ಸುರಪುರ: ಭಾರತೀಯ ಜನತಾ ಪಕ್ಷದ ಯಾದಗಿರಿ ಜಿಲ್ಲಾ ಕಾಯ್ದರ್ಶಿಯನ್ನಾಗಿ ಉತ್ಸಾಹಿ ಯುವ ಮುಖಂಡ ರಮೇಶಗೌಡ ಗುತ್ತೇದಾರ ಅವರನ್ನು ನೇಮಿಸಲಾಗಿದೆ.
ಈ ಕುರಿತು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ ಬೋಳಾರ ಆದೇಶ ಹೊರಡಿಸಿದ್ದು, ಜಿಲ್ಲಾ ಕಾರ್ಯದರ್ಶಿಗಳಾದ ತಾವು ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಯುವ ಕಾರ್ಯಕರ್ತರನ್ನು ಪಕ್ಷಕ್ಕೆ ತಂದು ಸಂಘಟಿಸುವ ಜೊತೆಗೆ ಸಕ್ರೀಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತರ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಈ ಕುರಿತು ರಮೇಶಗೌಡ ಹೇಳಿಕೆ ನೀಡಿದ್ದು ಅನೇಕ ವರ್ಷಗಳಿಂದ ಪಕ್ಷದಲ್ಲಿ ದುಡಿದ ನನ್ನನ್ನು ಗುರುತಿಸಿ ಜಿಲ್ಲಾ ಕಾರ್ಯದರ್ಶಿ ಹುದ್ದೆಗೆ ನೇಮಕಗೊಳಿಸಲು ಕಾರಣಿಭೂತರಾದ ನಮ್ಮ ನೆಚ್ಚಿನ ನಾಯಕರಾದ ಶಾಸಕರು ಹಾಗು ಕರ್ನಾಟಕ ಕುಡಿಯುವ ನೀರು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷರಾದ ನರಸಿಂಹ ನಾಯಕ (ರಾಜುಗೌಡ) ಅವರಿಗೆ ಹಾಗು ಜಿಲ್ಲಾಧ್ಯಕ್ಷರಾದ ಮೌನೇಶ ಬೇಳಾರ ಹಾಗು ಎಲ್ಲಾ ಮುಖಂಡರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.