ದೇಶ 14 ಸ್ಥಳಗಳಲ್ಲಿ ಅಶೋಕ ಪ್ರತಿಮೆ-ಸ್ತಂಭ ಸ್ಥಾಪನೆ

0
54

ವಾಡಿ: ಬೌದ್ಧ ಧಮ್ಮ ಪ್ರಚಾರಕ, ವಿಶ್ವ ಕಲ್ಯಾಣಕಾರಿ ಶಾಂತಿ ಸಾಮ್ರಾಟ್ ಅಶೋಕ ಚಕ್ರವರ್ತಿ ಅವರ ಅನುಯಾಯಿ, ಮಹಾರಾಷ್ಟ್ರದ ಅಶೋಕ ಸರ್ವಾಂಗೀಣ ವಿಕಾಸ ಸಂಸ್ಥೆಯ ಅಧ್ಯಕ್ಷ ಡಾ.ಅಶೋಕ ಶೀಲವಂತ ಅವರು ಅ.೯ ರಂದು ಪುಣೆಯಲ್ಲಿ ನಿಧನರಾಗಿದ್ದು, ಬುದ್ಧವಾಸಿಯ ಚಿತಾಭಸ್ಮವನ್ನು ಮಂಗಳವಾರ ಸನ್ನತಿಯ ಐತಿಹಾಸಿಕ ಬೌದ್ಧ ಶಿಲಾ ಸ್ತೂಪ ಆವರಣಕ್ಕೆ ತಂದು ಭೀಮಾನದಿ ದಂಡೆಯಲ್ಲಿ ದಿ.ಅಶೋಕ ಶೀಲವಂತ ಅವರೇ ಸ್ಥಾಪಿಸಿರುವ ಸಾಮ್ರಾಟ್ ಅಶೋಕ ಚಕ್ರವರ್ತಿಯ ಪ್ರತಿಮೆ ಮತ್ತು ಅಶೋಕ ಸ್ತಂಭ ಸ್ಥಳದಲ್ಲಿ ಲೀನಗೊಳಿಸಲಾಯಿತು.

ಧಮ್ಮ ಪ್ರಾರ್ಥನೆ ನಂತರ ನಡೆದ ಸಮಾರಂಭ ಉದ್ದೇಶಿಸಿ ಮಾತನಾಡಿದ ಅಶೋಕ ಸರ್ವಾಂಗೀಣ ವಿಕಾಸ ಸಂಸ್ಥೆಯ ಕಾರ್ಯಧ್ಯಕ್ಷ, ದಿ.ಅಶೋಕ ಶೀಲವಂತ ಅವರ ಪುತ್ರ ರಾಜರತ್ನ ಶೀಲವಂತ, ಪ್ರಪಂಚಕ್ಕೆ ಬೌದ್ಧ ಧಮ್ಮವನ್ನು ಪರಿಚಯಿಸಿದ ಮೌರ್ಯ ಸಾಮ್ರಾಜ್ಯದ ಧೊರೆ ಸಾಮ್ರಾಟ್ ಅಶೋಕ ಚಕ್ರರ್ತಿ ಅವರ ಮತ್ತು ಬುದ್ಧನ ಶಾಸನಗಳು ಮತ್ತು ಮೂರ್ತಿಗಳು ಯಾವೂದೇ ಸ್ಥಳದಲ್ಲಿ ದೊರೆತಿವೆ ಮತ್ತು ಎಲ್ಲೆಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಜ್ಜೆಗುರುತುಗಳು ಮೂಡಿವೆಯೋ ಅಲ್ಲಿಗೆ ತೆರಳುತ್ತಿದ್ದ ನಮ್ಮ ತಂದೆ ಅಶೋಕ ಶೀಲವಂತ ಅವರು ಆ ಸ್ಥಳಗಳಲ್ಲಿ ಉಚಿತವಾಗಿ ಸಾಮ್ರಾಟ್ ಅಶೋಕನ ಪ್ರತಿಮೆ ಹಾಗೂ ಬಹು ಎತ್ತರದ ಅಶೋಕ ಸ್ತಂಭ ನಿರ್ಮಿಸಿ ಧಮ್ಮ ಸೇವೆ ಮಾಡುವ ಪಣ ತೊಟ್ಟಿದ್ದರು.

