ವಕ್ಫ್ ಬೋರ್ಡ್ ವಿರುದ್ಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ

0
65

ಕಲಬುರಗಿ: ಕೋವಿಡ್-19 ಹಿನ್ನೆಯಲ್ಲಿ ಈದ್ ಏ ಮಿಲಾದುನ್ ನಬಿ ಆಚರಣೆ ಕುರಿತು ರಾಜ್ಯ ಸರಕಾರ ಮತ್ತು ವಕ್ಫ್ ಬೋರ್ಡ್ ಕೆಲವು ನಿಯಮಗಳು ಹೊರತಂದಿದ್ದು, ಇದೀಗ ಈ ನಿಯಮಗಳ ವಿರುದ್ಧ ಕಲಬುರಗಿ ಜಿಲ್ಲೆಯ ಮುಸ್ಲಿಂ ಸಂಘಟನೆಗಳು ಅಸಮಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಹಬ್ಬದ್ ಪ್ರಯುಕ್ತ ಜುಲೂಸ್ ಮೆರವಣೆಗೆ ನಿಷೇಧ ಹೇರಿದ ರಾಜ್ಯ ವಾಕ್ಫ್ ಮಂಡಳಿಯ ವಿರುದ್ಧ ಮುಸ್ಲಿಂ ಸಂಘಟನೆಗಳು ಸಂಜೆ 7 ಗಂಟೆಯಿಂದ ನಗರದ ಮುಸ್ಲಿಂ ಚೌಕ್ ನಲ್ಲಿ ಪ್ರತಿಭಟನೆ ನಡೆಸಿ ಜುಲೂಸ್ ಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಮಿಲಿ ಕೌನ್ಸಿಲ್ ಸದಸ್ಯರಾದ ಡಾ. ಮೊಹಮ್ಮದ್ ಅಜಗರ್ ಚುಲಬುಲ್ ಅವರು ಮಾತನಾಡಿ ವಕ್ಫ್ ಬೋರ್ಡ್ ಹಬ್ಬ ಆಚರಣೆ ನಿಯಮಗಳು ನಾವು ನಂಬುದಿಲ್ಲ. ವಾಕ್ಫ್ ಬೋರ್ಡ್ ರಾಜ್ಯ ಸರಕಾರದ ಕೈಗೊಂಬೆಯಾಗಿದೆ. ಇಸ್ಲಾಮಿಕ್ ಹಬ್ಬ ಆಚರಣೆಗಳ ಕುರಿತು ವಾಕ್ಫ್ ನಿಯಮ ರೂಪಿತಿರುವುದು ಖಂಡಿನೀಯವಾಗಿದೆ. ನಿಯಮ ನಿಬಂಧನೆಗಳ ಕುರಿತು ರಚಿಸುವ ಯಾವುದೆ ಅಧಿಕಾರಿ ವಾಕ್ಫ್ ಬೋರ್ಡ್ ಗೆ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಈದ್ ಪ್ರಯುಕ್ತ ಜಾರಿಗೊಳಿಸಿದ ನೂತನ ನಿಯಮವಳಿಗಳನ್ನು ಪ್ರತಿಭಟನಾಕಾರರು ಪ್ರತಿಗಳನ್ನು ಹರಿದು ಹಾಕುವ ಮೂಲಕ ಈದ್ ಮಿಲಾದ್ ಜುಲೂಸ್ ಅಚರಿಸೆ ಆಚರಿಸುತ್ತೇವೆ ಎಂದು ಪ್ರತಿಭಟನೆ ಕೈಬಿಟ್ಟರು.

ಪ್ರತಿಭಟನೆಯಲ್ಲಿ ನ್ಯಾಯವಾದಿ ವಾಹಾಜ್ ಬಾಬಾ, ರಹೀಮ್ ಮೀರ್ಚಿ, ಇಮ್ತೀಯಾಜ್ ಸಿದ್ದಿಖಿ, ಮೊಹಮ್ಮದ್ ಕಲೀಮ್ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here