ಉದ್ಯೋಗಾವಕಾಶ: ಸಂಘಟನೆಯ ಉದ್ದೇಶದಿಂದ ಎಐಎಚ್‌ಬಿಎ ಕರ್ನಾಟಕ ಚಾಪ್ಟರ್ ಆರಂಭ

0
54

ಬೆಂಗಳೂರು: ಸದಸ್ಯರುಗಳಿಗೆ ಉತ್ತಮ ಕೌಶಲ್ಯ ವರ್ಧನೆ ಹಾಗೂ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ ಆಲ್ ಇಂಡಿಯಾ ಹೇರ್ ಅಂಡ್‌ ಬ್ಯೂಟಿ ಅಸೋಸಿಯೇಷನ್ ನ ಕರ್ನಾಟಕ ಚಾಪ್ಟರ್ ಅನ್ನು ಬೆಂಗಳೂರಿನಲ್ಲಿ ಇಂದು ಆರಂಭಿಸಲಾಯಿತು. ಇದೇ ವೇಳೆ ಕರ್ನಾಟಕ ರಾಜ್ಯದ ಎಐಎಚ್‌ಬಿಎ ನ ಅಧ್ಯಕ್ಷೆಯಾಗಿ ಝೊರೇನ್, ಪ್ರಧಾನ ಕಾರ್ಯದರ್ಶಿ ಆಗಿ ಶಾನ್ ಅವರನ್ನು ನೇಮಕಗೊಳಿಸಿ ಘೋಷಿಸಲಾಯಿತು.

ನಗರದ ಖಾಸಗಿ ಹೋಟೇಲ್‌ ನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಚಾಪ್ಟರ್‌ ಗೆ ಚಾಲನೆ ನೀಡಿದ ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಅಂಥೋಣಿ ಡೇವಿಡ್ ಕರ್ನಾಟಕ ರಾಜ್ಯದ ಪದಾಧಿಕಾರಿಗಳನ್ನು ನೇಮಕ ಮಾಡಿ ಘೋಷಣೆ ಮಾಡಿದರು. ಸೌಂದರ್ಯ ಮತ್ತು ಕಾಸ್ಮೆಟಿಕ್ ಉದ್ಯಮದಲ್ಲಿ ಆರೋಗ್ಯ ದೃಷ್ಟಿಕೋನದ ಕುರಿತು ವಾಣಿಜ್ಯೋದ್ಯಮಿಗಳು, ಗ್ರಾಹಕರು ಮತ್ತು ವ್ಯಾಪಾರಸ್ಥರಿಗೆ ಶಿಕ್ಷಣ ನೀಡುವುದು, ಮಾಹಿತಿ ಪೂರೈಸುವುದು ಮತ್ತು ಅವರಲ್ಲಿ ಜಾಗೃತಿ ಮೂಡಿಸುವುದು ಅಸೋಸಿಯೇಷನ್ ನ ಮುಖ್ಯ ಗುರಿಯಾಗಿದೆ.

Contact Your\'s Advertisement; 9902492681

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾನ್ ಅವರು ಮಾತನಾಡಿ, “ಸೇವೆಗಳ ಗುಣಮಟ್ಟದಲ್ಲಿ ಸುಧಾರಣೆ, ಹೊಸ ಹೊಸ ತರಬೇತಿಗಳನ್ನು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಉದ್ಯಮದ ಪ್ರಗತಿಗೆ ಪೂರಕವಾದ ಕ್ರಮಗಳನ್ನು ಜಾರಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಇದೇ ವೇಳೆ, ಸೌಂದರ್ಯವರ್ಧಕ ಮತ್ತು ಕೇಶ ಉದ್ಯಮದ ಮೇಲಿನ ತೆರಿಗೆ ಹಾಕಿರುವುದರಿಂದ ಉದ್ಯಮದ ಮೇಲೆ ಆಗುತ್ತಿರುವ ಹೊರೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವಂತೆ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಆಡಳಿತಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ಉದ್ಯಮದಲ್ಲಿ ಆಗಿರುವ ಬದಲಾವಣೆಗಳು ಮತ್ತು ಆಗಲಿರುವ ಬದಲಾವಣೆಗಳನ್ನು ಎಲ್ಲಾ ಮಟ್ಟದಲ್ಲಿಯೂ ಅನುಷ್ಠಾನಕ್ಕೆ ತರುವುದು ಮತ್ತು ಸೂಕ್ತ ಪದ್ಧತಿಗಳನ್ನು ರೂಢಿಸಿಕೊಳ್ಳುವುದನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.’’ ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷೆ ಝೊರೇನ್ ಅವರು ಮಾತನಾಡಿ, `ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವ ಸಾಮರ್ಥ್ಯ ಮತ್ತು ಕೌಶಲ್ಯ ಇರುವವರಿಗೆ ಉತ್ತಮ ರೀತಿಯ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುವ ಯೋಜನೆಗಳನ್ನು ರೂಪಿಸಿದ್ದೇವೆ. ಭಾರತೀಯ ಕೇಶ ವಿನ್ಯಾಸಕಾರರು, ಪ್ರಸಾದನ ಕಲಾವಿದರು, ಉಗುರು ವಿನ್ಯಾಸಕಾರರು ಜಾಗತಿಕ ಮಟ್ಟದಲ್ಲಿ ಬೇಡಿಕೆಯನ್ನು ಇಂಜಿನಿಯರ್ ಗಳ ರೀತಿಯಲ್ಲಿ ಪೂರೈಸಲಿದ್ದಾರೆ. ಇಂತಹ ವಿನ್ಯಾಸಕಾರರಿಗೆ ನಮ್ಮ ಸಂಸ್ಥೆಯು ಸೂಕ್ತ ತರಬೇತಿಗಳನ್ನು ನೀಡಲಿದೆ’’ ಎಂದು ತಿಳಿಸಿದರು.