Contact Your\'s Advertisement; 9902492681

ಪರಿಣಾಮ ಸಾಮ್ರಾಟ್ ಅಶೋಕನ ದಕ್ಷಿಣ ರಾಜ್ಯಧಾನಿ ಕರ್ನಾಟಕದ ಕಲಬುರಗಿಯ ಸನ್ನತಿ, ಮಹಾರಾಷ್ಟ್ರದ ಲೂನೋಲಾ, ಅಂಬೇಡ್ಕರರು ಹಿಂದೂ ಧರ್ಮದಲ್ಲಿ ಸಾಯುವುದಿಲ್ಲ ಎಂದು ಘೋಷಣೆ ಮಾಡಿದ ಸ್ಥಳ ಏವೋಲಾ, ಅಂಬೇಡ್ಕರರ ಜನ್ಮಸ್ಥಳ ಮಂಡನಗಡ್ ತಾಲೂಕಿನ ಅಂಬೇವಾಡ, ಛತ್ರಪತಿ ಶಾಹುಮಹಾರಾಜರು ಅಂಬೇಡ್ಕರರನ್ನು ದಲಿತರ ನಾಯಕ ಎಂದು ಘೋಷಿಸಿದ ಕೊಲ್ಲಾಪುರದ ಮಾನಗಾಂವ, ಅಂಬೇಡ್ಕರರು ಮೊದಲ ಬುದ್ಧ ಮೂರ್ತಿ ಸ್ಥಾಪಿಸಿದ ಆಗ್ರಾ, ನಾಗಪೂರದ ಕಾಮ್ಟಿ ಡ್ರೈಗನ್ ಪ್ಯಾಲೇಸ್, ಅಂಬೇಡ್ಕರರ ಅಸ್ತಿಯಿರುವ ಬೋಂದಿಯಾ ಸೇರಿದಂತೆ ದೇಶದ ಐತಿಹಾಸಿಕ ೧೪ ಸ್ಥಳಗಳಲ್ಲಿ ಸಾಮ್ರಾಟ್ ಅಶೋಕನ ಪ್ರತಿಮೆಗಳನ್ನು ಸ್ಥಾಪಿಸಲಾಗಿದ್ದು, ಗುರುತಿಸಲಾಗಿರುವ ಓನಂದ, ನಾಲಸುಬ್ಬರಾ, ಲಾತೂರ, ನೇಪಾಳದಲ್ಲೂ ಅಶೋಕ ಮೂರ್ತಿಗಳನ್ನು ಸ್ಥಾಪಿಸುವ ಗುರಿಯಿದೆ ಎಂದರು.

ಕೊರಿನಾ ಸೋಂಕಿನಿಂದ ಬಳಲುತ್ತಿದ್ದಾಗ ನನ್ನ ಚಿತಾಭಸ್ಮವನ್ನು ನದಿಗಳಿಗೆ ಬಿಡದೆ, ನಾನು ಸ್ಥಾಪಿಸಿರುವ ದೇಶದೆಲ್ಲೆಡೆಯ ಅಶೋಕ ಮೂರ್ತಿ-ಸ್ತಂಭಗಳಲ್ಲಿ ಲೀನಗೊಳಿಸಬೇಕು ಎಂದು ಹೇಳಿದ್ದರು. ಅದರಂತೆ ನಡೆದುಕೊಳ್ಳಲಾಗಿದೆ. ಬೌದ್ಧ ಧಮ್ಮ ಪ್ರಚಾರ ಕಾರ್ಯ ಮತ್ತಷ್ಟು ಸ್ಪೂರ್ತಿಯಿಂದ ಮುಂದುವರೆಸಲಾಗುವುದು ಎಂದು ಹೇಳಿದರು.

ವಾಡಿ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ, ಪ್ರಧಾನ ಕಾರ್ಯದರ್ಶಿ ಶರಣಬಸು ಸಿರೂರಕರ, ಕಾರ್ಯಾಧ್ಯಕ್ಷ ಇಂದ್ರಜೀತ ಸಿಂಗೆ, ತಾಪಂ ಸದಸ್ಯ ಭಾಗಪ್ಪ ಯಾದಗಿರಿ, ಪುರಸಭೆ ಸದಸ್ಯ ಶರಣು ನಾಟೇಕರ, ದಲಿತ ಮುಖಂಡರಾದ ಸಾಯಬಣ್ಣ ಬನ್ನೇಟಿ, ಭಾಗಪ್ಪ ಕೊಲ್ಲೂರ, ಶಿವಯೋಗಿ ದೇವಿಂದ್ರಕರ ಕೊಲ್ಲೂರ, ಬಾಬು ಬಂದೆಳ್ಳಿ, ಮಲ್ಲಿಕಾರ್ಜುನ ತುನ್ನೂರ, ರಮೇಶ ಬಡಿಗೇರ, ಮೋನಪ್ಪ ಕನಗನಹಳ್ಳಿ, ವಿಜಯಕುಮಾರ ಸಿಂಗೆ, ರಾಜು ಉಳಂಡಗೇರಾ, ಮರಲಿಂಗ ಸನ್ನತಿ, ಭೀಮಾಶಂಕರ ಕೊಲ್ಲೂರ, ಮರೆಪ್ಪ ಬನ್ನೇಟಿ, ಸಿದ್ದಪ್ಪ ಸನ್ನತಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here