ಆಳಂದ: ತಾಲೂಕಿನ ನಿಂಬರ್ಗಾ ಗ್ರಾಮದ SBI ಬ್ಯಾಂಕ್ ಎದುರು ಕ.ರ.ವೇ ನಿಂಬರ್ಗಾ ವಲಯ ಅಧ್ಯಕ್ಷರಾದ ಬಸವರಾಜ ಯಳಸಂಗಿ ನೇತೃತ್ವದಲ್ಲಿ ಕ.ರ.ವೇ ಮಿಂಚಿನ ಪ್ರತಿಭಟನೆ ನಡೆಸಿತು.
ನಿಂಬರ್ಗಾ ಹೋಬಳಿ ಕೇಂದ್ರವಾಗಿದ್ದು,ಸುತ್ತ-ಮುತ್ತಲಿನ ಸುಮಾರು 25 ಗ್ರಾಮದ ಜನರು ನಿಂಬರ್ಗಾ ಗ್ರಾಮದಲ್ಲಿರುವ SBI ಬ್ಯಾಂಕ್ ನಲ್ಲಿ ಖಾತೆಗಳನ್ನು ಹೊಂದಿದ್ದು,ಅವರು ಬ್ಯಾಂಕ್ ಗೆ ಬಂದಾಗ ತಾಸು ಘಂಟೆ ಗಳ ಕಾಲ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ, ಇದಕ್ಕೆ ಕಾರಣ ಅಗತ್ಯಕ್ಕೆ ಬೇಕಾಗುವಷ್ಟು ಸಿಬ್ಬಂದಿಗಳು ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸದೆ ಇರೋದು.ಹಾಗೂ ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸುತ್ತಿಲ್ಲ, ಪರಿಣಾಮವಾಗಿ ಬ್ಯಾಂಕ್ ಗೆ ಬರುವ ಕೂಲಿ ಕಾರ್ಮಿಕರು, ರೈತಾಪಿ ವರ್ಗದ ಜನರಿಗೆ ಸೂಕ್ತ ಮಾಹಿತಿ ಇಲ್ಲದೆ ಪರದಾಡುವಂತಾಗಿದೆ. ತಾಲೂಕಿನ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕನ್ನಡಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸದೇ ಭಾಷಾ ಸಮಸ್ಯೆ ತಲೆದೂರಿ ಗ್ರಾಹಕರಿಗೆ ಬಹಳಷ್ಟು ತೊಂದರೆ ಉಂಟಾಗಿದೆ.
ಇನ್ನು ರೈತರಿಗೆ ಬೇಕಾಗುವ ಸೌಲಭ್ಯಗಳು ತ್ವರಿತ ಗತಿಯಲ್ಲಿ ಸಿಗುತ್ತಿಲ್ಲ,ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಪಾಸ್ಬುಕ್ ಪ್ರಿಂಟ್ ಮಷಿನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಬ್ಯಾಂಕ್ ಮ್ಯಾನೇಜರ್ಗೆ ಮನವಿ ಸಲ್ಲಿಸಿದರು. ಸಮಸ್ಯೆ ಬಗೆಹರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಿಂಬರ್ಗಾ ವಲಯ ಕ.ರ.ವೇ ಅಧ್ಯಕ್ಷರಾದ ಬಸವರಾಜ ಯಳಸಂಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಯುವ ಘಟಕ ಅಧ್ಯಕ್ಷ ಪ್ರವೀಣ್ ಮಿಟೆಕಾರ, ವಿದ್ಯಾರ್ಥಿ ಘಟಕ ಅಧ್ಯಕ್ಷ ಈರಣ್ಣ ಶರಣ,ಪ್ರ.ಕಾರ್ಯದರ್ಶಿ ಮಲ್ಲಿನಾಥ ನಾಟಿಕಾರ, ಉಪಾಧ್ಯಕ್ಷ ಮಹಾದೇವ ಮಿಟೆಕಾರ, ಮಡಿವಾಳಪ್ಪ ಮಡಿವಾಳ, ಹಿತ್ತಲಶಿರೂರ ಕ.ರ.ವೇ ಅಧ್ಯಕ್ಷ ಚಂದ್ರಕಾಂತ ಅವಟೆ,ಕಲ್ಯಾಣಿ ಪೂಜಾರಿ, ಕಲ್ಲಿನಾಥ,ಸಂತೋಷಕುಮಾರ್, ಅಣ್ಣಾರಾವ ಪಾಟೀಲ್, ಯಲ್ಲಪ್ಪ ಕಟ್ಟಿಮನಿ, ಕ್ಷೆಮಲಿಂಗ ಕಂಭಾರ, ಅನಿಲ್ ಕುಮಾರ್ ಸ್ವಾಮಿ, ಮಲ್ಲಿಕಾರ್ಜುನ ಕೊರೆ,ಸಚಿನ್ ಕುಮಾರ್ ಶೀಲವಂತ,ವಿನೋದ್ ಕುಮಾರ್ ಗಣೆಚಾರಿ, ರಾಜಕುಮಾರ್ ಮಡಿವಾಳ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು