ಸುರಪುರ: ತಾಲೂಕಿನ ಗೊಲ್ಲ ಸಮುದಾಯದ ಅನೇಕ ಮುಖಂಡರು ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರನ್ನು ಭೇಟಿ ಮಾಡಿ ಗೊಲ್ಲ ಅಭಿವೃಧ್ಧಿ ನಿಗಮವನ್ನು ಸ್ಥಾಪಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೊಲ್ಲ ಸಮುದಾಯದ ಮುಖಂಡ ಚಂದಪ್ಪ ಯಾದವ ಮಾತನಾಡಿ,ಸರಕಾರ ಮೊದಲು ಗೊಲ್ಲ ಅಭಿವೃಧ್ಧಿ ನಿಗಮ ಎಂದು ಘೋಷಣೆ ಮಾಡಿ ನಂತರ ಅದನ್ನು ಕಾಡು ಗೊಲ್ಲ ಅಭಿವೃಧ್ಧಿ ನಿಗಮ ಎಂದು ಮಾಡಿದೆ.ಇದರಿಂದ ರಾಜ್ಯದಲ್ಲಿರುವ ಇತರೆ ಗೊಲ್ಲ ಸಮುದಾಯಗಳ ಅಭಿವೃಧ್ಧಿಗೆ ದೊಡ್ಡ ಪೆಟ್ಟು ಬೀಳಲಿದೆ.ರಾಜ್ಯದಲ್ಲಿ ಗೊಲ್ಲ ಸಮುದಾಯದಲ್ಲಿ ೨೮ ಪಂಗಡಗಳಿದ್ದು ಒಟ್ಟು ೪೫ ಜನಸಂಖ್ಯೆ ಇದೆ.ಆದರೆ ಸರಕಾರ ಕೇವಲ ಕಾಡುಗೊಲ್ಲ ಅಭಿವೃಧ್ಧಿ ನಿಗಮ ಮಾಡುವ ಮೂಲಕ ಇನ್ನುಳಿದ ೨೭ ಗೊಲ್ಲ ಪಂಗಡಗಳಿಗೆ ಅನ್ಯಾಯ ಮಾಡುತ್ತಿದೆ.ಆದ್ದರಿಂದ ಮೊದಲಿನಂತೆ ಗೊಲ್ಲ ಅಭಿವೃಧ್ಧಿ ನಿಗಮವೆಂದೇ ಘೋಷಣೆ ಮಾಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಶಾಸಕರ ಮೂಲಕ ಸಲ್ಲಿಸಿದರು.ಮನವಿ ಸ್ವೀಕರಿಸಿದ ಶಾಸಕ ರಾಜುಗೌಡ ಅವರು ಮಾತನಾಡಿ,ನಿಮ್ಮ ಬೇಡಿಕೆಯು ನ್ಯಾಯಯುತವಾಗಿದೆ.ನಿಮ್ಮ ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮನವರಿಕೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗೊಲ್ಲ ಸಮುದಾಯದ ಮುಖಂಡರಾದ ಭೀಮಣ್ಣ ಅಮ್ಮಾಪುರ ನಿಂಗಪ್ಪ ದೇವಿಕೇರಾ ಸೇರಿದಂತೆ ಅನೇಕರಿದ್ದರು.