ಆಲ್ ಇಂಡಿಯಾ ಹೇರ್ ಅಂಡ್ ಬ್ಯೂಟಿ ಅಸೋಸಿಯೇಷನ್ ಭಾರತೀಯ ಮತ್ತು ಜಾಗತಿಕ ಮಟ್ಟದ ಸಂಸ್ಥೆಗಳೊಂದಿಗೆ ಸಹಯೋಗ ಮಾಡಿಕೊಂಡಿದೆ. ಅದರಲ್ಲಿ ಪ್ರಮುಖವಾಗಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಮಂಡಳಿ, ಬ್ಯೂಟಿ ಅಂಡ್ ವೆಲ್ ನೆಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್, ಅಂತಾರಾಷ್ಟ್ರೀಯ ಸಂಸ್ಥೆಗಳಾದ ವಿಶ್ವದ ಅತಿ ದೊಡ್ಡ ಕೇಶ ವಿನ್ಯಾಸಕಾರರು ಮತ್ತು ಸೌಂದರ್ಯವರ್ಧಕ ಸಂಸ್ಥೆಯಾದ ಒಎಂಸಿ, ಇನ್ ಸ್ಟಿಟ್ಯೂಟ್ ಆಫ್ ಹೇರ್ ಡ್ರೆಸರ್ಸ್ & ಬ್ಯೂಟಿಶಿಯನ್ಸ್ ಸೇರಿದಂತೆ ಇನ್ನೂ ಹಲವಾರು ಸಂಸ್ಥೆಗಳೊಂದಿಗೆ ಸಹಯೋಗವನ್ನು ಹೊಂದಿದೆ.

ಈ ಮೂಲಕ ಭಾರತದ ಕೇಶ ವಿನ್ಯಾಸ ಮತ್ತು ಪ್ರಸಾದನ ಕ್ಷೇತ್ರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ. ಅಸೋಸಿಯೇಷನ್ ತಳ ಮಟ್ಟದಿಂದ ತರಬೇತಿಯನ್ನು ನೀಡುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಹೋಗುವ ಮುನ್ನ ವಿಶ್ವ ಚಾಂಪಿಯನ್ ಗಳಿಂದ ಹಲವಾರು ಅಂತಾರಾಷ್ಟ್ರೀಯ ತರಬೇತಿಗಳನ್ನು ತನ್ನ ಅಭ್ಯರ್ಥಿಗಳಿಗೆ ನೀಡುತ್ತದೆ. ಸ್ವೀಡನ್, ಚೀನಾ, ಶ್ರೀಲಂಕಾ, ಪೋಲಂಡ್ ಸೇರಿದಂತೆ ಇನ್ನಿತರೆ ದೇಶಗಳ ಪ್ರಸಾದನ ಪರಿಣತರು ಮತ್ತು ಕೇಶ ವಿನ್ಯಾಸಕರನ್ನು ಆಹ್ವಾನಿಸಿ ಭಾರತೀಯ ಅಭ್ಯರ್ಥಿಗಳಿಗೆ ತರಬೇತಿ ಕೊಡಿಸುತ್ತಿದೆ.

ಈ ಸಮಾರಂಭದಲ್ಲಿ ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಅಂಥೋಣಿ ಡೇವಿಡ್, ಖಜಾಂಚಿ ಜಿತೇಂದರ್ ಸೇರಿದಂತೆ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here