ಕಲಬುರಗಿ: ಭೀಮಾನದಿಯ ಹಿನ್ನಿರಿನಿಂದ ಸಂಪೂರ್ಣವಾಗಿ ಜಲಾವ್ರತವಾದ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿನ ಮಹತ್ವದ ದಾಖಲೆಗಳನ್ನು ತೆಪ್ಪದ ಮೂಲಕ ಶಾಲೆಯಿಂದ ಹೊರಗೆ ತರಲು ಮುಖ್ಶಗುರುಗಳು ಹರಸಾಹಸಪಟ್ಟು ಯಶಸ್ವಿಯಾಗಿದ್ದಾರೆ.
ಎಂದಿನಂತೆ ಮುಖ್ಶಗುರು ಶರಣಪ್ಪ ಹೊಸಮನಿ ಶಾಲೆಗೆ ತೆರಳುತ್ತಿರುವಾಗ ಶಾಲೆ ಹಾಗೂ ಕಂಪೌಂಡ ಗೋಡೆ ಸಂಪೂರ್ಣವಾಗಿ ನೀರಿನಿಂದ ಆವ್ರತ್ತವಾಗಿರುವುದು ದೂರದಿಂದಲೇ ಗಮನಿಸಿದ್ದಾರೆ.
ತಕ್ಷಣವೇ ಕಾರ್ಯಪ್ರವ್ರತ್ತರಾದ ಅವರುˌ ರಭಸದಿಂದ ಹರಿಯುತ್ತಿರುವ ನೀರಿನಲ್ಲಿಯೇ ತೆಪ್ಪದ ಮೂಲಕ ಶಾಲೆಗೆ ತೆರಳಿ ಕೆಲವು ಬೆಲೆಬಾಳುವ ವಸ್ತುಗಳನ್ನು ಸಂರಕ್ಷಿಸಿದ್ದಾರೆ.
ಶಾಲಾ ಮುಖ್ಯದಾಖಲಾತಿಗಳುˌ ಕಂಪ್ಯೂಟರ್ ಹಾಗೂ ಅಕ್ಕಿ ಬೇಳೆಗಳನ್ನು ಸಂರಕ್ಷಿಸಿದ್ದಾರೆ. ಇನ್ನು ಕೆಲವು ಅಡುಗೆ ಸಾಮಾಗ್ರಿಗಳು ಸೇರಿದಂತೆ ಅನೇಕ ವಸ್ತುಗಳು ನೀರಿನಲ್ಲಿ ಮುಳುಗಿ ಹೋಗಿವೆ.
ಮುಖ್ಶಗುರು ಶರಣಪ್ಪ ಹೊಸಮನಿ ಅವರ ಕಾರ್ಯಕ್ಕೆ ಗ್ರಾಮ ಪಂಚಾಯತ ಅಧ್ಶಕ್ಷ ಕ್ರಷ್ಣಾರೆಡ್ಡಿˌ ತಾಪಂ ಸದಸ್ಶ ಭಾಗಪ್ಪ ಯಾದಗಿರಿˌ ಜಕ್ಕಪ್ಪ ಸೇರಿದಂತೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.