ಸುರಪುರ: ಕರ್ನಾಟಕದಲ್ಲಿನ ಎಲ್ಲಾ ಟೈಲರ್‌ಗಳ ಅಭಿವೃಧ್ಧಿಗಾಗಿ ಟೈಲರ್ ಕಲ್ಯಾಣ ಮಂಡಳಿ ಆರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಟೈಲರ್ ಮತ್ತು ಸಹಾಯಕರ ಫೆಡರೇಷನ್ ಸುರಪುರ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಅನೇಕ ಜನ ಟೈಲರ್‌ಗಳ ಪ್ರತಿಭಟನೆಯ ನೇತೃತ್ವವಹಿಸಿದ್ದ ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ಮಾತನಾಡಿ,ರಾಜ್ಯದಲ್ಲಿ ಸುಮಾರು ೨೦ ಲಕ್ಷದಷ್ಟು ಟೈಲರ್‌ಗಳಿದ್ದು ಅನೇಕರು ಗಾರ್ಮೆಂಟ್ ಮತ್ತು ಹೊರಗಡೆ ಟೈಲರ್ ವೃತ್ತಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದ ಈ ಎಲ್ಲಾ ಟೈಲರ್‌ಗಳಿಗೆ ಕಳೆದ ಆರು ತಿಂಗಳಿಂದ ಸರಿಯಾದ ಕೆಲಸವಿಲ್ಲದೆ ಜೀವನ ನಡೆಸಲಾಗದ ಸ್ಥಿತಿಗೆ ತಲುಪಿದ್ದಾರೆ.ಆದ್ದರಿಂದ ಈ ಎಲ್ಲಾ ಟೈಲರ್ ವೃತ್ತಿನಿರತರನ್ನು ಅಸಂಘಟಿತ ಕಾರ್ಮಿಕರಂತೆ ಇವರನ್ನು ಕಾರ್ಮಿಕರೆಂದು ಪರಿಗಣಿಸಿ ಟೈಲರ್‌ಗಳ ಅಭಿವೃಧ್ಧಿಗಾಗಿ ಟೈಲರ್ ಕಲ್ಯಾಣ ಮಂಡಳಿ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷೆ ಕಮಲ ಪಾಡಿಮುಖಿ ಗೌರವಾಧ್ಯಕ್ಷೆ ಸಾವಿತ್ರೆಮ್ಮ ಚಿಲ್ಲಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಯ ಭಜಂತ್ರಿ ಶಕ್ತಿತಾಯಿ ಚಿಲ್ಲಾಳ ನೀಲಮ್ಮ ಪಾಡುಮುಖಿ ವಿಜಯಲಕ್ಷ್ಮೀ ಲೋಳಕರ್ ಅನಿತಾ ಟೊಣಪೆ ನಿರ್ಮಲಾ ಪಿರಂಗಿ ಗೀತಾ ಟೊಣಪೆ ನೀಲಮ್ಮ ಚಿಲ್ಲಾಳ ಮೀರಾಬಾಯಿ ಸೇರಿದಂತೆ ಅನೇಕರಿದ್ದರು.