ ಕೊರೊನಾ:ಆತಂಕದಲ್ಲಿ ಪೋಷಕರು

0
40

ಸುರಪುರ: ತಾಲೂಕಿನ ರತ್ತಾಳ ಗ್ರಾಮದ ಸರಕಾರಿ ಶಾಲೆಯ ಇಬ್ಬರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು ಜೊತೆಗೆ ಇಬ್ಬರು ಮಕ್ಕಳಲ್ಲಿಯೂ ಕೊರೊನಾ ಸೊಂಕು ಕಾಣಿಸಿಕೊಂಡಿದೆ.

ಕಳೆದ ಅನೇಕ ದಿನಗಳಿಂದ ರತ್ತಾಳದಲ್ಲಿ ವಿದ್ಯಾಗಮ ಹಾಗು ವಠಾರ ಶಾಲೆಗಳನ್ನು ನಡೆಸುತ್ತಿದ್ದ ಶಿಕ್ಷಕರಲ್ಲಿ ಇಂಗ್ಲೀಷ್ ಮತ್ತು ಗಣಿತ ತರಗತಿಯ ಶಿಕ್ಷಕರಿಗೆ ಮತ್ತು ಇಬ್ಬರು ಮಕ್ಕಳಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ.

Contact Your\'s Advertisement; 9902492681

ಇದರಿಂದ ಕಳೆದ ಅನೇಕ ದಿನಗಳಿಂದ ಗ್ರಾಮದಲ್ಲಿ ನಡೆಯುತ್ತಿದ್ದ ವಿದ್ಯಾಗಮ ಮತ್ತು ವಠಾರ ಶಾಲೆಗಳಲ್ಲಿ ಕುಳಿತಿದ್ದ ತಮ್ಮ ಮಕ್ಕಳಿಗು ಈ ಸೊಂಕು ಹರಡಿದ್ದರೆ ಗತಿ ಏನು ಎಂದು ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here